ಬೆಂಗಳೂರು: ಮೊಟ್ಟೆ ಬೇಕಿದ್ರೆ ಇನ್ನೂ ನಾಲ್ಕು ಹೊಡೆಯಿರಿ, ಆದರೆ ಜನರನ್ನು ನೆಮ್ಮದಿಯಿಂದ ಬದುಕಲು ಬಿಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರು. ಹಳ್ಳಿಗೆ ಹೋಗೋದು, ಜನರ ಸಮಸ್ಯೆ ಕೇಳೋದು ಅವರ ಕರ್ತವ್ಯ. ಹಾಗೆ ಹೋದಾಗ ಕಲ್ಲು, ಮೊಟ್ಟೆ ಹೊಡೀತಾರೆ ಅಂದ್ರೆ ಅವರ ಮನಸ್ಥಿತಿ ಹೇಗಿರಬೇಕು ಎಂದು ಪ್ರಶ್ನಿಸಿದ್ದಾರೆ.
Advertisement
Advertisement
ಕೊಡಗಿಗೆ ಯಾವುದೇ ಬಂಡವಾಳ ಹರಿದು ಹೋಗುತ್ತಿಲ್ಲ. ಕೇವಲ ಪ್ರವಾಸೋದ್ಯಮದಿಂದ ಅಲ್ಲಿನ ಜನ ಬದುಕುತ್ತಿದ್ದಾರೆ. ಅವರ ಅನ್ನ ಕಿತ್ತುಕೊಳ್ಳಬೇಡಿ. ಇದೇ ರೀತಿಯಲ್ಲಿ ಅಶಾಂತಿ ಉಂಟಾದ್ರೆ ಜನರ ಬದಕು ಕಷ್ಟ ಆಗುತ್ತೆ. ಮೊಟ್ಟೆ ಬೇಕಿದ್ರೆ ಇನ್ನೂ ನಾಲ್ಕು ಹೊಡೆಯಿರಿ, ಆದರೆ ನೆಮ್ಮದಿಯಿಂದ ಜನರನ್ನು ಬದುಕಲು ಬಿಡಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಾಮಸೇತು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸದೇ ಹೋದ್ರೆ 2024ರಲ್ಲಿ ಮೋದಿಗೆ ಸೋಲು: ಸುಬ್ರಮಣಿಯನ್ ಸ್ವಾಮಿ
Advertisement
Advertisement
ದೇಶದಲ್ಲಿ ರಾಜ್ಯದ ಗೌರವ ಮಣ್ಣುಪಾಲಾಗುತ್ತಿದೆ. ಶಿಕ್ಷಣ, ಪ್ರವಾಸಕ್ಕೆ ಹೊರಗಡೆಯಿಂದ ಜನರು ಬರುತ್ತಿದ್ದಾರೆ. ಅದರಿಂದ ವ್ಯಾಪಾರ ನಡೀತಾ ಇದೆ. ಅದಕ್ಕೂ ಕಲ್ಲು ಹಾಕುವ ಕೆಲಸ ಮಾಡಬೇಡಿ ಎಂದು ಬಿಜೆಪಿ ಸರ್ಕಾರದ ವಿರುದ್ಧ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ವಿಜಯಪುರದ ಕಾಂಗ್ರೆಸ್ ಕಚೇರಿಯಲ್ಲಿ ಸಾವರ್ಕರ್ ಫೋಟೋ ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಇದಕ್ಕೆ ಬೊಮ್ಮಾಯಿ ಅವರೇ ಉತ್ತರ ಕೊಡಬೇಕು. ನಮ್ಮ ಕಾರ್ಯಕರ್ತರು ಎಚ್ಚರವಾಗಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಲ್ಲಿ ನೆಹರೂ ಫೋಟೋ ಬಿಟ್ಟು ಅಪಮಾನ ಮಾಡಿದ್ರು. ಇದಕ್ಕೆ ಉತ್ತರ ಕೊಡಲು ನಮಗೂ ಬರುತ್ತೆ. ಆದ್ರೆ ಶಾಂತಿ ಕಾಪಡಬೇಕು ಅನ್ನೋದು ನಮ್ಮ ಉದ್ದೇಶ, ಹಾಗಾಗಿ ಸುಮ್ಮನಿದ್ದೇವೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಶುಭಮನ್ ಗಿಲ್ ಚೊಚ್ಚಲ ಶತಕದ ಅಬ್ಬರ – ಕ್ಲೀನ್‌ಸ್ವೀಪ್‌ನಲ್ಲಿ ಸರಣಿಗೆದ್ದ ಭಾರತ
ಆಗಸ್ಟ್ 26ರ `ಮಡಿಕೇರಿ ಚಲೋ’ ವಿಚಾರವಾಗಿ ಮಾತನಾಡಿ, ಮಡಿಕೇರಿ ಚಲೋ ಕೊಡಗು ಎಸ್‌ಪಿ ವಿರುದ್ಧ ಅಲ್ಲ, ಸರ್ಕಾರದ ವಿರುದ್ಧ ನಮ್ಮ ಹೋರಾಟ. ಕಲ್ಲು, ಮೊಟ್ಟೆ ಹೊಡೆದವನು ಹೀರೋ ಆಗಲ್ಲ. ಬಿಜೆಪಿ ಎಲ್ಲಿ ಪ್ರತಿಭಟನೆ ಮಾಡ್ತೋ ಅಲ್ಲೆ ಖಂಡಿಸುತ್ತೇವೆ. ಅದಕ್ಕಾಗಿ ಈ ಹೋರಾಟ ಎಂದು ಹೇಳಿದ್ದಾರೆ.