ಲಾಸ್‍ವೇಗಾಸ್: ಗ್ರಾಹಕರು ಇಷ್ಟ ಪಟ್ಟಾಗ ತನ್ನ ಬಣ್ಣವನ್ನು ಬದಲಿಸುವ ಕಾರನ್ನು ಬಿಎಂಡಬ್ಲ್ಯೂ(BMW)ಅಭಿವೃದ್ಧಿ ಪಡಿಸಿದ್ದು ಸಖತ್ ಸುದ್ದಿಯಲ್ಲಿದೆ.
ಜರ್ಮನಿಯ ಮೂಲದ ಬಿಎಂಡಬ್ಲ್ಯು ಸಂಸ್ಥೆ ಗ್ರಾಹಕರು ಬಯಸಿದಾಗ ಬಣ್ಣ ಬದಲಾಯಿಸುವ ಕಾರೊಂದನ್ನು ಅನಾವರಣ ಮಾಡಿದೆ. ಕೇವಲ ಒಂದು ಬಟನ್ ಒತ್ತುವ ಮೂಲಕ ಕ್ಷಣ ಮಾತ್ರದಲ್ಲಿ ಇಡೀ ಕಾರಿನ ಬಣ್ಣವನ್ನೇ ಬದಲಾಯಿಸಬಹುದಾಗಿದೆ.
This color changing @BMWUSA #iX is wild! It’s apparently very temperature sensitive so they have a backup in a trailer in case this one gets too hot / cold pic.twitter.com/lXG1Gw0IKY
— Out of Spec Studios (@Out_of_Spec) January 4, 2022
ಲಾಸ್‍ವೇಗಾಸ್‍ನಲ್ಲಿ ನಡೆದ ಕಾರ್ಯಕ್ರಮವೊಂದರ ವೇಳೆ ಈ ಕಾರನ್ನು ಪರಿಚಯಿಸಲಾಗಿದೆ. ಈ ತಂತ್ರಜ್ಞಾನ ಹೊಂದಿದ ವಿಶ್ವದ ಮೊದಲ ಕಾರು ಇದಾಗಿದೆ. ಆದರೆ ಮಾರುಕಟ್ಟೆಗೆ ಬಿಡುಗಡೆ ಮಾಡುವ ಕುರಿತು ಯಾವುದೇ ಮಾಹಿತಿ ಇಲ್ಲ.
— IGN (@IGN) January 5, 2022
ಲಾಭವೇನು?: ಹವಾಮಾನಕ್ಕೆ ಅನುಗುಣವಾಗಿ ಬಣ್ಣ ಬದಲಾಯಿಸಿದರೆ ಕಾರು ಹೆಚ್ಚು ಉಷ್ಣತೆ ಹೀರುವುದನ್ನು ತಡೆಯಬಹುದಾಗಿದೆ. ಇದರಿಂದ ಇಂಧನ ಅಥವಾ ವಿದ್ಯುತ್ ಬಳಕೆ ಕಡಿಮೆಯಾಗಲಿದೆ. ಇದನ್ನೂ ಓದಿ: ವಧು ಬೇಕಾಗಿದ್ದಾಳೆ- ರಸ್ತೆ ಬದಿ ಜಾಹೀರಾತು ಹಾಕಿದ ವರ
ಬಿಎಂಡಬ್ಲ್ಯು ಐಎಕ್ಸ್ ಕಾರಿನ ಮೇಲ್ಭಾಗವು ಇ-ಇಂಕ್ಸ್ ಎಲೆಕ್ಟ್ರಾನಿಕ್ ಪೇಪರ್ ಡಿಸ್ಪ್ಲ್ಯೆ ತಂತ್ರಜ್ಞಾನವನ್ನು ಒಳಗೊಂಡಿದ್ದು, ಅದು ಸಣ್ಣದಾದ ಬಣ್ಣದ ಶಾಯಿಯ ಮೈಕ್ರೋ ಕ್ಯಾಪ್ಸೂಲ್ಸ್‌ಗಳನ್ನು ಒಳಗೊಂಡಿದೆ. ಕಾರಿನ ಮೇಲ್ಮೈ ಬಣ್ಣದ ಬದಲಾವಣೆಗೆ ಸಹಕಾರಿಯಾಗಲಿದೆ.