ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆತ್ಯನಾಥ್ ಇಂದು 47ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಸೇರಿದಂತೆ ಅನೇಕ ನಾಯಕರು ಯೋಗಿ ಆದಿತ್ಯನಾಥ್ ಅವರಿಗೆ ಶುಭ ಕೋರಿದ್ದಾರೆ.
ಯೋಗಿ ಆದಿತ್ಯನಾಥ್ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು, ಯೋಗಿ ಜೀ ಅವರು ಡೈನಾಮಿಕ್ ಮುಖ್ಯಮಂತ್ರಿ. ಉತ್ತರ ಪ್ರದೇಶದ ಚಿತ್ರಣವನ್ನು ಬದಲಿಸಿದ್ದಾರೆ. ಅದರಲ್ಲೂ ಕೃಷಿ, ಉದ್ಯಮ ಕ್ಷೇತ್ರಗಳನ್ನು ಅಭಿವೃದ್ಧಿಯ ಪಥದ ಕಡೆಗೆ ಕೊಂಡೊಯ್ಯುತ್ತಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಲಗೊಳಿಸಿದ್ದಾರೆ. ಅವರು ಆರೋಗ್ಯವಂತರಾಗಿ ದೀರ್ಘಕಾಲ ಬಾಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
Advertisement
Thank you Hon. PM Shri @narendramodi ji for warm wishes.
Under your benevolent guidance and leadership, #NewUP is charting out it's own development path to ensure each of the 23 crore citizens of the state realises her/his full potential. https://t.co/xil58gjARz
— Yogi Adityanath (@myogiadityanath) June 5, 2019
Advertisement
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಯೋಗಿ ಆದಿತ್ಯನಾಥ್ ಅವರು, ಧನ್ಯವಾದಗಳು ಮೋದಿ ಜೀ. ನಿಮ್ಮ ಪರೋಪಕಾರಿ ಮಾರ್ಗದರ್ಶನ ಹಾಗೂ ನಾಯಕತ್ವದಲ್ಲಿ ಉತ್ತರ ಪ್ರದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವೆ. ರಾಜ್ಯದ 23 ಕೋಟಿ ಜನರ ಸಂಪೂರ್ಣ ಸಾಮಥ್ರ್ಯ ಅರಿತು ಕಾರ್ಯನಿರ್ವಹಿಸುತ್ತಿರುವೆ ಎಂದು ಟ್ವೀಟ್ ಮಾಡಿದ್ದಾರೆ.
Advertisement
ಟ್ವೀಟ್ ಮೂಲಕ ಶುಭಕೋರಿರುವ ಕೇಂದ್ರ ಮಾಜಿ ಸಚಿವ ಅರುಣ್ ಜೇಟ್ಲಿ ಅವರು, ಯೋಗಿ ಆದಿತ್ಯನಾಥ್ ಜೀ ದೇವರು ನಿಮಗೆ ಆರೋಗ್ಯ ಹಾಗೂ ದೀರ್ಘ ಆಯಸ್ಸು ನೀಡಲಿ. ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿ ಎಂದು ತಿಳಿಸಿದ್ದಾರೆ.
Advertisement
Thank you Shri @arunjaitley ji for your warm wishes.
It is blessings and guidance of elders like you that keeps me going, and inspire me to work with greater commitment. I am certain you shall soon recover and be in best of your health to continue guiding us. https://t.co/3nmP2FYT6n
— Yogi Adityanath (@myogiadityanath) June 5, 2019
ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ಅವರು ಟ್ವೀಟ್ ಮಾಡಿ, ಯೋಗಿ ಆದಿತ್ಯನಾಥ್ ಅವರ ಮಾರ್ಗದರ್ಶನದಲ್ಲಿ ಉತ್ತರ ಪ್ರದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ರಾಜ್ಯವು ಅಭಿವೃದ್ಧಿಯಲ್ಲಿ ದಾಖಲೆ ಬರೆಯಲಿದೆ ಎಂದು ಹೇಳಿ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.
ಯೋಗಿ ಆದಿತ್ಯನಾಥ್ ಅವರ ಪೂರ್ವಾಶ್ರಮದ ಹೆಸರು ಅಜಯ್ ಸಿಂಗ್ ಬಿಸ್ತಾ. ಅವರು ಉತ್ತರಾಖಂಡದ ಪೌರಿ ಘರ್‍ವಾಲ್ ಜಿಲ್ಲೆಯ ಪಂಚೂರ್ ಹಳ್ಳಿಯಲ್ಲಿ 1972 ಜೂನ್ 5ರಂದು ಜನಿಸಿದ್ದಾರೆ. ಯೋಗಿ ಅವರ ತಾಯಿ ಸಾವಿತ್ರಿ ದೇವಿ, ತಂದೆ ಆನಂದ್ ಸಿಂಗ್ ಬಿಸ್ತಾ. ಯೋಗಿ 1990 ರಂದು ರಾಮ ಮಂದಿರ ನಿರ್ಮಾಣ ಚಳವಳಿಯಲ್ಲಿ ಭಾಗವಹಿಸಿದ್ದ ಯೋಗಿ ಈ ಮಧ್ಯೆ ಗೋರಖ್‍ನಾಥ್ ಮಠದ ಪ್ರಧಾನ ಅರ್ಚಕ ಮಹಂತ ಅವೈದ್ಯನಾಥ್ ಪ್ರಭಾವಕ್ಕೊಳಗಾಗಿ ಅವರ ಶಿಷ್ಯರಾದರು. ಯೋಗಿ ಅವರು ಹೇಮಾವತಿ ನಂದನ್ ಬಹುಗುಣ ಘರವಾಲ್ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಪದವಿ ಪಡೆದಿದ್ದಾರೆ.
उत्तर प्रदेश के कर्मठ, प्रगतिशील एवं यशस्वी मुख्यमंत्री @myogiadityanath जी को जन्मदिन की हार्दिक शुभकामनाएं। आपके सानिध्य में यूपी विकास पथ पर अग्रसर रहे और प्रगति के नए कीर्तिमान स्थापित करे उसी अभिलाषा के साथ प्रभु से आपके अच्छे स्वास्थ्य व दीर्घायु की प्रार्थना करती हूँ।
— Smriti Z Irani (@smritiirani) June 5, 2019