ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರ ವಿರುದ್ಧ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಗರಂ ಆಗಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಡಿ. ಸಾಲುಂಡಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ಸಂದರ್ಭದಲ್ಲಿ ಜಿಟಿಡಿ ಸಿದ್ದು ಅಭಿಮಾನಿಗಳ ವಿರುದ್ಧ ಕಿಡಿಕಾರಿದ್ದಾರೆ.
ಗ್ರಾಮದೊಳಗೆ ದುರ್ವಾಸನೆ ಬರುತ್ತಿದೆ. ಬಂದು ಪರಿಶೀಲಿಸಿ ಎಂದು ಗ್ರಾಮಸ್ಥರು ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಸಚಿವರು, “ನೀವ್ ಏನ್ ನಂಗೆ ವೋಟ್ ಹಾಕಿದ್ದೀರಾ? ನೀವೆಲ್ಲಾ ಸಿದ್ದರಾಮಯ್ಯಗೆ ವೋಟ್ ಹಾಕಿರೋದು. ನಾನ್ಯಾಕೆ ಬಂದ್ ನೋಡಲಿ” ಎಂದು ಗರಂ ಆಗಿ ಉತ್ತರಿಸಿದ್ದಾರೆ. ಆಗ ಜಿಲ್ಲಾ ಪಂಚಾಯ್ತಿ ಸದಸ್ಯ ಬೀರಿಹುಂಡಿ ಬಸವಣ್ಣ ಮತ್ತು ಸಿದ್ದರಾಮಯ್ಯ ಬೆಂಬಲಿಗರ ನಡುವೆ ವಾಗ್ವಾದ ನಡೆದಿದೆ.
Advertisement
Advertisement
ಬಳಿಕ ಜಿ.ಟಿ ದೇವೇಗೌಡ, ನಾನು ಅಧಿಕಾರಿಗಳ ಸಮೇತವಾಗಿ ಬಂದು ನಿಮ್ಮ ಸಮಸ್ಯೆಯನ್ನು ಆಲಿಸುತ್ತೇನೆ. ಈಗ ನಾನು ಕೆಲಸದ ಮೇಲೆ ಹೊರ ಹೋಗುತ್ತಿದ್ದೇನೆ. ಈ ಸಮಸ್ಯೆ ಬಗ್ಗೆಹರಿಸಲು ಮತ್ತೊಂದು ದಿನ ಬರುತ್ತೇನೆ ಎಂದು ಹೇಳಿ ಅಲ್ಲಿಂದ ತೆರಳಿದ್ದಾರೆ.
Advertisement
ಜಿ.ಟಿ ದೇವೇಗೌಡರು ಚಾಮುಂಡೇಶ್ವರಿ ಕ್ಷೇತ್ರದ ಶಾಸಕರು. ಈ ಕ್ಷೇತ್ರದ ನಾಯಕರಾಗಿರುವ ಅವರು ಹೀಗೆ ಹೇಳಿದ್ದು ಎಷ್ಟು ಸರಿ? ಗ್ರಾಮದ ಸಮಸ್ಯೆ ವಿಚಾರದಲ್ಲಿ ರಾಜಕೀಯವನ್ನು ಎಳೆದು ತಂದಿದ್ದು ಎಷ್ಟು ಸರಿ ಎಂದು ಗ್ರಾಮಸ್ಥರು ಈಗ ಮಾತನಾಡಿಕೊಳ್ಳುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv