ಬೆಂಗಳೂರು: ಯುವಕನೊಬ್ಬ ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಕಬ್ಬಿಣದ ಸರಳುಗಳ ಮೇಲೆ ಬಿದ್ದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಬೆಂಗಳೂರಿನ ಜಯನಗರದ 4 ನೇ ಬ್ಲಾಕ್ ನಲ್ಲಿ ಈ ಘಟನೆ ನಡೆದಿದೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ವೇಳೆ ಯುವಕ ಆಯತಪ್ಪಿ ಕಬ್ಬಿಣದ ಸರಳುಗಳ ಮೇಲೆ ಯುವಕ ಬಿದ್ದಿದ್ದಾನೆ. ಈ ವೇಳೆ ಎರಡು ಕಬ್ಬಿಣದ ಕಂಬಿಗಳು ಹೊಟ್ಟೆಯ ಭಾಗದಿಂದ ತೂರಿ ಬೆನ್ನಿನ ಭಾಗದಿಂದ ಹೊರಕ್ಕೆ ಬಂದಿದೆ. ಅದೇ ಸ್ಥಿತಿಯಲ್ಲಿ ಯುವಕ ಕಬ್ಬಿಣದ ಸರಳುಗಳ ಮೇಲೆ ಸಿಲುಕಿ ಒದ್ದಾಡಿದ್ದಾನೆ.
Advertisement
Advertisement
ಕೂಡಲೇ ವಿಚಾರ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಯುವಕನನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ದೇಹದಲ್ಲಿದ್ದ ಕಬ್ಬಿಣದ ಸರಳುಗಳನ್ನು ಕಟ್ ಮಾಡಿ ಹೊರ ತೆಗೆದಿದ್ದಾರೆ. ಇದನ್ನೂ ಓದಿ: ರಜೆಯಲ್ಲಿದ್ದ ಯೋಧನ ಮನೆಗೆ ನುಗ್ಗಿ ಕಿಡ್ನ್ಯಾಪ್ ಮಾಡಿ ಹತ್ಯೆ
Advertisement
Advertisement
ಸದ್ಯ ಖಾಸಗಿ ಆಸ್ಪತ್ರೆಗೆ ಯುವಕನನ್ನು ದಾಖಲು ಮಾಡಲಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾನೆ. ಜಯನಗರ ಪೊಲೀಸ್ ಠಾಣೆಯಲ್ಲಿ (Jayanagar Police Station) ಪ್ರಕರಣ ದಾಖಲಾಗಿದೆ.
Web Stories