ಬೆಂಗಳೂರು: ನಿಮಗೆ ಕುರ್ಚಿ ಬೆಲೆ ಗೊತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಂದು ಕುರ್ಚಿ ಪಾಠ ಮಾಡಿದ ಪ್ರಸಂಗ ನಡೆದಿದೆ.
ರಾಜ್ಯಸಭಾ ಸದಸ್ಯ ಡಾ.ಸೈಯದ್ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವಾಗ ಜನ ನಿಂತಿದ್ದರು. ಆಗ ಡಿಕೆಶಿ, ನಿಮಗೆ ಕುರ್ಚಿ (Chair) ಬೆಲೆ ಗೊತ್ತಿಲ್ಲ. ನಮಗೆ ಕುರ್ಚಿ ಸಿಕ್ಕಿದ್ರೆ ಸಾಕು ಅಂತಿದ್ದೀವಿ. ನನಗೆ ಕುರ್ಚಿ ಸಿಗಲಿಲ್ಲ ಅಂತ ಹೊಡೆದಾಡ್ತಿದ್ದೇವೆ. ಇಡೀ ದೇಶದಲ್ಲೇ ಕುರ್ಚಿಗಾಗಿ ಹೋರಾಟ ನಡೆಯುತ್ತಿದೆ. ಕುರ್ಚಿ ಸಿಕ್ಕಾಗ ಕೂತುಬಿಡಿ, ಆಮೇಲೆ ಸಿಗಲ್ಲ. ಸಿಗದಿದ್ರೆ ಅಲ್ಲೇ ಕುಳಿತುಕೊಳ್ಳಿ ಅಂತ ಸೂಚಿಸುವ ಮೂಲಕ ನಗೆ ಚಟಾಕಿ ಹಾರಿಸಿದರು.
Advertisement
Advertisement
ನಾನು ಸನ್ಮಾನ ಕಾರ್ಯಕ್ರಮಕ್ಕೆ ಬರಲಿಲ್ಲ. ನಮಗೆ ಮತ ಕೊಟ್ಟು ಸರ್ಕಾರ ತರಲು ಸಹಾಯ ಮಾಡಿದ ನಿಮಗೆ ಧನ್ಯವಾದ ಹೇಳಲು ಬಂದೆ. ಸರ್ಕಾರ ಮೇ 15 ರಿಂದ ಭಯದ ವಾತಾವರಣದಲ್ಲಿ ಬದುಕುತ್ತಿದೆ. ನಿಮಗೆ ಶಕ್ತಿ ತುಂಬಲು ಬಂದಿದ್ದೇವೆ. ತಾವು ಚಿಂತೆ ಮಾಡಬೇಡಿ. ಸಾವಿರಾರು ಅಮಾಯಕ ಜನರು ಬಿಜೆಪಿ ಅಧಿಕಾರದ ಬಗ್ಗೆ ಪ್ರಸ್ತಾಪ ಮಾಡಿದ್ದೀರಿ. ಕಾನೂನಿನ ಚೌಕಟ್ಟಿನಲ್ಲಿ ಬಡವರಿಗೆ ಕಾರ್ಯಕ್ರಮ ಮಾಡಿದ್ದೇವೆ ಎಂದರು. ಇದನ್ನೂ ಓದಿ: INDIA ಸಂಘಟನೆಯಿಂದ ಬಿಜೆಪಿ ಹೆದರಿದೆ.. ಎರಡು ಮಾತಿಲ್ಲ: ಸ್ವಪಕ್ಷ ವಿರುದ್ಧವೇ ಹೆಚ್.ವಿಶ್ವನಾಥ್ ಹೇಳಿಕೆ
Advertisement
Advertisement
ಕಾನೂನು ಕೈ ತೆಗೆದುಕೊಳ್ಳುವ ಕೆಲಸ ಯಾರು ಮಾಡಬಾರದು.ಕಾನೂನು ಕೈಗೆ ತೆಗೆದುಕೊಳ್ಳದವರನ್ನೂ ಬಂಧಿಸೋ ಕೆಲಸ ಮಾಡಿದ್ದಾರೆ. ಈಗಾಗಲೇ ನಮ್ಮ ಸರ್ಕಾರ ಸೂಚನೆ ಕೊಟ್ಟಿದೆ. ಕೆಲವು ಕೇಸು ಮರು ತನಿಖೆಗೆ ನೀಡಿದ್ದೇವೆ. ನಾವು, ಸಿದ್ದರಾಮಯ್ಯ ತೀರ್ಮಾನ ಮಾಡಿ ನಿಮ್ಮ ಶಾಸಕರನ್ನ ಬದಲಾವಣೆ ಮಾಡಿ ಗೆಲ್ಲಿಸಿದ್ದೇವೆ.ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣವನ್ನು ಡಿಕೆಶಿ ಪ್ರಸ್ತಾಪಿಸಿದರು. ಇದೇ ವೇಳೆ ಪುಲಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ್ ಬದಲಾವಣೆ ಸಮರ್ಥನೆ ಮಾಡಿಕೊಂಡರು.
Web Stories