ರಾಯಚೂರು: ಚಿಕ್ಕಬಳ್ಳಾಪುರದಲ್ಲಿ (Chikkaballapura) ನಡೆದ ಯೋಗ ಶಿಕ್ಷಕಿ ಅಪಹರಣ, ಕೊಲೆಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು ಘಟನೆ ಬಳಿಕ ಟೆಂಪಲ್ ರನ್ ನಡೆಸಿದ್ದರು, ಅದೇ ಸಮಯದಲ್ಲಿ ಪೊಲೀಸರು ಬಂಧಿಸಿದ್ದರು ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿಗಳಾದ ಸತೀಶ್ ರೆಡ್ಡಿ ಹಾಗೂ ರಮಣನನ್ನು ಯರಗೇರಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.ಇದನ್ನೂ ಓದಿ: ಕಮಲ್- ಮಣಿರತ್ನಂ ಕಾಂಬಿನೇಷನ್ ಚಿತ್ರದ ರಿಲೀಸ್ ಡೇಟ್ ಫಿಕ್ಸ್
Advertisement
Advertisement
ಪ್ರಕರಣದ ಬಳಿಕ ಜಾಮೀನಿಗೆ ಅರ್ಜಿ ಹಾಕಿದ್ದ ಆರೋಪಿಗಳು, ಬೇಲ್ ಸಿಗುವವರೆಗೂ ಟೆಂಪಲ್ ರನ್ ನಡೆಸಿದ್ದರು. ತಿರುಪತಿ ಬಳಿಕ ನ.5 ರಂದು ಮಂತ್ರಾಲಯದಲ್ಲಿ (Mantralaya) ಪೂಜೆ ಸಲ್ಲಿಸಿದ್ದರು. ಮಂತ್ರಾಲಯ ರಾಯರ ಮಠದ ಪ್ರಾಂಗಣದಲ್ಲೇ ರಾಯಚೂರು ಪೊಲೀಸರು ಆರೋಪಿಗಳನ್ನ ಪತ್ತೆ ಹಚ್ಚಿದ್ದರು.
Advertisement
ಚಿಕ್ಕಬಳ್ಳಾಪುರದ ದಿಬ್ಬೂರ ಹಳ್ಳಿ ಠಾಣಾ ಪೊಲೀಸರ ಮಾಹಿತಿ ಮೇರೆಗೆ ಕಾರ್ಯಾಚರಣೆಗೆ ಇಳಿದಿದ್ದ ಯರಾಗೇರ ಠಾಣೆಯ ಸಿಪಿಐ ನಿಂಗಪ್ಪ ನೇತೃತ್ವದ 5 ಜನರ ತಂಡ ಆರೋಪಿಗಳನ್ನು ಬಂಧಿಸಿತ್ತು. ಆರೋಪಿಗಳಿಂದ ಯೋಗ ಶಿಕ್ಷಕಿಯ 60 ಗ್ರಾಂ ಚಿನ್ನಾಭರಣ ಹಾಗೂ ಅವರ ಬಳಿಯಿದ್ದ 5 ಮೊಬೈಲ್ ಪೋನ್‌ಗಳನ್ನು ಜಪ್ತಿ ಮಾಡಿದ್ದರು. ಬಳಿಕ ಆರೋಪಿಗಳನ್ನ ದಿಬ್ಬೂರ ಹಳ್ಳಿ ಠಾಣೆಯ ಪೋಲಿಸರ ವಶಕ್ಕೆ ನೀಡಿದ್ದರು.ಇದನ್ನೂ ಓದಿ: ವಕ್ಫ್ ವಿವಾದ: ಜನರ ದಿಕ್ಕು ತಪ್ಪಿಸೋ ಅಭಿಯಾನ ಶುರು ಮಾಡಿದೆ ಕಾಂಗ್ರೆಸ್ – ಪ್ರಹ್ಲಾದ್ ಜೋಶಿ