ಬೆಂಗಳೂರು: ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ಹೇಳಿಕೆ ವಿಚಾರ ಸಂಬಂಧ ಸಚಿವ ಕೆ.ಎಸ್ ಈಶ್ವರಪ್ಪಗೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ಎಚ್ಚರಿಕೆ ನೀಡಿದ್ದಾರೆ.
Advertisement
ರಾಷ್ಟ್ರಧ್ವಜ ವನ್ನು ತೆಗೆದು ಕೇಸರಿ ಧ್ವಜವನ್ನು ಹಾಕ್ತಿವಿ ಅಂತಾ ಈಶ್ವರಪ್ಪ ಹೇಳಿದ್ದಾರೆ. ಅದು ಇಂತಹ ಸಮಯದಲ್ಲಿ ಈಶ್ವರಪ್ಪನ ಹೇಳಿಕೆ ಕಾನೂನು ಬಾಹಿರ. ರಾಷ್ಟ್ರಧ್ವಜವನ್ನು ತೆಗೆಯೋಕೆ ಈಶ್ವರಪ್ಪನಿಗೆ ಅವಕಾಶ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಈಶ್ವರಪ್ಪ vs ಡಿಕೆಶಿ ವಾಕ್ಸಮರ: ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಸದನದ ಕದನ
Advertisement
Advertisement
ಡಿಕೆ ಶಿವಕುಮಾರ್, ಸಿದ್ದರಾಮಯ್ಯನವರನ್ನು ಏಕವಚನದಲ್ಲಿ ಮಾತಾಡಿದ್ದಾರೆ. ಅವರಿಗೆ ವಯಸ್ಸಾಗಿದೆ, ಹೇಗೆ ಮಾತಾಡಬೇಕು ಅಂತಾ ಗೊತ್ತಾಗಲ್ವ. ಈ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ಆಗಿಲ್ಲ ಅಂದ್ರೆ ಕೋರ್ಟ್ ಗೆ ಹೊಗುತ್ತೀವಿ. ನಾಳೆಯಿಂದ ಕಾಂಗ್ರೆಸ್ ಹೋರಾಟ ಮುಂದುವರಿಯುತ್ತೆ. ಬಿಜೆಪಿ ಪಕ್ಷ ಈಶ್ವರಪ್ಪರನ್ನು ಸಚಿವ ಸ್ಥಾನದಿಂದ ಕೆಳಗೆ ಇಳಿಸೋ ತನಕ ನಮ್ಮ ಹೋರಾಟ ನಿಲ್ಲಲ್ಲ ಎಂದು ಎಚ್ಚರಿಕೆ ನೀಡಿದರು.
Advertisement
ಇತ್ತ ಈಶರಪ್ಪ ವಿರುದ್ಧ ಹೈ ಗ್ರೌಂಡ್ ಪೊಲೀಸ್ ಠಾಣೆಗೆ ದೂರು ನಲಪಾಡ್ ದೂರು ದಾಖಲಿಸಿದ್ದಾರೆ. ಈ ವೇಳೆ ನಲಪಾಡ್ ಗೆ ಯುವ ಕಾಂಗ್ರೇಸ್ ಕಾರ್ಯಕರ್ತರು ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಮತ್ತೆ ಕ್ಲೋಸ್ ಆಯ್ತು ಫ್ಲೈಓವರ್ – ಕಳಪೆ ಕಾಮಗಾರಿ ಎಂದ ತಜ್ಞರು