ಅಯೋಧ್ಯೆ: ಜನವರಿ 22ರಂದು ರಾಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ರಾಮಲಲ್ಲಾ ಮೂರ್ತಿಯ (Ram Lalla Idols)ಆಯ್ಕೆ ಕುರಿತು ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದು ರಾಮಮಂದಿರ ಟ್ರಸ್ಟ್‌ನ (Ram Janmabhoomi Teerth Kshetra Trust) ಪದಾಧಿಕಾರಿಗಳು ತಿಳಿಸಿದ್ದಾರೆ.
ಶ್ರೀರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೆ ಮೂರು ಬಾಲರಾಮನ ಮೂರ್ತಿಗಳು ಸಿದ್ಧದ್ದವಾಗಿವೆ. ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಮತ್ತು ಇತರೆ ಸ್ವಾಮೀಜಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಈ ಸಂಬಂಧ ತೆಗೆದುಕೊಳ್ಳುವ ತೀರ್ಮಾನವನ್ನು ಸೂಕ್ತ ಕಾಲದಲ್ಲಿ ಸಾರ್ವಜನಿಕವಾಗಿ ಪ್ರಕಟಿಸಲಾಗುವುದು ಎಂದು ಟ್ರಸ್ಟ್‌ನ ಕಚೇರಿ ಉಸ್ತುವಾರಿಯಾಗಿರುವ ಪ್ರಕಾಶ್ ಗುಪ್ತಾ (Prakash Gupta) ಅವರು ತಿಳಿಸಿದ್ದಾರೆ.
Advertisement
Advertisement
ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲು ಶಿಲ್ಪಿಗಳಾದ ಕರ್ನಾಟಕ ರಾಜ್ಯ ಮೈಸೂರು ಮೂಲದ ಅರುಣ್ ಯೋಗಿರಾಜ್ (Arun Yogiraj), ಗಣೇಶ್ ಭಟ್ ಮತ್ತು ಜೈಪುರದ ಸತ್ಯನಾರಾಯಣ ಪಾಂಡೆ ಅವರ ಮೂರ್ತಿಗಳನ್ನ ಕೆತ್ತನೆ ಮಾಡಿದ್ದಾರೆ. ಕರ್ನಾಟಕ ಇಬ್ಬರು ಶಿಲ್ಪಿಗಳು ಮೈಸೂರಿನ ಕೃಷ್ಣಶಿಲೆಯನ್ನು ಬಳಕೆ ಮಾಡಿ ಮೂರ್ತಿ ಕೆತ್ತನೆ ಮಾಡಿದ್ದಾರೆ. ಸತ್ಯನಾರಾಯಣಪಾಂಡೆ ಅವರು ರಾಜಸ್ಥಾನದಿಂದ ತರಿಸಲಾಗಿದ್ದ ಕಲ್ಲನ್ನು ಬಳಕೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ಅಕ್ಕಿ, ತರಕಾರಿ, ಸಾಂಬಾರ್ ಪದಾರ್ಥಗಳ ಅರ್ಪಣೆ – ಪ್ರಾಣಪ್ರತಿಷ್ಠೆಗೆ ಶ್ರೀರಾಮ ಭಕ್ತರ ಕಾಣಿಕೆ
Advertisement
Advertisement
ಅಂತಿಮವಾಗಿ ಪ್ರತಿಷ್ಠಾಪಿಸಬೇಕಾದ ರಾಮಲಲ್ಲಾ ಮೂರ್ತಿಯನ್ನು ಆಯ್ಕೆ ಮಾಡುವ ಮುನ್ನ ಅದರ ದೀರ್ಘಾವಧಿ ಬಾಳಿಕೆ ಕುರಿತು ತಾಂತ್ರಿಕ ವರದಿ ಪಡೆಯಲಾಗುತ್ತದೆ. ನಂತರ ಆಯ್ಕೆಯಾಗುವ ಮೂರ್ತಿಯನ್ನ ಜನವರಿ 22ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ಹೋಗಲು ಹಿಂದೇಟು ಹಾಕ್ತಿದ್ದವರು ಈಗ ಆಹ್ವಾನ ಬಯಸ್ತಿದ್ದಾರೆ: ಯೋಗಿ ಆದಿತ್ಯನಾಥ್
ಈಗಾಗಲೇ ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗೀರಾಜ್ ಅವರು ಕೆತ್ತನೆ ಮಾಡಿರುವ ರಾಮಲಲ್ಲಾ ಮೂರ್ತಿ ಫೈನಲ್ ಎಂಬ ಮಾತುಗಳು ಕೇಳಿಬರುತ್ತಿವೆ.
ಬಾಲರಾಮನ ಮೂರ್ತಿ ವಿಶೇಷ ಏನು?
