ಸಿಎಂ ಕಚೇರಿಯಲ್ಲಿ ಕೆಲಸ ಆಗಬೇಕಾದ್ರೆ 30 ಲಕ್ಷ ಲಂಚ ಕೊಡಬೇಕು: ಕುಮಾರಸ್ವಾಮಿ

Public TV
1 Min Read
HD Kumaraswamy 1

ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಕಚೇರಿಯಲ್ಲಿ ಲಂಚ ಕೊಡದೇ ಕೆಲಸ ಆಗೋದಿಲ್ಲ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೊಸ ಬಾಂಬ್ ಸಿಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಿಎಂ ಕಚೇರಿಯಲ್ಲಿ ಲಂಚ ಕೊಡದೇ ಯಾವುದೇ ಕೆಲಸ ಆಗಲ್ಲ. ಶಾಸಕರು ಕೊಟ್ಟ ಪತ್ರ ತೆಗೆದುಕೊಂಡು ಹೋದರು ಕೆಲಸ ಮಾಡಿಕೊಡದೇ ಲಂಚಕ್ಕೆ ಡಿಮ್ಯಾಂಡ್ ಮಾಡುತ್ತಾರೆ ಎಂದು ಆರೋಪ ಹೊರಿಸಿದರು.

Siddaramaiah 9

ಕೇವಲ ಶಾಸಕರ ಪತ್ರ ತೆಗೆದುಕೊಂಡು ಬಂದರೆ ಆಗಲ್ಲ. ಅದರ ಜೊತೆ 30 ಲಕ್ಷ ಹಣ ತರಬೇಕು ಎಂದು ಅಲ್ಲಿನ ಸಿಬ್ಬಂದಿ, ಅಧಿಕಾರಿಗಳು ಡಿಮ್ಯಾಂಡ್ ಮಾಡುತ್ತಾರೆ. 30 ಲಕ್ಷ ಹಣ ತಂದರೆ ಮಾತ್ರ ಕೆಲಸ ಎಂದು ಸಿಎಂ ಕಚೇರಿಯಲ್ಲಿ ಹೇಳುತ್ತಾರೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದಿಂದ ಸಿಂಡಿಕೇಟ್ ವರ್ಗಾವಣೆ ದಂಧೆ: ಕುಮಾರಸ್ವಾಮಿ ಬಾಂಬ್‌

ಯಾವ ಶಾಸಕರ ಪತ್ರ ಅಂತ ಹೇಳದ ಕುಮಾರಸ್ವಾಮಿ ಸಿಎಂ ಕಚೇರಿಯಲ್ಲಿ ಲಂಚ ಕೊಟ್ಟರೆ ಮಾತ್ರ ಕೆಲಸ ಆಗುತ್ತಿದೆ ಎನ್ನೋ ಮೂಲಕ ಮತ್ತೆ ವೈಎಸ್‌ಟಿ ಟ್ಯಾಕ್ಸ್ ಆರೋಪ ಮಾಡಿದರು. ಇದನ್ನೂ ಓದಿ: ಸಿನಿಮಾ ಡೈಲಾಗ್ ಹೊಡೆದುಕೊಂಡ್ರೆ ರಾಜಕಾರಣ ನಡೆಯಲ್ಲ: ಪ್ರದೀಪ್ ಈಶ್ವರ್‌ಗೆ ಸುಧಾಕರ್ ಟಾಂಗ್

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article