Connect with us

Latest

ನೀವೆಂದೂ ನೋಡಿರದ ಶ್ರದ್ಧಾಂಜಲಿ ಕಾರ್ಯಕ್ರಮ-ವಿಡಿಯೋ

Published

on

ನವದೆಹಲಿ: ವೃದ್ಧ ದಂಪತಿಯ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಯುವತಿಯನ್ನು ಕರೆಸಿ ಡ್ಯಾನ್ಸ್ ಮಾಡಿಸಿದ ವಿಡಿಯೋವೊಂದು ವೈರಲ್ ಆಗಿದೆ.

ಈ ಘಟನೆ ಎಲ್ಲಿ, ಯಾವಾಗ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಈ ವಿಡಿಯೋ ನೋಡಿದಾಗ ಯುವತಿ ಬಾಲಿವುಡ್ ‘ವಾಂಟೆಡ್’ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದಾಳೆ. ಈ ಸಂದರ್ಭದಲ್ಲಿ ಅಲ್ಲಿದ್ದ ಜನರು ಯುವತಿಯ ಡ್ಯಾನ್ಸ್ ನೋಡಿ ಎಂಜಾಯ್ ಮಾಡಿದ್ದಾರೆ.

ವೇದಿಕೆ ಮೇಲೆ ಯುವತಿ ಡ್ಯಾನ್ಸ್ ಮಾಡುತ್ತಿದ್ದು, ಆಕೆ ಹಿಂದೆಯೇ ವೃದ್ಧ ದಂಪತಿಯ ಶ್ರದ್ಧಾಂಜಲಿ ಪೋಸ್ಟರ್ ಹಾಕಲಾಗಿತ್ತು. ಆ ಬ್ಯಾನರ್ ನೋಡಿದ ಮೇಲೆ ಇದೊಂದು ಶ್ರದ್ಧಾಂಜಲಿ ಕಾರ್ಯಕ್ರಮವಾಗಿದ್ದು, ಯುವತಿ ಅಲ್ಲಿ ಡ್ಯಾನ್ಸ್ ಮಾಡುತ್ತಿದ್ದಳು.

ವಿಡಿಯೋದಲ್ಲಿ ಕೆಲವು ಮಂದಿ ಯುವತಿಯ ಡ್ಯಾನ್ಸ್ ನೋಡುತ್ತಾ ತಿರುಗಾಡುತ್ತಿದ್ದರೆ, ಇನ್ನೂ ಕೆಲವು ಮಂದಿ ಸ್ಟೇಜ್ ಮುಂದೆಯೇ ಚೇರ್ ಹಾಕಿ ಅಲ್ಲಿ ಕುಳಿತುಕೊಂಡು ಡ್ಯಾನ್ಸ್ ವೀಕ್ಷಿಸಿದ್ದಾರೆ. ಈ ವಿಡಿಯೋದಲ್ಲಿ ಬ್ಯಾನರ್ ನಲ್ಲಿರುವ ದಿವಂಗತ ವೃದ್ಧ ದಂಪತಿಯ ಮುಖವೂ ಕಾಣಿಸುತ್ತದೆ.

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಯುವತಿ ಬಾಲಿವುಡ್ ಹಾಡಿಗೆ ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿದ ಜನರು ಪರ ಹಾಗೂ ವಿರುದ್ಧ ಬಗ್ಗೆ ಮಾತನಾಡುತ್ತಿದ್ದಾರೆ.

ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡುವುದಕ್ಕೆ ಜನರು ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸುತ್ತಾರೆ. ಆದರೆ ಈ ಕಾರ್ಯಕ್ರಮದ ಆಯೋಜಕರು ವೇದಿಕೆಯಲ್ಲಿ ಯುವತಿಗೆ ಬಾಲಿವುಡ್ ಹಾಡಿಗೆ ಡ್ಯಾನ್ಸ್ ಮಾಡಿಸಿ ಒಂದು ಹೊಸ ಪರಂಪರೆಯನ್ನು ಶುರು ಮಾಡಿದ್ದಾರೆ. ಈ ವಿಡಿಯೋದಲ್ಲಿ ಯಾರು ಶ್ರದ್ಧಾಂಜಲಿ ಅಥವಾ ಪ್ರಾರ್ಥನೆ ಮಾಡುವುದು ಕಂಡು ಬಂದಿಲ್ಲ. ಆದರೆ ಈ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮದ ಬ್ಯಾನರ್ ಮುಂದೆ ಯುವತಿ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕುತ್ತಿರುವುದು ಮಾತ್ರ ಕಂಡು ಬಂದಿದೆ.

Click to comment

Leave a Reply

Your email address will not be published. Required fields are marked *