ಹುಬ್ಬಳ್ಳಿ: ಪೊಲೀಸರು ನಗರದಲ್ಲಿ ನಡೆಯುವ ಅನ್ಯಾಯ ಅಕ್ರಮವನ್ನು ಶೀಘ್ರವಾಗಿ ತಡೆಯಲಿ ಎಂಬ ನಿಟ್ಟಿನಲ್ಲಿ ಸರ್ಕಾರ (Government) ಕೋಟಿ ಕೋಟಿ ಖರ್ಚು ಮಾಡಿ ವಾಹನಗಳನ್ನು ನೀಡುತ್ತದೆ. ಆದರೆ ಹುಬ್ಬಳ್ಳಿ ಟೌನ್ ಠಾಣೆಯ ಪೋಲಿಸರಿಗೆ ಕಾರ್ ಕೊಟ್ಟಿದ್ದು ಗಸ್ತು ತಿರುಗೋದಕ್ಕೋ ಅಥವಾ ಶೋಕಿ ಮಾಡೋದಕ್ಕೋ ಅಂತ ಪ್ರಶ್ನೆ ಮಾಡುವಂತಾಗಿದೆ.
ಕಣ್ಣಮುಂದೆ ಅನ್ಯಾಯ ನಡೆಯುತ್ತಿದ್ದರೂ 112 ವಾಹನದಲ್ಲಿ ಪೊಲೀಸರು ಬೆಚ್ಚಗೆ ಕುಳಿತುಕೊಂಡಿರುವ ವೀಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. 112 ಪೊಲೀಸ್ (Police) ಜೀಪ್ ಸಮೀಪದಲ್ಲಿನ ಪಾನ್ ಶಾಪ್ ನಲ್ಲಿ ಹಾಡಹಗಲೇ ಕಳ್ಳತನ (Theft) ವಾಗಿದ್ದರೂ ಸಿಬ್ಬಂದಿ ಗಮನಿಸಲೇ ಇಲ್ಲ. ಅದೇ ಕಳ್ಳ ಕಳ್ಳತನ ಮಾಡಿ ತಗ್ಲಾಕ್ಕೊಂಡಾದ ನಡುರಸ್ತೆಯಲ್ಲಿ ಜನ ಹಿಗ್ಗಾಮುಗ್ಗ ಥಳಿಸಿದರೂ ಪಕ್ಕದಲ್ಲಿಯೇ ಇದ್ದ ಪೊಲೀಸರು ಕ್ಯಾರೇ ಎಂದಿಲ್ಲ.
ಟೀ ಕೊಡುವ ನೆಪದಲ್ಲಿ ಪಾನ್ ಶಾಪ್ (Pan Shop) ಗಲ್ಲಾ ಪೆಟ್ಟಿಗೆಯಿಂದ ಯುವಕನೋರ್ವ ಸಾವಿರಾರು ರೂಪಾಯಿ ಕಳ್ಳತ ಮಾಡಿ ತಗ್ಲಾಕೊಂಡಿದ್ದಾನೆ. ಇದರಿಂದಾಗಿ ಶಾಪ್ ಮಾಲಿಕ ಮತ್ತು ಜನ ಯುವಕನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ಘಟನೆ ತಮ್ಮ ಕಣ್ಣಮುಂದೆ ನಡೆಯುತ್ತಿದ್ದರೂ ಪೊಲೀಸರು ಮಾತ್ರ ತಲೆ ಕೆಡಿಸಿಕೊಂಡಿಲ್ಲ. ಇದನ್ನೂ ಓದಿ: ವಾಪಸ್ ಮನೆಗೆ ಬರ್ತಿಯೋ, ಇಲ್ಲವೋ ಅಂತ ತವರು ಸೇರಿದ ಪತ್ನಿ ಮೇಲೆ ಪತಿ ಫೈರಿಂಗ್!
ಇದೀಗ ಹುಬ್ಬಳ್ಳಿ ಟೌನ್ ಪೊಲೀಸ್ ಠಾಣೆಯ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಜನ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದನ್ನೂ ಓದಿ: ಪರೀಕ್ಷೆ ನಿಲ್ಲಿಸಲು ಶಾಲೆಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ ವಿದ್ಯಾರ್ಥಿ