ರಾಮಲಲ್ಲಾ ಮೂರ್ತಿಯು 5 ವರ್ಷದ ಬಾಲಕನ ರೂಪ ಹೊದಿಂದ್ದು ಧನುರ್ಧಾರಿ ರೂಪದಲ್ಲಿ ಕೆತ್ತಲಾಗಿದೆ. ಕಮಲದ ಮೇಲೆ ಕುಳಿತಿದ್ದು, ಪವಿತ್ರ ಕೃಷ್ಣಶಿಲೆಯಲ್ಲಿ ನಿರ್ಮಾಣವಾಗಿದೆ. 51 ಇಂಚು ಎತ್ತರವನ್ನು (4.3 ಅಡಿ) ಹೊಂದಿದೆ. ಇದನ್ನೂ ಓದಿ: Ram Mandir: ಅಯೋಧ್ಯೆ ರಾಮಮಂದಿರಕ್ಕೆ 24 ಅರ್ಚಕರು – ಇಬ್ಬರು SC, ಒಬ್ಬರು OBC ವರ್ಗದವರು ಆಯ್ಕೆ
ಬಾಲರಾಮನ ಆಯ್ಕೆಗೆ ಮಾನದಂಡ ಏನು?
ವಿಗ್ರಹ ಕಡೆಯಲು ಬಳಸಿದ ಶಿಲೆಯ ಗುಣಮಟ್ಟ, ರಾಮನ ಬಾಲ್ಯದ ನೋಟ, ವಿಗ್ರಹಕ್ಕೆ ಇರುವ ಸೌಂದರ್ಯ, ಆಕರ್ಷಣೆ, ವಿಗ್ರಹಕ್ಕೆ ಇರುವ ದೈವತ್ವದ ಕಳೆ, ಭಾವ, ವಿಗ್ರಹದ ರಚನಾತ್ಮಕ ಸ್ವರೂಪ, ಕೆತ್ತನೆಯ ಗುಣಮಟ್ಟ ಎಲ್ಲವನ್ನು ಪರಿಗಣಿಸಲಾಗುತ್ತದೆ.
ಬಾಲರಾಮನ ಶಿಲಾ ವಿಶೇಷತೆ ಏನು?
ಮೈಸೂರಿನ ಕೃಷ್ಣಶಿಲೆಯಲ್ಲಿ ಬಾಲರಾಮನ ಮೂರ್ತಿ ಕೆತ್ತಲಾಗಿದ್ದು ಹಾರೋಹಳ್ಳಿಯ ರಾಮ್‌ದಾಸ್ ಎಂಬವರ ಜಮೀನಲ್ಲಿ ಈ ಶಿಲೆ ಪತ್ತೆಯಾಗಿತ್ತು. ಈ ಜಮೀನನ್ನು ಶ್ರೀನಿವಾಸ್ ಎಂಬವರು ಗುತ್ತಿಗೆ ಪಡೆದಿದ್ದರು. ಗುತ್ತಿಗೆದಾರ ಶ್ರೀನಿವಾಸ್ ಅವರನ್ನು ಸುರೇಂದ್ರ ವಿಶ್ವಕರ್ಮ ಸಂಪರ್ಕಿಸಿದ್ದರು. ಇದನ್ನೂ ಓದಿ: Ayodhya Ram Mandir – ಶ್ರೀರಾಮಲಲ್ಲಾ ಅಭಿಷೇಕಕ್ಕೆ ನೇಪಾಳದಿಂದ 16 ಪವಿತ್ರ ನದಿಗಳ ನೀರು
ಮಾನಯ್ಯ ಬಡಿಗೇರ್ ಮೂಲಕ ಕೃಷ್ಣಶಿಲೆಯ ಪರೀಕ್ಷೆ ಮಾಡಿ ಅಯೋಧ್ಯೆ ಗುರುಗಳ ಸಮ್ಮುಖದಲ್ಲಿ ಮೂರ್ತಿ ಶಿಲೆಯನ್ನು ಅಂತಿಮಗೊಳಿಸಲಾಗಿತ್ತು. 19 ಟನ್ ತೂಕ, 9.8 ಅಡಿ ಉದ್ದದ ಶಿಲೆ ಅಯೋಧ್ಯೆಗೆ ರವಾನಿಸಲಾಗಿತ್ತು. ಶಿಲೆ ಕಳುಹಿಸಿದ ನಂತರ ಪ್ರಚಾರ ಪಡೆಯಬಾರದು ಎಂಬ ಷರತ್ತು ವಿಧಿಸಲಾಗಿತ್ತು. ಶಿಲೆ ತೆಗೆದ ಸ್ಥಳವನ್ನು ಮಣ್ಣಿನಿಂದ ಮುಚ್ಚಿ ಭೂಮಿ ಸಮತಟ್ಟು ಮಾಡಲಾಗಿದೆ.