ಯೋಗೀಶ್ ಮಾಸ್ಟರ್ ದಾಖಲೆ : ಒಬ್ಬರೇ 24 ಪಾತ್ರ ನಿರ್ವಹಣೆ

Public TV
1 Min Read
yogesh master 2

ರಂಗಭೂಮಿ ಕಲಾವಿದ, ಚಿಂತಕ ಯೋಗೀಶ್ ಮಾಸ್ಟರ್ ಹೊಸದೊಂದು ದಾಖಲೆಗೆ ಮುಂದಾಗಿದ್ದಾರೆ. ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ ಹೆಸರಿನಲ್ಲಿ ಚಿತ್ರದಲ್ಲಿ ಅವರು 24 ಪಾತ್ರಗಳನ್ನು ಮಾಡಲಿದ್ದಾರಂತೆ. ಸಿನಿಮಾ ಇತಿಹಾಸದಲ್ಲೇ ಇದೊಂದು ದಾಖಲೆಯ ನಡೆಯಾಗಿದೆ. ಇದನ್ನೂ ಓದಿ : ಗಾಲಿ ಜನಾರ್ದನ ರೆಡ್ಡಿ ಮಗನ ಸಿನಿಮಾ ಲಾಂಚ್ ಗೆ ರಾಜಮೌಳಿ ಅತಿಥಿ

yogesh master 4

ಸಾಹಿತಿಯಾಗಿ ಸಾಕಷ್ಟು ಕೃತಿಗಳನ್ನು ರಚಿಸಿರುವ ಯೋಗೀಶ್ ಮಾಸ್ಟರ್, ರಂಗಭೂಮಿ ಮತ್ತು ಸಿನಿಮಾಗೆ ಸಂಬಂಧಿಸಿದಂತೆ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಅದರಲ್ಲೂ ಅವರ ವಿವಾದಿತ ಕೃತಿ ಢುಂಢಿ ಮೂಲಕ ಪ್ರಸಿದ್ಧಿಗೂ ಬಂದರು. ಈಗ ನಟನಾಗಿ ಸಿನಿಮಾ ಪ್ರೇಕ್ಷಕರ ಮುಂದೆ ನಿಲ್ಲುತ್ತಿದ್ದಾರೆ. ಇದನ್ನೂ ಓದಿ : ಏಳು ತಿಂಗಳ ಗರ್ಭಿಣಿಗೆ ಇದೆಂಥ ಟಾರ್ಚರ್? : ಶಾಕ್ ನಲ್ಲಿ ನಟಿ ಸಂಜನಾ

yogesh master 3

ಈ ಸಿನಿಮಾದಲ್ಲಿ ಯೋಗೀಶ್ ಮಾಸ್ಟರ್ ಯಾವೆಲ್ಲ ಪಾತ್ರಗಳನ್ನು ನಿರ್ವಹಿಸಿದ್ದಾರೆ, ಅದರ ಹಿನ್ನೆಲೆ ಏನು ಅನ್ನುವ ಕುರಿತಾ ಟ್ರೇಲರ್ ಸಿದ್ಧವಾಗಿದ್ದು ಶನಿವಾರ (ಫೆ.04) ದಂದು ಟ್ರೇಲರ್ ಬಿಡುಗಡೆ ಆಗಲಿದೆ. ಇದನ್ನೂ ಓದಿ : ರವಿಚಂದ್ರನ್ ಸಿನಿಮಾ ಹಿರೋಯಿನ್ ಈಗ ನಿರ್ದೇಶಕಿ

yogesh master 1

ಇದು ರವೀಂದ್ರನಾಥ್ ಠಾಕೂರ್ ಅವರ ಕಾದಂಬರಿಯನ್ನು ಆಧರಿಸಿದ ಸಿನಿಮಾವಾಗಿದ್ದು, ಸಂತೋಷ್ ಕೊಡೆಂಕೇರಿ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *