BelgaumDistrictsKarnatakaLatestLeading NewsMain Post

ಹಿಂಡಲಗಾ ಗ್ರಾ.ಪಂ. ಅಧ್ಯಕ್ಷರಿಗೆ, ಸದಸ್ಯರಿಗೆ ಲೆಟರ್ ಕೊಟ್ಟಿದ್ದು ನಿಜ: ಆಶಾ ಐಹೊಳೆ

ಬೆಳಗಾವಿ: ಹಿಂಡಲಗಾ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ, ಸದಸ್ಯರಿಗೆ ನಾನು ಲೇಟರ್ ಕೊಟ್ಟಿದ್ದು ನಿಜ ಎಂದು ಮಾಜಿ ಬೆಳಗಾವಿ ಜಿ.ಪಂ. ಅಧ್ಯಕ್ಷೆ ಆಶಾ ಐಹೊಳೆ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2021ರಲ್ಲಿ ಹಿಂಡಲಗಾ ಗ್ರಾಮದ ಲಕ್ಷ್ಮಿದೇವಿ ಜಾತ್ರೆ ಇತ್ತು. ಜಾತ್ರೆಯ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರು ನನ್ನ ಬಳಿ ಬಂದಿದ್ದರು. ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಲೆಟರ್ ನೀಡುವಂತೆ ಕೋರಿದ್ದರು. ಆ ಪ್ರಕಾರ ಗ್ರಾಪಂ ಅಧ್ಯಕ್ಷರಿಗೆ, ಸದಸ್ಯರಿಗೆ ನಾನು ಲೇಟರ್ ಕೊಟ್ಟಿದ್ದು ನಿಜ. ಆದರೆ ನಾನು ಕೊಟ್ಟ ಲೆಟರ್‍ಗೆ ಏನು ಆಕ್ಷನ್ ಆಗಿದೆ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ತಮ್ಮದೇ ಪಕ್ಷದ ಸಂಸದರ ವಿರುದ್ಧವೇ ಕಿಡಿಕಾರಿದ ಸಚಿವ ಎಂಟಿಬಿ

ಆರ್ ಡಿಪಿಆರ್ ಇಲಾಖೆ ಅನುಮೋದನೆ ನೀಡಿರುವ ವಿಷಯ ನನಗೆ ಇವತ್ತಷ್ಟೇ ಗೊತ್ತಾಗಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್, ನಾನು ಮುಖಾಮುಖಿಯಾಗಿ ಎಂದೂ ಭೇಟಿಯಾಗಿಲ್ಲ. ಅವರ ಆತ್ಮಹತ್ಯೆ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಆದರೆ ಸಂತೋಷ್ ಆತ್ಮಹತ್ಯೆಯ ದುರಂತ ಮಾಡಿಕೊಳ್ಳಬಾರದಿತ್ತು. ಆರ್ಡಿಪಿಆರ್ ಇಲಾಖೆಯಿಂದ ಬಂದಿರುವ ರಿಸೀವ್ ಕಾಪಿನೂ ನನಗೆ ಸಿಕ್ಕಿಲ್ಲ ಎಂದರು. ಇದನ್ನೂ ಓದಿ: ಸಂತೋಷ್‌ ಪಾಟೀಲ್‌ ಕೇಸ್‌ಗೆ ಟ್ವಿಸ್ಟ್‌ – 2021ರಲ್ಲಿ ಬೆಳಗಾವಿ ZP ಅಧ್ಯಕ್ಷೆ ಬರೆದ ಪತ್ರ ಔಟ್‌

ಜಿ.ಪಂ. ಅಧಿಕಾರಿಗಳು ಅದನ್ನು ಕಡತದಲ್ಲಿ ಇಟ್ಟಿರುತ್ತಾರೆ. ಕಾಮಗಾರಿಗಳ ಮಂಜೂರಾತಿಗೆ ನನ್ನ ಬಳಿ ಹಿಂಡಲಗಾ ಗ್ರಾ.ಪಂ. ಸದಸ್ಯರು ಬಂದಿದ್ದರು. ಕೆಲಸ ಆದ ಬಗ್ಗೆ ನನಗೇನೂ ಮಾಹಿತಿ ನೀಡಿಲ್ಲ. ಆ ಬಗ್ಗೆ ಗೊತ್ತೂ ಇಲ್ಲ. ನನ್ನ ಪತ್ರಕ್ಕೆ ಅನುಮೋದನೆ ನೀಡಿರುವ ಪತ್ರವೂ ಇವತ್ತಷ್ಟೇ ಸಿಕ್ಕಿದೆ. 17.ಫೆ.2021ಕ್ಕೆ ಅನುಮೋದನೆ ಆಗಿರುವುದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಶಾಲ್‌, ನನ್ನ ಮದ್ವೆ ಫಿಕ್ಸ್ ಆಗಿದೆ ಓಡೋಗೋಣ ಬಾ- 10 ರೂ. ನೋಟಲ್ಲಿನ ಲವ್ವರ್ ಸಂದೇಶ ವೈರಲ್

ಸಂತೋಷ್ ಪಾಟೀಲ್ ನನಗೆ ಗೊತ್ತೇ ಎಂಬ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ, ಈ ಬಗ್ಗೆ ತನಿಖಾಧಿಕಾರಿಗಳು ಡೀಪ್ ಸ್ಟಡಿ ಮಾಡಬೇಕು. ನಾನು ಕೊಟ್ಟಿರುವ ಲೆಟರ್ ಬಗ್ಗೆ ಮೇಲಾಧಿಕಾರಿಗಳಿಗೆ ಎಷ್ಟು ಮಾಹಿತಿ ಇದೆ ಎಂಬುದು ನನಗೆ ಗೊತ್ತಿಲ್ಲ. ಆದರೆ ನಾನು ಪತ್ರ ಬರೆದಿದ್ದು ನಿಜ ಎಂದು ಬೆಳಗಾವಿಯಲ್ಲಿ ನಿಕಟಪೂರ್ವ ಜಿಪಂ ಅಧ್ಯಕ್ಷೆ ಆಶಾ ಐಹೊಳೆ ಮಾಹಿತಿ ನೀಡಿದ್ದಾರೆ.

Leave a Reply

Your email address will not be published.

Back to top button