ಲಕ್ನೋ: ಇನ್ನು ಮುಂದೆ ಉತ್ತರ ಪ್ರದೇಶದ ಎಲ್ಲ ಜೈಲುಗಳಲ್ಲಿ ಗಾಯತ್ರಿ ಮಂತ್ರ ಮತ್ತು ಮಹಾ ಮೃತ್ಯುಂಜಯ ಮಂತ್ರಗಳು ಮೊಳಗಲಿವೆ.
ಜೈಲಿನಲ್ಲಿರುವ ಖೈದಿಗಳ ಮಾನಸಿಕ ಶಾಂತಿಗಾಗಿ ಈ ಮಂತ್ರಗಳನ್ನು ಮೊಳಗಿಸಲಾಗುತ್ತದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಈಗಾಗಲೇ ರಾಜ್ಯ ಕಾರಾಗೃಹ ಸಚಿವ ಧರಂವೀರ್ ಪ್ರಜಾಪತಿ ಅವರು ಕಾರಾಗೃಹ ಆಡಳಿತ ಮಂಡಳಿಗೆ ಈ ಮಂತ್ರಗಳನ್ನು ಮೊಳಗಿಸುವಂತೆ ಆದೇಶಿಸಿದ್ದಾರೆ. ಇದನ್ನೂ ಓದಿ: ಶಕ್ತಿ ಸ್ವರೂಪಿಣಿ ದೇವಿಯು ಅಪಾರ ದ್ವೇಷದಿಂದ ಕೂಡಿದ ಬಿಜೆಪಿ ನಾಯಕರ ಆತ್ಮವನ್ನು ಶುದ್ಧೀಕರಿಸಲಿ: ಸುರ್ಜೇವಾಲಾ
Advertisement
Advertisement
ಮಾಹಿತಿ ಪ್ರಕಾರ ಧರಂವೀರ್ ಪ್ರಜಾಪತಿ ಅವರ ಸೂಚನೆ ಮೇರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಾಯತ್ರಿ, ಮಹಾಮೃತ್ಯುಂಜಯ ಮಂತ್ರಗಳು ಕೇಳಿ ಬರುತ್ತಿವೆ. ಈ ಮಂತ್ರಗಳ ಪಠಣ ಮಾಡುವುದರಿಂದ ಖೈದಿಗಳಿಗೆ ನೆಮ್ಮದಿ ಸಿಗುತ್ತದೆ. ಜೈಲಿನಿಂದ ಹೊರಬಂದು ಉತ್ತಮ ನಾಗರಿಕರಾಗುತ್ತಾರೆ. ಜೊತೆಗೆ ಅವರು ಆಧ್ಯಾತ್ಮಿಕತೆಯೊಂದಿಗೆ ಸಂಪರ್ಕ ಹೊಂದಿರುತ್ತಾರೆ ಎಂಬುದು ಸರ್ಕಾರದ ನಂಬಿಕೆ. ಆದ್ದರಿಂದ ಕಾರಾಗೃಹಗಳಲ್ಲಿ ಈ ಮಂತ್ರಗಳ ರಾಗಗಳನ್ನು ನುಡಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಕುರಾನ್ ಮೇಲೆ ದೇಶ ನಡೆಯಲ್ಲ, ತಂದೆಯ ಜೊತೆಗೆ ಮುಸ್ಕಾನ್ಳನ್ನು ಬಂಧಿಸಬೇಕು: ಮುತಾಲಿಕ್
Advertisement
Advertisement
ಇದರೊಂದಿಗೆ ಯೋಗಿ ಆದಿತ್ಯನಾಥ್ ಸರ್ಕಾರವು ಕಾರಾಗೃಹಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಹಾಗೂ ಸರಕನ್ನು ನಿಷೆಧಿಸಿದೆ.