ಮಂಡ್ಯ: ರೌಡಿಸಂ ಫಿಲ್ಡ್ ನಲ್ಲಿ ಹವಾ ತೋರಿಸಲು ಮಾಡಲು ಪದೇ ಪದೇ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಳ್ಳುತ್ತಿದ್ದ ರೌಡಿಶೀಟರ್ ಗಳನ್ನು ಇದೀಗ ರಕ್ಷಿತ್ ಎಂಬ 21 ವರ್ಷದ ರೌಡಿಶೀಟರ್ ನನ್ನು ಕೊಲೆ ಮಾಡಿದ್ದ ಆರೋಪದ ಮೇಲೆ ನಾಲ್ವರನ್ನು ಮಂಡ್ಯ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ತಾಲೂಕಿನ ಯಲಿಯೂರು ಗ್ರಾಮದ ರಕ್ಷಿತ್ ಎಂಬ ರೌಡಿ ಶೀಟರ್ ಡಿಸೆಂಬರ್ 18ರ ರಾತ್ರಿ ಮಂಡ್ಯದ ಕಲ್ಲಹಳ್ಳಿ ರೈಲ್ವೆ ಟ್ರಾಕ್ ಬಳಿ ಕೊಲೆಯಾಗಿದ್ದನು. ಅಂದು ಇಡೀ ದಿನ ತನ್ನ ಸ್ನೇಹಿತರೊಂದಿಗೆ ರಕ್ಷಿತ್ ಪಾರ್ಟಿ ಮಾಡಿದ್ದನು. ಬಳಿಕ ಆತನ ಸ್ನೇಹಿತರಿಂದಲೇ ಕೊಲೆಯಾಗಿದ್ದನು.
ಈ ಪ್ರಕರಣವನ್ನು ಮಾಡಿಕೊಂಡಿದ್ದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಿಕೊಳ್ಳಲಾಗಿತ್ತು. ಬಳಿಕ ಡಿವೈಎಸ್‍ಪಿ ಮಂಜುನಾಥ್ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಿ ಆರೋಪಿಗಳ ಸೆರೆಗೆ ಬಲೆ ಬೀಸಲಾಗಿತ್ತು. ಇದೀಗ ಹೊಳಲು ಗ್ರಾಮದ ಜಟ್ಟಿ ಮಾದೇಶ, ಕಾಶಿ, ಮಂಜು, ಕಾರ್ತಿಕ್ ಎಂಬವರು ಕೊಲೆಯಲ್ಲಿ ಭಾಗಿಯಾಗಿರುವುದು ತಿಳಿದಿದೆ. ಹೀಗಾಗಿ ಈ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಈ ಪ್ರಕರಣದಲ್ಲಿ ಎ1 ಆರೋಪಿಯಾದ ಸಂಜು ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಬುದ್ಧಿ ಚುರುಕಾಗುತ್ತೆಂದು 70ರ ವೃದ್ಧನ ಮೆದುಳು, ಅಂಗಾಂಗಗಳನ್ನೇ ಕಿತ್ತು ತಿಂದ!
ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ರೌಡಿಸಂನಲ್ಲಿ ಹವಾ ಮೈಂಟೇನ್ ಮಾಡಲು ಪದೇ ಪದೇ ಕ್ಷುಲ್ಲಕ ಕಾರಣಕ್ಕೆ ಜಗಳ ಆಗುತ್ತಿತ್ತು. ಇದಲ್ಲದೇ ಕೊಲೆಯಾದ ದಿನ ರಕ್ಷಿತ್, ಸಂಜು ಚಿಕ್ಕಪ್ಪನ ಮಗನಿಗೆ ಹೊಡೆದಿದ್ದಾನೆ. ಪಾರ್ಟಿ ಮಾಡುವ ವೇಳೆ ಈ ವಿಚಾರದ ಬಗ್ಗೆ ಪ್ರಸ್ತಾಪವಾಗಿದೆ. ಬಳಿಕ ರಕ್ಷಿತ್ ಅವನಿಗೂ ಹೊಡೆಯುತ್ತೇನೆ, ನಿಂಗೂ ಹೊಡೆಯುತ್ತೇನೆ ಎಂದು ಹೇಳುತ್ತಾ ಡ್ರಾಗನ್‍ನಲ್ಲಿ ಸಂಜುಗೆ ಚುಚ್ಚಲು ಮುಂದಾಗಿದ್ದಾನೆ. ಆಗ ಸಂಜು ಅದರಿಂದ ತಪ್ಪಿಸಿಕೊಂಡಿದ್ದಾನೆ. ಬಳಿಕ ರಕ್ಷಿತ್‍ಗೆ ಎಲ್ಲರೂ ಸೇರಿಕೊಂಡು ಸೇರಿ ಚುಚ್ಚಿ ಕೊಲೆ ಮಾಡಿದ್ದಾರೆ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.