ಬೆಂಗಳೂರು: ವಿಶ್ವದ ಅತಿ ದೊಡ್ಡ ಅಡುಗೆ ಚಾಂಪಿಯನ್‍ಶಿಪ್ ‘ಯಂಗ್ ಶೆಫ್ ಒಲಂಪಿಯಾಡ್ 2020’ಯ ಆತಿಥ್ಯ ವಹಿಸಲು ಸಿಲಿಕಾನ್ ಸಿಟಿ ಸಿದ್ಧವಾಗಿದೆ.
ವಿಶ್ವದ 55 ದೇಶದ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗಿಯಾಗಲಿದ್ದಾರೆ. ಹಾಗೆಯೇ 20 ದೇಶದ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ಅಡುಗೆ ಸ್ಪರ್ಧೆಗಳು ನಡೆಯಲಿದೆ. ಹೋಟಲ್ ಮ್ಯಾನೆಜ್‍ಮೆಂಟ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ಸ್ಪರ್ಧೆಯನ್ನ ಆಯೋಜನೆ ಮಾಡಲಾಗುತ್ತೆ.
Advertisement
Advertisement
ವಿದ್ಯಾರ್ಥಿಗಳು ತಮ್ಮ ಸ್ವಂತಿಕೆ ಬಳಸಿಕೊಂಡು ಹೇಗೆ ಅಡುಗೆ ತಯಾರಿಸುತ್ತಾರೆ ಮತ್ತು ಅದನ್ನ ಹೇಗೆ ಪ್ರಸ್ತುತ ಪಡಿಸುತ್ತಾರೆ ಅನ್ನೋದು ಈ ಸ್ಪರ್ಧೆಯ ಮುಖ್ಯ ವಿಷಯವಾಗಿದೆ. ಫೇಬ್ರವರಿ 1ರಿಂದ ಈ ‘ಯೆಂಗ್ ಶೆಫ್ ಒಲಂಪಿಯಾಡ್ 2020’ರ ಸ್ಪರ್ಧೆಗಳು ಆರಂಭವಾಗಲಿದ್ದು, ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ವೇದಿಕೆ ಸಿದ್ದವಾಗಲಿದೆ. ಬೆಂಗಳೂರಿನಲ್ಲಿ ಅಡುಗೆ ಮಾಡಿ ಭೇಷ್ ಎನಿಸಿಕೊಂಡು ಆಯ್ಕಯಾಗುವ ವಿದ್ಯಾರ್ಥಿಗಳಿಗೆ ಕೊಲ್ಕತ್ತಾದಲ್ಲಿ ಫೈನಲ್ ಸ್ಪರ್ಧೆ ನಡೆಯಲಿದೆ.