ಲಕ್ನೋ: ಬಡಜನರಿಗೆ ಕಡಿಮೆ ದರದಲ್ಲಿ ಊಟ ಸಿಗುವ ಯೋಜನೆಯನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಾರಿಗೆ ತಂದಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ಬಡವರಿಗೆ ಕಡಿಮೆ ದರದಲ್ಲಿ ಊಟವನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಪ್ರಾರಂಭಿಕವಾಗಿ ಅಲಹಾಬಾದ್‍ನಲ್ಲಿ 10 ರೂಪಾಯಿಗೆ ಊಟ ನೀಡುವ ಕ್ಯಾಂಟಿನನ್ನು ಆರಂಭಿಸಿದ್ದಾರೆ. ಭಾನುವಾರ ನೂತನ ಕ್ಯಾಂಟಿನನ್ನು ಮೇಯರ್ ಅಭಿಲಾಷ ಗುಪ್ತಾರವರು ಉದ್ಘಾಟಿಸಿದ್ದಾರೆ. ಈ ಯೋಜನೆಗೆ ಯೋಗಿ ಥಾಲಿ ಎಂದು ಹೆಸರಿಡಲಾಗಿದೆ.
ಉದ್ಘಾಟನೆಯ ನಂತರ ಮಾತನಾಡಿದ ಮೇಯರ್ ಗುಪ್ತರವರು, ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದ್ದು, ಬಡ ವರ್ಗ ಹಾಗೂ ಅಂಗವೈಕಲ್ಯಕ್ಕೆ ತುತ್ತಾದ ಜನರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ತಿಳಿಸಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಯೋಜನೆ ರೂವಾರಿ ದಿಲೀಪ್ ಅಲಿಯಾಸ್ ಕಾಕೆ, ಖಾಲಿ ಹೊಟ್ಟೆಯಲ್ಲಿ ಯಾರೂ ಮಲಗಬಾರದು ಎಂಬ ಉದ್ಧೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. ಬಡ ಜನರಿಗಾಗಿ ದುಡಿಯುತ್ತಿರುವ ಸಿಎಂ ಯೋಗಿ ಆದಿತ್ಯನಾಥ್ ಅವರ ಹೆಸರಲ್ಲಿ ಯೋಜನೆ ಜಾರಿಗೆ ತರಲಾಗಿದ್ದು, ಪ್ರಾರಂಭಿಕವಾಗಿ ಅಲಹಾಬಾದ್‍ನ ಅಟಾರ್ಸುಯಿಯಾ ಭಾಗದಲ್ಲಿರುವ ಮಳಿಗೆಯಲ್ಲಿ ಕ್ಯಾಂಟೀನ್ ಆರಂಭಗೊಳಿಸಲಾಗಿದ್ದೇವೆ ಎಂದು ತಿಳಿಸಿದರು.
ಈಗಾಗಲೇ ಕರ್ನಾಟಕದಲ್ಲಿ ಇಂದಿರಾ, ತಮಿಳುನಾಡಿನಲ್ಲಿ ಅಮ್ಮಾ, ಆಂಧ್ರಪ್ರದೇಶದಲ್ಲಿ ಅಣ್ಣಾ ಕ್ಯಾಂಟೀನ್ ಆರಂಭಗೊಂಡಿದ್ದು, ಕಡಿಮೆ ಬೆಲೆಗೆ ಬಡವರಿಗೆ ಆಹಾರ ಪೂರೈಕೆ ಮಾಡಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv