ಕಲಬುರಗಿ: ಬಿಜೆಪಿಯವರ ಕಿರುಕುಳ ತಾಳಲಾರದೇ ಮಲ್ಲಮ್ಮ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮಲ್ಲಮ್ಮಳನ್ನ ಕಾಂಗ್ರೆಸ್ ಹೈಜಾಕ್ ಮಾಡಿದೆ ಎಂಬುದು ಸುಳ್ಳು ಆರೋಪವಾಗಿದೆ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಜಿಲ್ಲಾ ಪಂಚಾಯತ್ ಸದಸ್ಯ ಯೊಗೇಶ್‍ಗೌಡ ಹತ್ಯೆ ಪ್ರಕರಣ ಮತ್ತು ಪತ್ನಿ ಮಲ್ಲಮ್ಮ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮಲ್ಲಮ್ಮ ಅವರನ್ನು ಕಾಂಗ್ರೆಸ್ ಹೈಜಾಕ್ ಮಾಡಿಲ್ಲ. ಅವರಾಗೇ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ ಅಂತ ಹೇಳಿದ್ರು. ಇದನ್ನೂ ಓದಿ: ಕಾಂಗ್ರೆಸ್ ನಿಂದ ಯೋಗೇಶ್ ಗೌಡ ಪತ್ನಿಯ ಹೈಜಾಕ್ ಪ್ರಕರಣಕ್ಕೆ ಹೊಸ ಟ್ವಿಸ್ಟ್!
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರಿಂದ ಅಸಂಬದ್ಧ ಪದ ಬಳಕೆ ವಿಚಾರದ ಕುರಿತು ಮಾತನಾಡಿದ ಸಿಎಂ, ಬೋಗಳೆದಾಸಯ್ಯ ಯಾರೆಂಬ ವಿಷಯ ಚರ್ಚೆಗೆ ಬರಬೇಕು. ಬಿಜೆಪಿಯವರಿಗೆ ಚರ್ಚೆಗೆ ಬರುವುದಕ್ಕೆ ತಾಕತ್ತಿಲ್ಲ ಅಂದ್ರು. ಇದನ್ನೂ ಓದಿ: ಕಾಂಗ್ರೆಸ್ ನಿಂದ ಯೋಗೇಶ್‍ಗೌಡ ಪತ್ನಿ ಹೈಜಾಕ್?- ರಾತ್ರೋರಾತ್ರಿ ಕರೆದೊಯ್ದು ಪಕ್ಷ ಸೇರುವಂತೆ ಬೆದರಿಕೆ ಆರೋಪ
ಇನ್ನು ಕಾಂಗ್ರೆಸ್‍ನಲ್ಲಿ ವಯಸ್ಸಾದವರಿಗೆ ನಿವೃತ್ತಿ ರಾಹುಲ್ ಗಾಂಧಿ ಹೇಳಿಕೆ ಸಂಬಂಧ, ಪಕ್ಷದಲ್ಲಿ ಹಿರಿಯರು ಬೇಕು, ಯುವಕರು ಬೇಕು. ಪ್ರಿಯಾಂಕ ಗಾಂಧಿ ರಾಹುಲ್‍ಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಚುನಾವಣೆಗೆ ನಿಲ್ಲೋದು ಸದ್ಯಕ್ಕೆ ಅಪ್ರಸ್ತುತ. ಸೋನಿಯಾ ಗಾಂಧಿ ಅಧ್ಯಕ್ಷ ಸ್ಥಾನ ತ್ಯಜಿಸಿದ್ದರು ಸಹ ರಾಜಕೀಯದಲ್ಲಿ ಸಕ್ರಿಯರಾಗಿರುತ್ತಾರೆ. ರಾಯಬರೇಲಿ ಕ್ಷೇತ್ರದಿಂದಲೇ ಸೋನಿಯಾ ಸ್ಫರ್ಧೆ ಮಾಡುತ್ತಾರೆ ಅಂತ ಅವರು ತಿಳಿಸಿದ್ರು.