ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳನ್ನು ಸರಿ ಮಾಡೋದಕ್ಕೆ ನಿಮಗೆ ತಾಕತ್ತಿಲ್ಲ. ಆದ್ರೆ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಾನೂನು ತರೋದಕ್ಕೆ ಹೊರಟಿದ್ದಾರೆ ಅಂತ ಸಂಸದೆ ಶೋಭಾ ಕರಂದ್ಲಾಜೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ನವ ಕರ್ನಾಟಕ ಪರಿವರ್ತನಾ ಯಾತ್ರೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಈ ವೇಳೆ ಸರ್ಕಾರದ ವಿರುದ್ಧ ಖಾಸಗಿ ಆಸ್ಪತ್ರೆ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಕುರಿತು ಮಾತನಾಡಿದ ಅವರು, ಮೊದಲು ಸರ್ಕಾರಿ ಆಸ್ಪತ್ರೆಗಳನ್ನ ಸರಿ ಮಾಡಿ. ಸಚಿವ ರಮೇಶ್ ಕುಮಾರ್ ಮೇಲೆ ಇದು ಮೂರನೇ ಬಾರಿ ಪ್ರತಿಭಟನೆ ನಡೆಯುತ್ತಿರೋದು. ರೋಗಿಗಳು ಏನ್ ತಪ್ಪು ಮಾಡಿದ್ರು? ಇದು ಸರ್ಕಾರದ ಬೇಜವಾಬ್ದಾರಿ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.
ಬಳಿಕ ಪರಿವರ್ತನಾ ಯಾತ್ರೆಯ ಬಗ್ಗೆ ಮಾತನಾಡಿ, ಪರಿವರ್ತನಾ ಯಾತ್ರೆ ನೋಡಿ ಸಿದ್ದರಾಮಯ್ಯಗೆ ನಡುಕ ಶುರುವಾಗಿದೆ. ನಮ್ಮ ಯಾತ್ರೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಅನುಮತಿ ನೀಡದ ಕಾರಣ ಕೊಡಗಿನ ರ್ಯಾಲಿ ರದ್ದು ಮಾಡಿದ್ದೇವೆ. ಸುಳ್ಯ, ಬಂಟಾಳ್ವ, ಪುತ್ತೂರು ಮುಂತಾದ ಕಡೆಗಳಲ್ಲಿ ನಮ್ಮ ಯಾತ್ರೆಗೆ ಅನುಮತಿ ಕೊಡುತ್ತಿಲ್ಲ. ಒಂದು ವೇಳೆ ಅನುಮತಿ ನೀಡದಿದ್ದರೆ ಸ್ಥಳದಲ್ಲೇ ಬಿಎಸ್‍ವೈ ನೇತೃತ್ವದಲ್ಲಿ ಪ್ರತಿಭಟನೆ ಕೂರುತ್ತೇವೆ ಅಂತ ಹೇಳಿದ್ರು.
ಗುರುವಾರದ ಯಾತ್ರೆಯ ಸಮಾವೇಶ ಯಶಸ್ವಿಯಾಗಿದೆ. ಯಾತ್ರೆ ವಿಫಲ ಆಗಲಿ ಅಂತಾ ಸಿದ್ದರಾಮಯ್ಯ ಸರ್ಕಾರ ಪ್ರಯತ್ನಪಟ್ಟಿತು. ಬೈಕ್ ಜಾಥಾ ತಡೆಯಲು ಎಲ್ಲಾ ಕಡೆ ನಾಕಾಬಂದಿ ಹಾಕಿದ್ರು. ಜಾಥಾ ಸ್ಥಳಕ್ಕೆ ಬಾರಬಾರದು ಅಂತಾ ಟ್ರಾಫಿಕ್ ಪೊಲೀಸರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿರಲಿಲ್ಲ ಅಂತ ಶೋಭಾ ಸಿಡಿಮಿಡಿಗೊಂಡರು.
ಯಡಿಯೂರು ಸಿದ್ದಲಿಂಗೇಶ್ವರನಿಗೆ ಬಿಎಸ್‍ವೈ ಪೂಜೆ – ಕೆಲವೇ ಕ್ಷಣಗಳಲ್ಲಿ 2ನೇ ದಿನದ ಯಾತ್ರೆ https://t.co/OtTY9YjsZc #BSYedyurappa #BJP #ParivarthanaYatre pic.twitter.com/FcRKTpMxhL
— PublicTV (@publictvnews) November 3, 2017
ರಾಜ್ಯಾದ್ಯಂತ ಇಂದು ಖಾಸಗಿ ವೈದ್ಯರ ಮುಷ್ಕರ – ಆರೋಗ್ಯ ಸೇವೆಗಳಲ್ಲಿ ಆಗಲಿದೆ ವ್ಯತ್ಯಯ https://t.co/VNhffxZmDB #PrivateHospitals #Doctors #Protest pic.twitter.com/ooCqSBiSpq
— PublicTV (@publictvnews) November 3, 2017