ಹಲವು ವರ್ಷಗಳ ನಂತರ ತವರಿಗೆ ತೆರಳಿ ತಾಯಿ ಭೇಟಿಯಾದ ಯೋಗಿ ಆದಿತ್ಯನಾಥ್‌

Public TV
1 Min Read
yogi adityanath savitra devi

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ತಮ್ಮ ರಾಜಕೀಯ ಒತ್ತಡದ ನಡುವೆ ಹಲವು ವರ್ಷಗಳ ನಂತರ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ.

ತಾಯಿ ಸಾವಿತ್ರಾ ದೇವಿ ಅವರನ್ನು ಭೇಟಿಯಾಗಿ ಅವರ ಕಾಲುಗಳನ್ನು ಮುಟ್ಟಿ ನಮಸ್ಕರಿಸುತ್ತಿರುವ ಫೋಟೋವನ್ನು ಯೋಗಿ ಆದಿತ್ಯನಾಥ್‌ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವ ತೇಲಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ನೀಲಿ ಚಿತ್ರ ಪ್ರಸಾರ

ಉತ್ತರಾಖಂಡದ ತಮ್ಮ ತವರು ನಗರವಾದ ಪೌರಿಯಲ್ಲಿರುವ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಹಲವು ವರ್ಷಗಳ ನಂತರ ತಮ್ಮ ತಾಯಿಯನ್ನು ಭೇಟಿಯಾಗಿದ್ದಾರೆ. ಬುಧವಾರ ನಿಗದಿಯಾಗಿರುವ ತನ್ನ ಸೋದರಳಿಯನ ಕೇಶಮುಂಡನ ಸಮಾರಂಭಕ್ಕಾಗಿ ಅವರು ತಮ್ಮ ಗ್ರಾಮಕ್ಕೆ ಭೇಟಿ ನೀಡಿದ್ದಾರೆ.

ಉತ್ತರಾಖಂಡ್‌ಗೆ ಅಧಿಕೃತ ನಿಶ್ಚಿತಾರ್ಥ ಕಾರ್ಯಕ್ರಮ ಹಾಗೂ ಕುಟುಂಬ ಸಮಾರಂಭದಲ್ಲಿ ಭಾಗವಹಿಸಲು ಯೋಗಿ ಆದಿತ್ಯನಾಥ್‌ ತವರಿಗೆ ಹಿಂದಿರುಗಿದ್ದಾರೆ ಎಂದು ವರದಿಯಾಗಿದೆ. 85ರ ಹರೆಯದ ಸಾವಿತ್ರಾ ದೇವಿ ಅವರಿಗೆ ಯೋಗಿ ಆದಿತ್ಯನಾಥ್ ಅಲ್ಲದೇ ಇನ್ನೂ 6 ಮಕ್ಕಳಿದ್ದಾರೆ. ಇದನ್ನೂ ಓದಿ: ಗೋಹತ್ಯೆ ಮಾಡಿದ್ದೀರೆಂದು ಮನೆಗೆ ನುಗ್ಗಿ ಇಬ್ಬರು ಆದಿವಾಸಿಗಳ ಮೇಲೆ ಹಲ್ಲೆ ನಡೆಸಿ ಕೊಲೆ

Share This Article
Leave a Comment

Leave a Reply

Your email address will not be published. Required fields are marked *