ಬೆಂಗಳೂರು: ಯೋಗರಾಜ್ ಭಟ್ಟರ ನಿರ್ದೇಶನದಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಚಿತ್ರ ಪಂಚತಂತ್ರ ಮುಂದಿನ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಗಣೇಶ್, ದುನಿಯಾ ವಿಜಯ್, ಯಶ್… ಹೀಗೆ ಸ್ಟಾರ್ ನಟರ ಚಿತ್ರಗಳನ್ನೇ ನಿರ್ದೇಶಿಸುತ್ತಿದ್ದ ಯೋಗರಾಜ್ ಭಟ್ಟರು ಈ ಸಲ ಹೊಸ ಯುವಪ್ರತಿಭೆಗಳ ಜೊತೆ ಹಿರಿಯ ಕಲಾವಿದರನ್ನು ಸೇರಿಸಿ ಪಂಚತಂಥ್ರದ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ.
ಹೊಸ ಪೀಳಿಗೆ ಮತ್ತು ಹಳೇಪೀಳಿಗೆಯ ಜುಗಲ್ ಬಂದಿ ಈ ಚಿತ್ರದಲ್ಲಿದೆ. ಪ್ರಚಾರದ ಕೊನೆ ಅಸ್ತ್ರವಾಗಿ ಈ ಚಿತ್ರದ ಟ್ರೈಲರ್ ಹಾಗೂ ವಿಶೇಷವಾಗಿ ರೂಪಿಸಲಾಗಿರುವ ಪಂಚತಂತ್ರ ಗೇಮ್ ಗೆ ಚಾಲನೆ ನೀಡಿದ್ದಾರೆ. ವಿಹಾನ್ ಗೌಡ, ಸೋನಾಲಿ ಮೊಂತೆರೋ, ಅಕ್ಷರ ಯುವಪೀಳಿಗೆಯ ಗುಂಪಿನಲ್ಲಿದ್ದಾರೆ. ರಂಗಾಯಣ ರಘು, ಕರಿಸುಬ್ಬು, ಬಾಲರಾಜವಾದಿಯಂಥ ಸೀನಿಯರ್ ಆ್ಯಕ್ಟರ್ ಗಳು ಇಳಿವಯಸಿನ ಪ್ರತಿನಿಧಿಗಳಾಗಿ ಕಾಣಿಸಿಕೊಂಡಿದ್ದಾರೆ.
Advertisement
Advertisement
ನಾಯಕ ವಿಹಾನ್ ಗೌಡ ಮಾತನಾಡಿ ನನ್ನಂಥ ಹೊಸಬನ ಮೇಲೆ ಬಂಡವಾಳ ಹಾಕುವುದು ಸುಲಭವಲ್ಲ. ಕಾರ್ ರೇಸ್‍ನಲ್ಲಿ ಅಭಿನಯಿಸಿದ್ದು ಒಳ್ಳೆ ಅನುಭವ ರಂಗಾಯಣ ರಘು, ಕರಿಸುಬ್ಬು ಅವರಂಥ ಹಿರಿಯ ಕಲಾವಿದರ ಜೊತೆ ಕೆಲಸ ಮಾಡುವಾಗ ತುಂಬಾ ಭಯ ಇತ್ತು. ನಂತರ ಅವರೇ ಧೈರ್ಯ ತುಂಬಿದರು ಎಂದು ಹೇಳಿಕೊಂಡರು. ನಾಯಕಿ ಸೋನಾಲಿ ಮಾತನಾಡಿ ರಂಗಾಯಣ ರಘು ಅವರ ಮಗಳಾಗಿ ನಾನು ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ತುಂಬಾ ಬೋಲ್ಡ್ ಹಾಗೂ ಚುರುಕಾದ ಹುಡುಗಿಯ ಪಾತ್ರ ಅದು. ಭಟ್ಟರ ಜೊತೆ ಕೆಲಸ ಮಾಡುವ ನನ್ನ ಕನಸು ಈ ಸಿನಿಮಾದಿಂದ ನನಸಾಗಿದೆ ಎಂದು ಖುಷಿಯಿಂದಲೇ ಹೇಳಿದರು.