-
ಮೇ 20ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ
ನವದೆಹಲಿ: ಒಂದು ವೇಳೆ ಮಧ್ಯಂತರ ಜಾಮೀನು (Interim Bail) ನೀಡಿದರೆ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಮುಖ್ಯಮಂತ್ರಿಯಾಗಿ ಯಾವುದೇ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ (Supreme Court) ಹೇಳಿದೆ.
ಈ ಮೂಲಕ ಹೊಸ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ (Judicial Custody) ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು.
Advertisement
ನ್ಯಾ. ಸಂಜೀವ್ ಖನ್ನಾ ನೇತೃತ್ವದ ದ್ವಿಸದಸ್ಯ ಪೀಠ, ಲೋಕಸಭಾ ಚುನಾವಣೆ (Lok Sabha Election) ಹಿನ್ನಲೆ ನಾವು ನಿಮ್ಮ ಮಧ್ಯಂತರ ಜಾಮೀನು ಅರ್ಜಿಯನ್ನು ಪರಿಗಣಿಸುತ್ತಿದ್ದೇವೆ. ಚುನಾವಣೆ ಇಲ್ಲದಿದ್ದರೆ ನಾವು ಪರಿಗಣಿಸುತ್ತಿರಲಿಲ್ಲ ಎಂದು ಹೇಳಿತು. ಇದನ್ನೂ ಓದಿ: ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್ ವಕ್ತಾರೆ ರಾಧಿಕಾ ಖೇರಾ
Advertisement
Advertisement
ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮಧ್ಯಂತರ ಜಾಮೀನು ಅರ್ಜಿ ನೀಡುವುದನ್ನು ತೀವ್ರವಾಗಿ ವಿರೋಧಿಸಿದರು. ದಯವಿಟ್ಟು ರಾಜಕೀಯ ನಾಯಕನನ್ನು ಪ್ರತ್ಯೇಕ ವರ್ಗ ಎಂದು ಗುರುತಿಸಬೇಡಿ ಮತ್ತು ಅವರನ್ನು ಸಾಮಾನ್ಯರಿಂದ ಬೇರ್ಪಡಿಸಬೇಡಿ. 1.5 ವರ್ಷಗಳಲ್ಲಿ ಇಡಿ ಏನನ್ನೂ ಮಾಡಿಲ್ಲ. ಚುನಾವಣೆಯ ಸಮಯದಲ್ಲಿ ಅವರನ್ನು ಬಂಧಿಸಿದೆ ಎನ್ನುವ ಅಭಿಪ್ರಾಯ ಇದೆ. ಇದು ಸರಿಯಾದ ಅಭಿಪ್ರಾಯವಲ್ಲ ಎಂದು ಅವರು ಹೇಳಿದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ನಿಷ್ಪ್ರಯೋಜಕ- SP ನಾಯಕ ವಿವಾದಾತ್ಮಕ ಹೇಳಿಕೆ
Advertisement
ಚುನಾವಣೆಗಳನ್ನು ಉಲ್ಲೇಖಿಸಿ ಕೇಜ್ರಿವಾಲ್ ಜಾಮೀನು ನೀಡಿವುದು ಕೆಟ್ಟ ಸಂಪ್ರದಾಯ. ಒಂದು ವೇಳೆ ನೀಡಿದರೆ ಇತರರು ಇದೇ ರೀತಿಯ ವಿನಾಯಿತಿಗಳನ್ನು ಬಯಸುತ್ತಾರೆ. ಆದಾಗ್ಯೂ ರಾಜಕಾರಣಿಗಳಿಗೆ ಯಾವುದೇ ವಿಶೇಷ ವಿನಾಯಿತಿಯನ್ನು ರಚಿಸುತ್ತಿಲ್ಲ. ಆದರೆ ಸಾರ್ವತ್ರಿಕ ಚುನಾವಣೆಗಳು ಬಾಕಿಯಿದೆ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡು ಆದೇಶವನ್ನು ನೀಡುತ್ತಿದೆ ಎಂದು ನ್ಯಾಯಾಲಯ ಹೇಳಿತು.
ಈ ನಡುವೆ ಕೇಜ್ರಿವಾಲ್ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ಪ್ರಶ್ನಿಸಿದ ಪೀಠ, ಚುನಾವಣೆಗಳ ಹಿನ್ನೆಲೆಯಲ್ಲಿ ನಾವು ಮಧ್ಯಂತರ ಜಾಮೀನು ನೀಡುತ್ತೇವೆ ಎಂದಿಟ್ಟುಕೊಳ್ಳಿ. ನಂತರ ನೀವು ಕಚೇರಿಗೆ ಹಾಜರಾದರೆ ಘರ್ಷಣೆಗೆ ದಾರಿ ಮಾಡಿಕೊಡುತ್ತದೆ. ಸರ್ಕಾರದ ಕೆಲಸದಲ್ಲಿ ಹಸ್ತಕ್ಷೇಪ ಮಾಡಲು ನಾವು ಬಯಸುವುದಿಲ್ಲ. ಮಧ್ಯಂತಜಾಮೀನು ನೀಡಬೇಕೇ ಬೇಡವೇ ಎನ್ನುವುದು ಪರಿಶೀಲಿಸಲಿದ್ದೇವೆ. ಮೇ 9 ಅಥವಾ ಮುಂದಿನ ವಾರ ಮತ್ತೆ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ತಿಳಿಸಿ ವಿಚಾರಣೆಯನ್ನು ಮುಂದೂಡಿತು.
ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ಮೇ 20ರವರೆಗೆ ವಿಸ್ತರಿಸಿ ಆದೇಶಿಸಿದೆ.