ಮಡಿಕೇರಿ: ಕಷ್ಟದಲ್ಲಿದ್ದಾಗ ಬಂದಿಲ್ಲ, ಈಗ ಫೋಟೋಗೆ ಪೋಸ್ ಕೊಡೋಕೆ ಸಹಾಯ ಮಾಡುತ್ತಾರೆ ಎಂದು ಕೊಡಗಿನಲ್ಲಿ ಶಾಸಕರ ಅಪ್ಪಚ್ಚು ರಂಜನ್ ಬೆಂಬಲಿಗರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಡಗು ಜಿಲ್ಲೆಯ ಗುಡ್ಡೆಹೊಸರು ಸಮೀಪದ ತೆಪ್ಪದಕಂಡಿಯಲ್ಲಿ ಶನಿವಾರ ಕಾವೇರಿ ನೀರಿನ ರಭಸಕ್ಕೆ 4 ಮನೆಗಳು ಕುಸಿದು ಬಿದ್ದಿದ್ದವು. ಈ ವೇಳೆ ಯಾರೂ ಕೂಡ ಸಹಾಯಕ್ಕೆ ಬಾರದ ಹಿನ್ನೆಲೆಯಲ್ಲಿ ಸ್ವತಃ ತೆಪ್ಪದಕಂಡಿ ಗ್ರಾಮಸ್ಥರು ಮನೆಗಳ ಸಾಮಾಗ್ರಿಗಳನ್ನು ತೆರವು ಮಾಡಿದ್ದರು. ಆದರೆ ಇಂದು ಪರಿಸ್ಥಿತಿ ಹೇಗಿದೆ ಎಂದು ತಿಳಿಯಲು ಎರಡು ಜೀಪ್‍ನಲ್ಲಿ ಅಪ್ಪಚ್ಚು ರಂಜನ್ ಫೋಟೋ ಅಂಟಿಸಿಕೊಂಡು ಅವರ ಬೆಂಬಲಿಗರು ಸ್ಥಳಕ್ಕೆ ಬಂದಿದ್ದರು. ಆಗ ಗ್ರಾಮಸ್ಥರು, ಮನೆಗಳು ಬಿದ್ದು ಜನರು ಸಂಕಷ್ಟದಲ್ಲಿ ಇದ್ದಾಗ ಬಾರದ ನೀವು ಈವಾಗ ಏಕೆ ಬಂದಿದ್ದೀರಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
Advertisement
ಬೆಂಬಲಿಗರು ಅಪ್ಪಚ್ಚು ರಂಜನ್ ಕ್ಷೀಪ್ರ ಕಾರ್ಯಾಚರಣೆ ತಂಡ ಕಟ್ಟಿಕೊಂಡು ಸಹಾಯ ಮಾಡುತ್ತಿದ್ದಾರೆ. ಆದರೆ ಇವರು ಶ್ರೀಮಂತರಿಗೆ ಮಾತ್ರ ಸಹಾಯ ಮಾಡುತ್ತಾರೆ. ಫೋಟೋಗೆ ಪೋಸ್ ಕೊಡೋಕೆ ಸಹಾಯ ಮಾಡ್ತಾರೆ ಎಂದು ತೆಪ್ಪದಕಂಡಿಯ ಜನರು ಅಪ್ಪಚ್ಚು ರಂಜನ್ ವಿರುದ್ಧ ಘೋಷಣೆ ಕೂಗಿ, ತಾರತಮ್ಯ ಮಾಡುತ್ತಿದ್ದೀರಾ ಎಂದು ಕಿಡಿಕಾರಿದ್ದಾರೆ.
Advertisement
ಕೊಡಗಿನಲ್ಲಿ ಸುರಿಯುತ್ತಿರುವ ಮಳೆ ಭಾರೀ ಅವಾಂತರವನ್ನು ಸೃಷ್ಟಿಸಿದೆ. ಒಂದೆಡೆ ಪ್ರವಾಹದಿಂದ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಇನ್ನೊಂದೆಡೆ ಕಡೆ ಪದೇ ಪದೇ ಗುಡ್ಡ ಹಾಗೂ ಭೂ ಕುಸಿತ ಉಂಟಾಗಿ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಅಲ್ಲದೆ ಎನ್‍ಡಿಆರ್‍ಎಫ್ ತಂಡ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.