ನಮ್ಮ ದಿನದ ಬೆಳಕು ನೀನು: ಸನ್ನಿ ಲಿಯೋನ್

Public TV
2 Min Read
sunny leone 1

ಮುಂಬೈ: ಬಾಲಿವುಡ್‍ನ ಮಾದಕ ಬೆಡಗಿ ಸನ್ನಿ ಲಿಯೋನ್ ತಮ್ಮ ಪತಿ ಡೇನಿಯಲ್ ವೆಬರ್ ಜೊತೆ ಸೇರಿ ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

ಸೋಮವಾರ ಸನ್ನಿ ಲಿಯೋನ್ ಅವರ ಮಗಳು ನಿಶಾ ನಾಲ್ಕನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಈ ಫೋಟೋವನ್ನು ಸನ್ನಿ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಸನ್ನಿ, ಡೇನಿಯಲ್ ಹಾಗೂ ಮೂವರು ಮಕ್ಕಳು ಬಿಳಿ ಬಣ್ಣದ ಉಡುಪಿನಲ್ಲಿ ಮಿಂಚಿದ್ದಾರೆ.

ಸನ್ನಿ ಲಿಯೋನ್ ಈ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಾಕಿ ಅದಕ್ಕೆ, “ನನ್ನ ಪುಟ್ಟ ದೇವತೆ ನಿಶಾ ಕೌರ್ ವೆಬರ್ ಗೆ ಹುಟ್ಟುಹಬ್ಬದ ಶುಭಾಶಯಗಳು. ನಮ್ಮ ದಿನದ ಬೆಳಕು ನೀನು” ಎಂದು ಪ್ರೀತಿಯಿಂದ ಬರೆದು ಪೋಸ್ಟ್ ಮಾಡಿದ್ದಾರೆ.

ಇತ್ತ ಡೇನಿಯಲ್ ಕೂಡ ಮಗಳ ಹುಟ್ಟುಹಬ್ಬದ ಫೋಟೋ ಹಂಚಿಕೊಂಡು ಅದಕ್ಕೆ, ನಿಶಾ ನೀನು ನಮಗೆ ದೇವರು ಕೊಟ್ಟ ಉಡುಗೊರೆ. ನಾನು ವಿವರಿಸುವುದಕ್ಕಿಂತ ಹೆಚ್ಚು ನಿನ್ನನ್ನು ಪ್ರೀತಿಸುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು ಬೇಬಿ ಲವ್” ಎಂದು ಬರೆದುಕೊಂಡಿದ್ದಾರೆ.

ನಿಶಾ ಹುಟ್ಟುಹಬ್ಬಕ್ಕಾಗಿ ವಿಶೇಷವಾದ ‘ಫ್ರೋಜನ್’ ಥೀಮ್ ಕೇಕ್ ತಯಾರಿಸಲಾಗಿತ್ತು. ಈ ಕೇಕ್ ಕತ್ತರಿಸುವ ಮೂಲಕ ನಿಶಾ ತನ್ನ ಕುಟುಂಬಸ್ಥರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾಳೆ. ನಿಶಾ ಹುಟ್ಟುಹಬ್ಬದ ಹಿಂದಿನ ದಿನ ಆಕೆಗಾಗಿ ಸನ್ನಿ ಹಾಗೂ ಡೇನಿಯಲ್ ಶಾಪಿಂಗ್ ಮಾಡಿದ್ದರು. ಮಗಳಿಗಾಗಿ ದೊಡ್ಡ ಡೊಡ್ಡ ಗೊಂಬೆಗಳನ್ನು ಖರೀದಿಸಿ ಗಿಫ್ಟ್ ನೀಡಿದ್ದಾರೆ.

 

View this post on Instagram

 

Nisha’s birthday tomorrow! Have stopped at 3 @hamleys_india in 3cities! So many presents! #missionmommy

A post shared by Sunny Leone (@sunnyleone) on

ಕಳೆದ ವರ್ಷ ಬಾಡಿಗೆ ತಾಯಿ ಮೂಲಕ ಸನ್ನಿ ಲಿಯೋನ್ ಹಾಗೂ ಅವರ ಪತಿ ಡೇನಿಯಲ್ ವೆಬರ್ ಇಬ್ಬರು ಅವಳಿ ಗಂಡು ಮಕ್ಕಳನ್ನು ಪಡೆದಿದ್ದರು. ಅಲ್ಲದೆ ಸನ್ನಿ 2017ರಲ್ಲಿ ಮಹಾರಾಷ್ಟ್ರದ ಲಾತೂರಿನಲ್ಲಿ ನಿಶಾಳನ್ನು ದತ್ತು ಪಡೆದುಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *