ʼYou Are The Bestʼ – ಜಿ-7 ಶೃಂಗಸಭೆಯಲ್ಲಿ ಮೆಲೋಡಿ ಮೊಮೆಂಟ್

Public TV
2 Min Read
You Are The Best Trying To Be As You The Modi Meloni Melodi Moment From Canada

ಒಟ್ಟಾವಾ: ಕೆನಡಾದ ಕನನಾಸ್ಕಿಸ್‌ನಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯಲ್ಲಿ (G7 Summit ) ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಇಟಾಲಿಯನ್ (Italy) ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಭೇಟಿಯಾಗಿದ್ದಾರೆ.

ಮೋದಿ ಅವರನ್ನು ಭೇಟಿ ಆಗುತ್ತಿದ್ದಂತೆ ಮೆಲೋನಿ ಅವರು, ನೀವು ಅತ್ಯುತ್ತಮರು. ನಾನು ನಿಮ್ಮಂತೆ ಇರಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಮೆಲೋನಿ ಮೋದಿ ಅವರಿಗೆ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ನೆಟ್ಟಿಗರು ʼಮೆಲೋಡಿ ಮೊಮೆಂಟ್ʼ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

ಕಳೆದ ವರ್ಷ ಇಟಲಿಯಲ್ಲಿ ಜಿ-7 ಶೃಂಗಸಭೆ ಆಯೋಜನೆಗೊಂಡಿತ್ತು. ಭಾರತದ ಚುನಾವಣಾ ಫಲಿತಾಂಶ ಪ್ರಕಟವಾಗುವ ಮೊದಲೇ ಪ್ರಧಾನಿ ಮೋದಿ ಅವರಿಗೆ ಏಪ್ರಿಲ್‌ ತಿಂಗಳಿನಲ್ಲಿ ಜಿ7 ಸಭೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸುವಂತೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಆಹ್ವಾನ ನೀಡಿದ್ದರು. ಈ ಶೃಂಗಸಭೆ ಮುಗಿದ ಬಳಿಕ ಮೆಲೋನಿ ಅವರು ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿ ‘Hello From The Melody Team’ ಎಂದು ಬರೆದು ಪೋಸ್ಟ್‌ ಮಾಡಿದ್ದರು.

ಭಾರತ ಜಿ7 ದೇಶಗಳ ಒಕ್ಕೂಟದಲ್ಲಿ ಇಲ್ಲ. ಆದರೆ ವಿಶೇಷ ಅತಿಥಿಯಾಗಿ ಈ ಸಭೆಯಲ್ಲಿ ಭಾಗವಹಿಸಲು ಜಿ7 ರಾಷ್ಟ್ರಗಳು ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡುತ್ತಿವೆ. ಇದನ್ನೂ ಓದಿ: ಭಾರತಕ್ಕೆ ಯಾವುದೇ ದೇಶದ ಮಧ್ಯಸ್ಥಿಕೆ ಅಗತ್ಯವಿಲ್ಲ: ಟ್ರಂಪ್‌ಗೆ ಮೋದಿ ಸ್ಪಷ್ಟನೆ

 

ಏನಿದು ಮೆಲೋಡಿ?
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ನರೇಂದ್ರ ಮೋದಿ ಇಬ್ಬರು ಉತ್ತಮ ಸ್ನೇಹಿತರಾಗಿದ್ದಾರೆ. ಜಿ20 ಸಮ್ಮೇಳನಕ್ಕೆ ಮೆಲೋನಿ ಬಂದಾಗ #Melodi ಹ್ಯಾಶ್‌ ಟ್ಯಾಗ್‌ ಫೇಮಸ್‌ ಆಗಿತ್ತು. ಮೆಲೋನಿ ಮತ್ತು ಮೋದಿ ಹೆಸರನ್ನು ಸೇರಿಸಿ ಅಭಿಮಾನಿಗಳು Melodi ಟ್ಯಾಗ್‌ ಬಳಸಿ ಪೋಸ್ಟ್‌ ಮಾಡುತ್ತಿದ್ದಾರೆ.

Share This Article