-ಬೆಂಕಿ ಅವಘಡಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣನಾ?
ಬೆಂಗಳೂರು: ಏರೋ ಶೋ ಕಾಂಟ್ರ್ಯಾಕ್ಟರ್ ಗಳು ಹಣ ಉಳಿಸಲು ಮುಂಜಾಗ್ರತಾ ಕ್ರಮಕೈಗೊಂಡಿಲ್ಲ. ಹೀಗಾಗಿ ಭಾರೀ ಪ್ರಮಾಣದ ಅಗ್ನಿ ಅವಘಡ ಸಂಭವಿಸಿದೆ ಎಂದು ಏರೋ ಶೋ ಹಿಂದಿನ ಕಾಂಟ್ರ್ಯಾಕ್ಟರ್ ಮಂಜುನಾಥ್ ಆರೋಪಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಮಂಜುನಾಥ್, ಫ್ಯಾಬ್ರಿಕಾನಾ ಎಕ್ಸಿಬ್ಯುಷನ್ 1994ರಿಂದ 2007 ವರೆಗೂ ಆಫೀಸಿಯಲ್ ಕಾಂಟ್ರ್ಯಾಕ್ಟರ್ ಪಡೆದಿತ್ತು. ಆಗ ಅಗ್ನಿಶಾಮಕ ದಳವನ್ನು ಪ್ರತ್ಯೇಕವಾಗಿ ಸರ್ಕಾರದಿಂದ ನಿಯೋಜನೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ನಮ್ಮ ಕಾಂಟ್ರ್ಯಾಕ್ಟ್ ಕೈ ತಪ್ಪಿತ್ತು ಎಂದು ತಿಳಿಸಿದರು.
ಏರೋ ಶೋ ಆರಂಭಕ್ಕೂ ಎರಡು ತಿಂಗಳ ಮುನ್ನವೇ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಕೊಳ್ಳಬೇಕು. ಈ ನಿಟ್ಟಿನಲ್ಲಿ ಏರೋ ಶೋ ನಡೆಯುವ ಸುತ್ತಮುತ್ತಲಿನ ಜಾಗದಲ್ಲಿರುವ ಒಣ ಹುಲ್ಲನ್ನು ತೆಗೆದು ಹಾಕಬೇಕು. ಮಣ್ಣು ಕಾಣುವವರೆಗೂ ನೆಲವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಆದರೆ ಈ ಬಾರಿ ಏರೋ ಶೋ ನಡೆಸುತ್ತಿರುವವರು ಒಣ ಹುಲ್ಲನ್ನು ಹಾಗೆ ಬಿಟ್ಟಿದ್ದಾರೆ. ಇದರಿಂದಾಗಿ ಅಗ್ನಿ ಅವಘಡ ಸಂಭವಿಸಿದೆ ಎಂದು ದೂರಿದರು.
ಏರೋ ಶೋ ನಡೆಯುವ ಸುತ್ತಲಿನ ಪ್ರದೇಶಕ್ಕೆ ದಿನವೂ ಸುಮಾರು 50 ಲಕ್ಷ ಲೀಟರ್ ನೀರು ಹಾಕಬೇಕು. ಇಂತಹ ಎಕ್ಸಿಬಿಷನ್‍ಗಳನ್ನು ಕೇವಲ ಒಬ್ಬರಿಗೆ ಕಾಂಟ್ರ್ಯಾಕ್ಟ್ ನೀಡಬಾರದು. ಏಕೆಂದರೆ ನಿರ್ವಹಣೆ ಕಷ್ಟವಾಗುತ್ತದೆ. ಇಂತಹ ನಿರ್ಧಾರಗಳನ್ನು ಕೇಂದ್ರ ರಕ್ಷಣಾ ಸಚಿವಾಲಯ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಹಣ ಉಳಿಸುವ ಉದ್ದೇಶದಿಂದ ಅನೇಕ ಮುಂಜಾಗ್ರತಾ ಕ್ರಮಗಳ ಬಗ್ಗೆ ನಿರ್ಲಕ್ಷಿಸಿದ್ದಾರೆ. ರಕ್ಷಣಾ ಸಚಿವಾಲಯವು ಕಾಂಟ್ರ್ಯಾಕ್ಟ್ ನೀಡಲು ಟೆಂಡರ್ ಕರೆಯುತ್ತದೆ. ಹೀಗಾಗಿ ನಾನು ಕಳೆದ ಹತ್ತು ವರ್ಷಗಳಿಂದ ಕಾಂಟ್ರ್ಯಾಕ್ಟ್ ಪಡೆದು ಅಚ್ಚುಕಟ್ಟಾಗಿ ಕೆಲಸ ಮಾಡಿದ್ದೆ. ಆದರೆ ಈ ಬಾರಿ ತಾಂತ್ರಿಕ ಸಮಸ್ಯೆ ನೆಪವೊಡ್ಡಿ ಎಚ್‍ಎಎಲ್ ನನಗೆ ಕಾಂಟ್ರ್ಯಾಕ್ಟ್ ಕೈ ತಪ್ಪಿಸಿತು ಎಂದು ಹೇಳಿದರು.
ಈ ಬಾರಿ ಕಾಂಟ್ರ್ಯಾಕ್ಟರ್ ಪಡೆದವರು ಯಾರು ಯಾವ ಕೆಲಸ ಮಾಡುತ್ತಿದ್ದಾರೆ ಎನ್ನುವುದೇ ಅರ್ಥವಾಗುತ್ತಿಲ್ಲ. ಅಷ್ಟೇ ಅಲ್ಲದೆ ಕಾಂಟ್ರ್ಯಾಕ್ಟ್ ಕೊಟ್ಟ ಬಳಿಕ ಎಚ್‍ಎಎಲ್ ಅಧಿಕಾರಿಗಳು ಬಂದು ಕಾಮಗಾರಿಯನ್ನು ಪರಿಶೀಲನೆ ಮಾಡಬೇಕು. ಆದರೆ ಹುಲ್ಲು ಇದ್ದರೂ ಏರೋ ಶೋ ಹೇಗೆ ನಡೆಸಿದರು ಎನ್ನುವುದೇ ಅರ್ಥವಾಗುತ್ತಿಲ್ಲ ಎಂದು ದೂರಿದರು.
https://www.youtube.com/watch?v=1MBmvHvh1bU
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv