ಮಂಡ್ಯ: ಒತ್ತುವರಿಯಾಗಿದ್ದ ಕೆರೆ ಜಾಗವನ್ನು ಸ್ವತಃ ರೈತರೇ ಮುಂದೆ ನಿಂತು ತಾಲೂಕು ಆಡಳಿತದೊಂದಿಗೆ ಸೇರಿ ತೆರವುಗೊಳಿಸುವ ಮೂಲಕ ಮಾದರಿಯಾದ ಘಟನೆ ಮಂಡ್ಯ ತಾಲೂಕಿನ ಟಿ.ಮಲ್ಲಿಗೆರೆ ಗ್ರಾಮದ ರೈತರು ಇಂತಹದೊಂದು ಕೆಲಸದಲ್ಲಿ ಭಾಗಿಯಾಗಿದ್ದಾರೆ.
Advertisement
ಗ್ರಾಮದಲ್ಲಿ ಸುಮಾರು 13.10 ಎಕರೆ ವಿಸ್ತಿರ್ಣದ ಕೆರೆ ಇತ್ತು. ಆದ್ರೆ ರೈತರು ಈ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರು. ಇದ್ರಿಂದಾಗಿ ಹೂಳು ತುಂಬಿಕೊಂಡು ಕೆರೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಕೆರೆ ಪುನಶ್ಚೇತನಕ್ಕೆ ಒತ್ತಾಯಿಸಿ ತಹಸೀಲ್ದಾರ್ ಮಾರುತಿ ಪ್ರಸನ್ನ ಅವ್ರಿಗೆ ಮನವಿ ಸಲ್ಲಿಸಿದ್ರು.
Advertisement
Advertisement
ಆದರೆ ಕೆರೆಯ ಬಳಿ ಬಂದು ಪರಿಶೀಲಿಸಿದಾಗ ಅಧಿಕಾರಿಗಳಿಗೆ ಶಾಕ್ ಕಾದಿತ್ತು ಯಾಕಂದ್ರೆ ಕೆರೆ ಸಂಪೂರ್ಣ ಒತ್ತುವರಿಯಾಗಿದ್ದು ಅದನ್ನ ರೈತರಿಂದ ಹೇಗಪ್ಪ ಬಿಡಿಸುವುದು ಅನ್ನೋದು ಅಧಿಕಾರಿಗಳಿಗೆ ತಲೆ ನೋವಾಗಿತ್ತು. ಆದರೆ ಇದಕ್ಕೆ ಆಸ್ಪದ ಕೊಡದ ರೈತರು ನೀವು ಕೆರೆ ಗಡಿ ಗೊತ್ತು ಮಾಡಿ ಜಾಗ ಖಾಲಿ ಮಾಡಿ ಅನ್ನಿ ಸಾಕು. ನಾವು ಮರು ಮಾತನಾಡದೇ ತಾತ ಮುತ್ತಾಂದಿರ ಕಾಲದಿಂದ ಉಳುಮೆ ಮಾಡುತ್ತಿದ್ದ ಜಾಗ ಖಾಲಿ ಮಾಡ್ತೀವಿ ಎಂದು ಹೇಳಿದ್ದರು.
Advertisement
ಕೊಟ್ಟ ಮಾತಿನಂತೆ ಕೆರೆ ಒತ್ತವರಿ ಮಾಡಿಕೊಂಡಿದ್ದವರೇ ಜಾಗ ತೆರವು ಮಾಡಿ ಕೆರೆ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ಇದರಿಂದ ತಹಶಿಲ್ದಾರ್ ಮಾರುತಿ ಪ್ರಸನ್ನ ಒತ್ತುವರಿ ಕಾರ್ಯ ಆರಂಭಿಸುವ ಮುನ್ನ ರೈತರಿಗೆ ಹಾರ ಹಾಕಿ ಅಭಿನಂದಿಸಿದ್ದಾರೆ. ಇದೀಗ ಒತ್ತುವರಿ ತೆರವು ಕಾರ್ಯ ಆರಂಭವಾಗಿದ್ದು, ರೈತರು ತಾವೇ ಮುಂದೆ ನಿಂತು ಕೆರೆ ಅಭಿವೃದ್ಧಿ ಮಾಡುತ್ತಿರುವುದು ಜಿಲ್ಲೆಯಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.