ಅಗರ್ತಲಾ: ಈ ಸಾಲಿನ ತ್ರಿಪುರ ವಿಧಾನಸಭೆ ಚುನಾವಣೆಯ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದ್ದು, ಆಡಳಿತಾರೂಢ ಸಿಪಿಎಂ ಪಕ್ಷಕ್ಕೆ ಭಾರಿ ಮುಖಭಂಗವಾಗಿದೆ. ಬಿಜೆಪಿ ಮೈತ್ರಿಕೂಟ ಅಭೂತಪೂರ್ವ ಮುನ್ನಡೆಯನ್ನ ಪಡೆದು, ಭರ್ಜರಿ ಜಯಭೇರಿ ಬಾರಿಸಿದೆ.
ಬಿಜೆಪಿಯ ಈ ಭರ್ಜರಿ ಗೆಲುವಿಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರೇ ಕಾರಣವೆಂದು ಟ್ವಿಟರ್ ನಲ್ಲಿ ಅವರ ಪರವಾಗಿ ಶುಭಾಶಯಗಳ ಟ್ವೀಟ್‍ಗಳ ಮಹಾಪೂರವೇ ಹರಿದು ಬರುತ್ತಿದೆ.
Advertisement
https://twitter.com/dhaval241086/status/969823865311555584?
Advertisement
35% ರಷ್ಟು ಜನಸಂಖ್ಯೆ ಹೊಂದಿರುವ ನಾಥ್ ಸಮುದಾಯದವರನ್ನು ಸೆಳೆಯಲು ಬಿಜೆಪಿ ನಾಯಕರು ಯೋಗಿ ಆದಿತ್ಯನಾಥ್ ಅವರನ್ನು ಸ್ಟಾರ್ ಭಾಷಣಕಾರರನ್ನಾಗಿ ತ್ರಿಪುರಾಗೆ ಕಳುಹಿಸಿದ್ದರು. ನಾಥ್ ಸಮುದಾಯದ ಜನರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು, ತ್ರಿಪುರದಲ್ಲಿ ಅತಿ ಪ್ರಭಾವಿ ಸಮುದಾಯವಾಗಿದೆ.
Advertisement
ಗೋರಕ್‍ನಾಥ್ ಮಠದ ಮುಖ್ಯಸ್ಥರಾಗಿರುವ ಕಾರಣ ಆ ಸಮುದಾಯದ ಜನರನ್ನು ಸೆಳೆಯುವಲ್ಲಿ ಯೋಗಿ ಯಶಸ್ವಿಯಾಗಿದ್ದಾರೆ ಎನ್ನುವ ಮಾತುಗಳು ಈಗ ಕೇಳಿಬಂದಿದೆ.
Advertisement
https://twitter.com/anuttar/status/969798583640879104?
ಫೆಬ್ರವರಿ 11 ರಂದು ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ಮೋದಿ ಹೇಳಿದಂತೆ ತ್ರಿಪುರದ ಹಲವು ಸ್ಥಳಗಳಲ್ಲಿ 7 ರ್‍ಯಾಲಿಯಲ್ಲಿ ಭಾಗವಹಿಸಿ ಭಾಷಣ ಮಾಡಿದ್ದರು. ಬಿಜೆಪಿಯ ಈ ಭರ್ಜರಿ ಗೆಲುವಿಗೆ ಮೋದಿ ಆಡಳಿತದ ಜೊತೆಗೆ ಯೋಗಿ ಆದಿತ್ಯನಾಥ್ ಕಾರಣ ಎನ್ನುವ ಮಾತು ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.
BJP stormed out CPM in Tripura. 100% credit goes to Yogi Adityanath who conducted more than 7 rallies. And let me… https://t.co/MCfukVzqfY
— Chandan Chatterjee (@Chatterjee1970) March 3, 2018
ಮೋದಿಗೆ ಅಭಿನಂದನೆ:
ಈಶಾನ್ಯ ರಾಜ್ಯಗಳ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಸಾಧಾರಣ ಸಾಧನೆ ನಿರ್ಮಿಸಿದ್ದಕ್ಕೆ ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನ ಶ್ಲಾಘಿಸಿದ್ದಾರೆ. ಇದನ್ನೂ ಓದಿ: ನನ್ನ ಅರೆಸ್ಟ್ ಮಾಡಿ, ಎನ್‍ಕೌಂಟರ್ ನಲ್ಲಿ ಸಾಯಲು ಇಷ್ಟವಿಲ್ಲ- ಯುಪಿ ಪೊಲೀಸರಿಗೆ ಕೊಲೆ ಆರೋಪಿ ಶರಣು
BJP is all set for a historic win in #Tripura, I would like to congratulate PM Modi, Amit Shah ji and our party workers. Even our performance in #Nagaland and #Meghalaya is historic. Important day in Indian politics: UP CM Yogi Adityanath pic.twitter.com/ixEajcVZ61
— ANI (@ANI) March 3, 2018