ಲಕ್ನೋ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಆರೋಪಿಯಾಗಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶೀಶ್ ಮಿಶ್ರಾರನ್ನು ವಜಾಗೊಳಿಸದ ಕಾರಣ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
Advertisement
ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ ಅವರು, ಸರ್ಕಾರ ಅಜಯ್ ಮಿಶ್ರಾ ಟೆನಿ ಅವರನ್ನು ವಜಾಗೊಳಿಸಲು ನಿರಾಕರಿಸಿರುವುದು ಅದರ ನೈತಿಕ ದಿವಾಳಿತನವನ್ನು ಸ್ಪಷ್ಟವಾಗಿ ತೋರಿಸುತ್ತದೆ. ನರೇಂದ್ರ ಮೋದಿ ಅವರೇ ಧರ್ಮನಿಷ್ಠೆಯ ಕನ್ನಡಕ ಮತ್ತು ಧಾರ್ಮಿಕ ಉಡುಪನ್ನು ಧರಿಸುವುದರಿಂದ ನೀವು ಒಬ್ಬ ಅಪರಾಧಿಯನ್ನು ರಕ್ಷಿಸುತ್ತಿದ್ದೀರಾ ಎಂಬ ಸತ್ಯ ಎಂದಿಗೂ ಬದಲಾಗುವುದಿಲ್ಲ. ಅಜಯ್ ಮಿಶ್ರಾ ಟೆನಿ ಅವರನ್ನು ವಜಾಗೊಳಿಸಬೇಕು ಮತ್ತು ಕಾನೂನಿನ ಪ್ರಕಾರ ಆರೋಪಿ ಎಂದು ಗುರುತಿಸಬೇಕೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೆದ್ದಾರಿಯಲ್ಲೇ ಹೊತ್ತಿ ಉರಿದ 22 ಮಂದಿ ಪ್ರಯಾಣಿಕರಿದ್ದ ಬಸ್!
Advertisement
Advertisement
ಲಖಿಂಪುರ ಖೇರಿ ಘಟನೆ ಕುರಿತಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‍ಐಟಿ) ಪ್ರತಿಭಟನಾ ರೈತರ ಹತ್ಯೆಗೆ ಯೋಜಿತ ಸಂಚು ನಡೆದಿದೆ ಎಂದು ತಿಳಿಸಿದ ನಂತರ ಅಜಯ್ ಮಿಶ್ರಾ ಟೆನಿ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ತೆಗೆದುಹಾಕುವ ಒತ್ತಾಯಿಸಲಾಯಿತು. ಅಜಯ್ ಮಿಶ್ರಾ ಪುತ್ರ ಆಶಿಶ್ ಲಖಿಂಪುರ ಖೇರಿ ಪ್ರಕರಣದ ಆರೋಪಿಯಾಗಿದ್ದಾನೆ.
Advertisement
The government’s refusal to sack Ajay Mishra Teni is the starkest indication of its moral bankruptcy. @narendramodi ji, carefully curated spectacles of piety and wearing religious attire will not change the fact that you are protecting a criminal.. 1/2
— Priyanka Gandhi Vadra (@priyankagandhi) December 16, 2021
ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರನ್ನು ಭೇಟಿ ಮಾಡಲು ಅಜಯ್ ಮಿಶ್ರಾ ಅವರು ತೆರಳಿದ್ದರು. ಈ ವೇಳೆ ಮೂರು ಕೃಷಿ ಕಾನೂನು ಕಾಯ್ದೆಯನ್ನು ವಿರೋಧಿಸಿ ರೈತರು ಕೇಶವ್ ಪ್ರಸಾದ್ ಮೌರ್ಯ ಮತ್ತು ಅಜಯ್ ಮಿಶ್ರಾ ವಿರುದ್ಧ ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಿದ್ದರು. ಇವರ ಜೊತೆಗೆ ಬೆಂಗಾವಲು ವಾಹನಗಳ ಸಾಲಿನಲ್ಲಿದ್ದ ಮಹೀಂದ್ರ ಗಾಡಿಯನ್ನು ರೈತರ ಮೇಲೆ ಹತ್ತಿಸಲಾಗಿದ್ದು, ಇದರಲ್ಲಿ ಸಚಿವನ ಪುತ್ರ ಆಶಿಶ್ ಮಿಶ್ರಾ ಇದ್ದರು ಎಂದು ರೈತರು ತಿಳಿಸಿದ್ದರು. ಇದನ್ನೂ ಓದಿ: ತಂದೆ ಸಾವಿನಿಂದ ಮನನೊಂದು 4 ತಿಂಗಳ ಬಳಿಕ ಮಗಳು ಆತ್ಮಹತ್ಯೆ
ಕಾರು ಹತ್ತಿಸಿದ್ದರಿಂದ ನಾಲ್ವರು ರೈತರು ಪ್ರಾಣ ಕಳೆದುಕೊಂಡಿದ್ದರು. ಅಲ್ಲದೇ ಮೂವರು ಬಿಜೆಪಿ ಕಾರ್ಯಕರ್ತರು ಮತ್ತು ಹಿಂದಿ ಸುದ್ದಿವಾಹಿನಿ ಓರ್ವ ವರದಿಗಾರ ಕೂಡ ಬಲಿಯಾಗಿದ್ದರು.