ಕೋಲ್ಕತ್ತಾ: ಐಪಿಎಲ್ ಈಗ ವಿಶ್ವದ 2ನೇ ದುಬಾರಿ ಕ್ರೀಡೆಯಾಗಿ ಹೊರಹೊಮ್ಮಿದ್ದು, ಈ ಬಾರಿ ಬಹುತೇಕ ಆಟಗಾರರು ದುಬಾರಿ ಬೆಲೆಗೆ ಬಿಕರಿಯಾಗಿದ್ದಾರೆ. ಕೆಲವರು ರಿಟೈನ್ಡ್ ಪ್ಲೇಯರ್‌ಗಳಾಗಿ ಉಳಿದುಕೊಂಡಿದ್ದಾರೆ.
ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲೇ 18.50 ಕೋಟಿ ರೂ.ಗೆ ಸ್ಯಾಮ್ ಕರ್ರನ್ ಬಿಕರಿಯಾಗಿದ್ದಾರೆ. ಕೆ.ಎಲ್ ರಾಹುಲ್ 17 ಕೋಟಿ ರೂ. ಮೊತ್ತಕ್ಕೆ ಲಕ್ನೋ ತಂಡದಲ್ಲೇ ರಿಟೈನ್ಡ್ ಪ್ಲೇಯರ್‌ಗಳಾಗಿ ಉಳಿದುಕೊಂಡಿದ್ದಾರೆ. ಆದ್ರೆ 2020ರಿಂದ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿರುವ 21 ವರ್ಷದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಈಬಾರಿ 4 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಇದು ಪಾಕಿಸ್ತಾನ ತಂಡ ನಾಯಕ ಬಾಬರ್ ಆಜಂಗಿಂತಲೂ 9 ಪಟ್ಟು ದುಬಾರಿಯಾಗಿದೆ.
Advertisement
Advertisement
ಯಶಸ್ವಿ ಜೈಸ್ವಾಲ್ ಒಂದು ಐಪಿಎಲ್ ಸೀಜನ್‌ನಲ್ಲಿ ಪಡೆಯುತ್ತಿರುವ ಮೊತ್ತವನ್ನ ಬಾಬರ್ ಆಜಂ ಎಲ್ಲಾ ಆವೃತ್ತಿಯ ಕ್ರಿಕೆಟ್ ಮಾದರಿಯಲ್ಲಿ ಆಡಿದರೂ ವಾರ್ಷಿಕವಾಗಿ 9 ಪಟ್ಟು ಕಡಿಮೆ ಪಡೆಯುತ್ತಾರೆ. ಹೌದು 2023ರ ವಾರ್ಷಿಕ ಒಪ್ಪಂದದ ಪ್ರಕಾರ ಬಾಬರ್ ಆಜಂ ವರ್ಷಕ್ಕೆ ಪ್ರತಿ ತಿಂಗಳಿಗೆ 1.25 ಮಿಲಿಯನ್ ಪಾಕಿಸ್ತಾನ ರೂಪಾಯಿ ಅಂದ್ರೆ ಭಾರತ ರೂಪಾಯಿ ಪ್ರಕಾರ ವಾರ್ಷಿಕ 43.50 ಲಕ್ಷ ರೂ. ಪಡೆಯುತ್ತಿದ್ದಾರೆ. ಆದ್ರೆ ಯಶಸ್ವಿ ಜೈಸ್ವಾಲ್ ಒಂದು ಸೀಜನ್‌ನಲ್ಲಿ 4 ಕೋಟಿ ರೂ. ವೇತನ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಕನ್ನಡಿಗ ಕೆ.ಎಲ್ ರಾಹುಲ್ ದಾಖಲೆ ನುಚ್ಚು ನೂರು ಮಾಡಿದ 21ರ ಯುವಕ ಯಶಸ್ವಿ
Advertisement
Advertisement
2020ರ ಸೀಜನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಸೇರ್ಪಡೆಯಾದ ಯಶಸ್ವಿ ಜೈಸ್ವಾಲ್ 2020, 2021ರ ಸೀಜನ್‌ನ 2.4 ಕೋಟಿ ರೂ. ವೇತನ ಪಡೆಯುತ್ತಿದ್ದರು. 2022ರಲ್ಲಿ 4 ಕೋಟಿ ರೂ.ಗೆ ಏರಿಕೆ ಮಾಡಲಾಯ್ತು. 2023ರ ಸೀಜನ್‌ನಲ್ಲೂ ಯಶಸ್ವಿ 4 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಜೈಸ್ವಾಲ್ ಅಬ್ಬರಕ್ಕೆ ಕೋಲ್ಕತ್ತಾ ಧೂಳೀಪಟ – ರಾಜಸ್ಥಾನಕ್ಕೆ 9 ವಿಕೆಟ್‌ಗಳ ಭರ್ಜರಿ ಜಯ
ಈ ಬಾರಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿರುವ ಯಶಸ್ವಿ ಜೈಸ್ವಾಲ್ 500ಕ್ಕೂ ಹೆಚ್ಚು ರನ್ ಗಳಿಸಿರುವ 2ನೇ ಆಟಗಾರ ಎನಿಸಿಕೊಂಡಿದ್ದಾರೆ. 12 ಪಂದ್ಯಗಳಲ್ಲಿ 52.27 ಸರಾಸರಿಯಲ್ಲಿ ಯಶಸ್ವಿ ಜೈಸ್ವಾಲ್ ಬರೋಬ್ಬರಿ 575 ರನ್ ಚಚ್ಚಿದ್ದಾರೆ. ಇದರಲ್ಲಿ 74 ಬೌಂಡರಿ ಹಾಗೂ 26 ಸಿಕ್ಸರ್‌ಗಳೂ ಸೇರಿವೆ. ಆರೆಂಜ್‌ಕ್ಯಾಪ್ ರೇಸ್‌ನ ಅಗ್ರ ಸ್ಥಾನದಲ್ಲಿ ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ 11 ಪಂದ್ಯಗಳಲ್ಲಿ 576 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. 45 ಬೌಂಡರಿ ಹಾಗೂ 32 ಸಿಕ್ಸರ್‌ಗಳೂ ಇದರಲ್ಲಿ ಸೇರಿವೆ.