ಬೆಂಗಳೂರು: ಕಳೆದ ಕೆಲ ದಿನಗಳಿಂದ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನೋಡಿದರೆ ಡಿಕೆ ಶಿವಕುಮಾರ್ ಅವರ ರಾಜಕೀಯ ಅಂತ್ಯ ಕಾಲ ಹತ್ತಿರವಾಗುತ್ತಿದೆ ಎಂದೆನಿಸುತ್ತಿದೆ. ಕಾಂಗ್ರೆಸ್ ಪಕ್ಷ ಈ ಸ್ಥಿತಿಗೆ ಬರಲು ಡಿಕೆ ಶಿವಕುಮಾರ್ ಅವರೇ ಕಾರಣ ಎಂದು ಸಿಪಿ ಯೋಗೇಶ್ವರ್ ಹೇಳಿದ್ದಾರೆ.
ಅನರ್ಹ ಶಾಸಕರಾದ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪತ್ರಿಯೊಬ್ಬ ರಾಜಕೀಯ ವ್ಯಕ್ತಿಯ ಜೀವನಕ್ಕೆ ಆರಂಭ, ಅಂತ್ಯ ಇರುತ್ತದೆ. ಆದರೆ ಅದು ಕೆಲವರಿಗೆ ಗೆಲುವಿನ ಮೂಲಕ ಅಂತ್ಯವಾದರೆ, ಕೆಲವರಿಗೆ ಸೋಲಿನ ಮೂಲಕ ಬರುತ್ತದೆ. ಡಿಕೆ ಶಿವಕುಮಾರ್ ಅವರಿಗೆ ಇಂದಿನ ರಾಜಕೀಯ ಬೆಳವಣಿಗೆಗಳು ಅನಾನುಕೂಲವಾಗಿದೆ. ಅವರ ಅಹಂಕಾರ, ದರ್ಪ, ಕೊನೆ ಹಂತಕ್ಕೆ ಬರುತ್ತಿದೆ. ಅವರ ಸ್ನೇಹಿತರು ಅವರನ್ನ ಬಿಟ್ಟು ಹೋಗಿದ್ದರಿಂದ ತುಂಬಾ ನೊಂದಿದ್ದಾರೆ. ಆದ್ದರಿಂದ ಮಾಧ್ಯಮದವರು ಅವರನ್ನು ಮಾತನಾಡಿಸದೆ ಇದ್ದರೆ ಉತ್ತಮ. ಏಕೆಂದರೆ ಅವರು ನೆಗೆಟಿವ್ ಫೋರ್ಸ್ ಆಗಿದ್ದು, ಅವರನ್ನು ಕೆಲ ಸಮಯ ಬಿಟ್ಟು ಬಿಡಿ ಎಂದರು.
Advertisement
Advertisement
ಇದೇ ಸಂದರ್ಭದಲ್ಲಿ ತಮ್ಮ ರಾಜಕೀಯ ಜೀವನಕ್ಕೆ ಅಡ್ಡಿಯಾಗಿದ್ದು ಡಿಕೆ ಶಿವಕುಮಾರ್ ಎಂದು ಆರೋಪಿಸಿದ ಅವರು. ನನ್ನ ಚುನಾವಣಾ ಸೋಲಿಗೆ ಅವರೇ ಕಾರಣ. ಆದರೆ ನಾನು ಡಿಕೆ ಶಿವಕುಮಾರ್ ಅವರ ರಾಜಕೀಯ ಅಂತ್ಯ ಕಾಲದಲ್ಲಿ ಒಳ್ಳೆಯದಾಗಲಿ ಎಂದು ಬಯಸುತ್ತೇನೆ ಎಂದರು.
Advertisement
ಇದೇ ಸಂದರ್ಭದಲ್ಲಿ ತಮ್ಮ ಭೇಟಿ ಕುರಿತು ಮಾತನಾಡಿದ ಅವರು, ಅನರ್ಹತೆ ವಿರುದ್ಧ ಸುಪ್ರೀಂ ಕೋರ್ಟಿನ ಮೊರೆ ಹೋಗಿರುವ ಸ್ನೇಹಿತರನ್ನು ಭೇಟಿ ಮಾಡಲು ಬಂದಿದ್ದೇನೆ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿರುವುದರಿಂದ ಯಾವ ನಡೆ ಕೈಗೊಳ್ಳ ಬೇಕು ಎಂಬುವುದರ ಬಗ್ಗೆ ಚಿಂತನೆ ನಡೆಸಿದ್ದಾರೆ. ಆದ್ದರಿಂದ ನಾನು ಅವರನ್ನು ಭೇಟಿ ಮಾಡಲು ಬಂದಿದೆ. ಬಿಜೆಪಿ ಅವರ ಪರ ಇರುತ್ತದೆ. ಅವರು ನಮ್ಮ ಕಡೆ ಬಂದರೆ ನಾವು ಅವರೊಂದಿಗೆ ನಿಲ್ಲುತ್ತೇವೆ ಎಂದರು.