– ಅಣ್ಣಾವ್ರ ಸಿನಿಮಾ ಸ್ಟೈಲ್ನಲ್ಲಿ ಸಾಂಗ್ ಹಾಡಿ ಪ್ರಯಾಣಿಕರ ಮನಗೆದ್ದ ನಿರ್ವಾಹಕ
– ಬಸ್ಸಿನಲ್ಲಿ ಮಹಿಳೆಯರಿಗೆ ಫ್ರೀ ಎಂಟರ್ಟೈನ್ಮೆಂಟ್
ರಾಯಚೂರು: ʻಯಾರಿಗುಂಟು ಯಾರಿಗಿಲ್ಲ, ಇದು ಸಿದ್ದರಾಮಯ್ಯ ಸರ್ಕಾರದ ಶಕ್ತಿ ಯೋಜನೆ, ಎಲ್ಲಾದರೂ ಇರು.. ಎಂತಾದರೂ ಇರು.. ಎಂದೆಂದಿಗೂ ಬಸ್ಸಿನಲ್ಲಿ ಫ್ರೀ ಆಗಿ ಪ್ರಯಾಣಿಸ್ತಿರು.., ಅಕ್ಕಾ ನೀ, ತಂಗೀ.. ನೀ ಆಧಾರ್ ತೋರಿಸಿದ್ರೆ ಮಾತ್ರ ಉಚಿತ ಟಿಕೆಟ್ ಕೊಡ್ತೀನಿ ನಾನು, ಇದು ಪಕ್ಕಾ ಅಕ್ಕಾ, ನಿಜ ತಾನೆ, ಹೇಳಕ್ಕ…ʼ ಇದು ಆಕಾಶವಾಣಿಯಲ್ಲಿ ಕೇಳಿಬಂದ ಗೀತೆಯಲ್ಲ… ರಾಯಚೂರಿನ ಬಸ್ ಕಂಡಕ್ಟರ್ ಒಬ್ಬರು ಶಕ್ತಿ ಯೋಜನೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಪರಿ ಹೀಗಿತ್ತು.
ರಾಜ್ಯ ಸರ್ಕಾರದ ಶಕ್ತಿ ಯೋಜನೆ (Shakti Scheme) ಎಫೆಕ್ಟ್ ನಿಂದ ರಾಯಚೂರಿನ ಬಸ್ ಕಂಡಕ್ಟರ್ (Bus Conductor) ಒಬ್ಬರು ಸಿಂಗರ್ ಆಗಿದ್ದಾರೆ. ನೂಕು ನುಗ್ಗಲು ಇರುವ ಬಸ್ನಲ್ಲೂ ಕೂಲ್ ಆಗಿ ಡಾ.ರಾಜಕುಮಾರ್ ಸಿನಿಮಾಗಳ (Cinema Songs) ಹಾಡು ಹೇಳುತ್ತಾ ಟೆನ್ಷನ್ ರಿಲೀಫ್ ಮಾಡಿಕೊಂಡು ಪ್ರಯಾಣಿಕರಿಗೆ ಟಿಕೆಟ್ ಕೊಡುತ್ತಿದ್ದಾರೆ.
Advertisement
Advertisement
ರಾಯಚೂರು ಡಿಪೋ ಬಸ್ ಕಂಡಕ್ಟರ್ ಗುರುಲಿಂಗಪ್ಪನಿಂದ ಪ್ರಯಾಣಿಕರಿಗೂ ಮನರಂಜನೆ ಸಿಗುತ್ತಿದೆ. ಡಾ.ರಾಜ್ ಅಪ್ಪಟ ಅಭಿಮಾನಿಯಾಗಿರುವ ಗುರುಲಿಂಗಪ್ಪ ಜನರ ನೂಕುನುಗ್ಗಲು, ಒತ್ತಡದಿಂದ ಹೊರಬರಲು ಅಣ್ಣಾವ್ರ ಹಾಡುಗಳ ಮೊರೆ ಹೋಗಿದ್ದಾರೆ. ಜೊತೆಗೆ ಹಾಡು ಹೇಳಿಕೊಂಡೇ ಶಕ್ತಿ ಯೋಜನೆ ಬಗ್ಗೆಯೂ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇದನ್ನೂ ಓದಿ: ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕೆ ಕರೆಂಟ್ ಕಟ್ – ಬೆಸ್ಕಾಂನಿಂದಲೇ ದಂಡ ವಸೂಲಿ ಮಾಡಿದ ಯುವಕ
Advertisement
Advertisement
ʻಮಹಿಳೆಯರಿಗಾಗಿ ಇರುವ ಉಚಿತ ಯೋಜನೆ ಅವಸರ ಬೇಡʼ ಅಂತಾ ತನ್ನದೇ ಸಾಹಿತ್ಯ ರಚಿಸಿ ರಾಜಕುಮಾರ್ ಸಿನಿಮಾ ಹಾಡುಗಳ ಶೈಲಿಯಲ್ಲೇ ಹಾಡುತ್ತಾ ತನ್ನ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಂಡಕ್ಟರ್ ತಾಳ್ಮೆ ಹಾಗೂ ಕಲೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಲೇಡಿಸ್ ಪಿಜಿಗಳೇ ಟಾರ್ಗೆಟ್ – ಸ್ನಾನ ಮಾಡುವುದನ್ನು ಕದ್ದುಮುಚ್ಚಿ ವೀಡಿಯೋ ಮಾಡುತ್ತಿದ್ದಾಗಲೇ ಕಿರಾತಕ ಲಾಕ್