ಮೈಸೂರು: ವಿವಿಧ ಭಂಗಿಯ ಯೋಗಗಳ ಮೂಲಕ ತಮ್ಮ ದೇಹವನ್ನು ಮಣಿಸಿ ಮಕ್ಕಳು ಪ್ರೇಕ್ಷಕರು ಹುಬ್ಬೇರಿಸುವಂತೆ ಮಾಡಿದರು. ಅಲ್ಲದೆ ಈ ಸ್ಫರ್ದೆಯಲ್ಲಿ ಜಯಗಳಿಸುವ ಮೂಲಕ ವಿದೇಶದಲ್ಲಿ ತಮ್ಮ ಯೋಗ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶ ಪಡೆದರು.
ಮೈಸೂರಿನಲ್ಲಿ ನಡೆದ ರಾಷ್ಟ್ರೀಯ ಯೋಗಾಸನ ಕ್ರೀಡಾ ಚಾಂಪಿಯನ್‍ಶಿಪ್‍ನಲ್ಲಿ ವಿವಿಧ ವಯೋಮಾನದ 1,400ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ, ವಿವಿಧ ಭಂಗಿಯ ಯೋಗ ಪ್ರದರ್ಶಿಸಿದರು.
Advertisement
ಯೋಗದ ಮಹತ್ವ ಸಾರುವ ಈ ಸ್ಪರ್ಧೆಯಲ್ಲಿ 8-10, 10-12, 12-15 ವರ್ಷದ ಬಾಲಕ, ಬಾಲಕಿಯರು ಸೇರಿದಂತೆ 60 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ವಯಸ್ಸಿನವರು ಭಾಗವಹಿಸಿದ್ದರು. ಅಥ್ಲೆಟಿಕ್ ಯೋಗಾಸನ, ಆರ್ಟ್ ಸ್ಟಿಕ್ ಸೋಲೊ ಯೋಗಾಸನ, ಸಮೂಹ ಆರ್ಟ್‍ಸ್ಟಿಕ್ ಯೋಗಾಸನ, ರಿದಮ್ಟಿಕ್ ಯೋಗಾಸನವನ್ನು ಪ್ರದರ್ಶಿಸಲಾಯಿತು. ಈ ಸ್ಪರ್ಧೆಯಲ್ಲಿ ವಿಜೇತರಾದವರನ್ನು ವಿದೇಶಗಳಲ್ಲಿ ನಡೆಯುವ ಸ್ಪರ್ಧೆಗಳಿಗೆ ಕಳುಹಿಸಲಾಗುತ್ತದೆ.
Advertisement
8 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ 5.5 ವರ್ಷದ ನಿಕಿತಾ ಯೋಗ ಸಾಹಸ ಮಾಡಿ ದ್ವಿತೀಯ ಸ್ಥಾನ ಪಡೆದಿದ್ದು, ಈ ಮೂಲಕ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ದುಬೈ, ಮಲೇಶಿಯಾ, ಶ್ರೀಲಂಕಾ ಹಾಗೂ ಥೈಲ್ಯಾಂಡಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಪುಟಾಣಿ ಭಾಗವಹಿಸಲಿದ್ದಾಳೆ.