ಯಡಿಯೂರು ಸಿದ್ದಲಿಂಗೇಶ್ವರ ಜಾತ್ರೆ ಸಂಪನ್ನ

Public TV
1 Min Read
Yediyuru Siddhalingeshwara

ತುಮಕೂರು: ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿಯ ರಥೋತ್ಸವ (Yediyur siddhalingeshwara Rathotsava) ಶನಿವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆಯಿಂದಲೇ ಸ್ವಾಮಿ ಗದ್ದುಗೆಗೆ ವಿಶೇಷ ಅಭಿಷೇಕ, ಅಲಂಕಾರ ಮತ್ತು ಪೂಜೆಗಳು ನಡೆಯಿತು. 12 ಗಂಟೆಗೆ ಸಿದ್ದಗಂಗಾಮಠದ ಸಿದ್ದಲಿಂಗ ಸ್ವಾಮೀಜಿ ಬಾಳೆಹೊನ್ನೂರು ಶಾಖಾಮಠದ ರೇಣುಕ ಶಿವಾಚಾರ್ಯ, ಅಂಕನಹಳ್ಳಿ ಮಠದ ಶಿವರುದ್ರ ಶಿವಾಚಾರ್ಯ, ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನಂದಿಧ್ವಜ ಪೂಜೆಯ ನಂತರ ಷಟ್‌ಸ್ಥಲ ಧ್ವಜ ಹರಾಜು ಪ್ರಕ್ರಿಯೆ ನಡೆದು ಮೈಸೂರಿನ ದೀಪಕ್ ಸದಾಶಿವಯ್ಯ ಪಡೆದುಕೊಂಡರು.

ಸಿದ್ಧಲಿಂಗೇಶ್ವರ ಸ್ವಾಮಿ ನಿರ್ವಿಕಲ್ಪ ಸಮಾಧಿಯಾದ ಅಭಿಜಿನ್ ಮುಹೂರ್ತದಲ್ಲಿ ರಥಬೀದಿಯಲ್ಲಿ ರಥೋತ್ಸವ ಪ್ರಾರಂಭವಾಗಿದ್ದು, ಸಾವಿರಾರು ಭಕ್ತರು ತೇರು ಎಳೆದು ಸಂಭ್ರಮಿಸಿದರು. ಧವನ, ಬಾಳೆಹಣ್ಣು ಮತ್ತು ಕರಿಮೆಣಸನ್ನು ರಥಕ್ಕೆ ತೂರಿ ಹರಕೆ ಸಮರ್ಪಿಸಿದರು. ಇದನ್ನೂ ಓದಿ: ವಕ್ಫ್ ಆಸ್ತಿಯಲ್ಲಿ ಬಡವರಿಗಾಗಿ ಶಾಲೆ, ಆಸ್ಪತ್ರೆ ಮನೆ ಕಟ್ಟಿಸ್ತೇವೆ – ಸಿಎಂ ಯೋಗಿ

ಬಿಸಿಲಿನ ಝಳ ಹೆಚ್ಚಾಗಿದ್ದರೂ, ಅಸಂಖ್ಯಾತ ಭಕ್ತರ ದಾಹ ಮತ್ತು ಹಸಿವು ತಣಿಸಲು ದೇವಾಲಯ ಸಿಬ್ಬಂದಿ, ದಾಸೋಹ ಮಹಾಮನೆ ಸೇರಿದಂತೆ ನೂರಾರು ಕಡೆ ಅರವಂಟಿಕೆ ನಡೆಸಲಾಗಿತ್ತು. ನೀರುಮಜ್ಜಿಗೆ, ಪಾನಕ, ಹೆಸರುಬೇಳೆ ಕೊಸಂಬರಿ, ವಿವಿಧ ಬಗೆಯ ಭಕ್ಯಗಳನ್ನು ವಿತರಿಸಿದರು. ಇದನ್ನೂ ಓದಿ: L2: ಎಂಪುರಾನ್‌ ನಿರ್ದೇಶಕ ಪೃಥ್ವಿರಾಜ್‌ಗೆ ಐಟಿ ನೋಟಿಸ್‌ – ಸಂಭಾವನೆ ವಿವರ ನೀಡುವಂತೆ ಸೂಚನೆ

Share This Article