– ನಾನು ಲಿಂಗಾಯತ, ನಾನು ಒಕ್ಕಲಿಗ, ಆ ಜಾತಿ, ಈ ಜಾತಿ ಅಂತ ಬಿಟ್ಟುಬಿಡಿ
– ಲೋಕಸಭೆಯಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲಬೇಕು
– ಬಿಜೆಪಿ ಕಚೇರಿಯಲ್ಲಿ ವಿಜಯೇಂದ್ರ ಮಾತು
ಬೆಂಗಳೂರು: ನಾನು ಲಿಂಗಾಯತ, ನಾನು ಒಕ್ಕಲಿಗ, ಆ ಜಾತಿ, ಈ ಜಾತಿ ಅಂತ ಬಿಟ್ಟು ನಾನು ಭಾರತೀಯ ಜನತಾ ಪಾರ್ಟಿಯ (BJP) ಕಾರ್ಯಕರ್ತ ಅಂತ ಭಾವಿಸಿ ನಾವೆಲ್ಲರೂ ಒಗ್ಗಟ್ಟಿನಿಂದ ಪಕ್ಷಕ್ಕೆ ಕೆಲಸ ಮಾಡಬೇಕೆಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹೇಳಿದ್ದಾರೆ.
Advertisement
ಕರ್ನಾಟಕ ಬಿಜೆಪಿಯ (Karnataka BJP) 11ನೇ ಅಧ್ಯಕ್ಷರಾಗಿ ಶಾಸಕ ವಿಜಯೇಂದ್ರ ಇಂದು ಅಧಿಕಾರ ಸ್ವೀಕರಿಸಿದರು. ಕರ್ನಾಟಕ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ವಿಜಯೇಂದ್ರ ಅವರಿಗೆ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರು ಪಕ್ಷದ ಬಾವುಟವನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು.
Advertisement
Advertisement
ಈ ವೇಳೆ ಮಾತನಾಡಿದ ಅವರು, ದೀಪಾವಳಿ (Deepavali) ಶುಭ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರ ಅಶೀರ್ವಾದದಿಂದ ನಾನು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದೇನೆ. ರಾಜ್ಯದ ಲಕ್ಷಾಂತರ ಕಾರ್ಯಕರ್ತರು ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಆರಂಭದಲ್ಲೇ ಹೇಳಿದರು.
Advertisement
ನನಗೆ ಅಧ್ಯಕ್ಷ ಸ್ಥಾನ ಸಿಗುತ್ತದೆ ಎಂದು ನಾನು ನಿರೀಕ್ಷೆಯೇ ಮಾಡಿರಲಿಲ್ಲ. ಜೆಪಿ ನಡ್ಡಾ ಅವರು ನನ್ನ ಹೆಸರನ್ನು ಘೋಷಣೆ ಮಾಡಿದ ಮರುಕ್ಷಣದಿಂದ ಎಲ್ಲಾ ನಾಯಕರು ವೈಯಕ್ತಿಕವಾಗಿ ನನಗೆ ಶುಭ ಹಾರೈಸಿದ್ದಾರೆ. ಹಿರಿಯರು, ಸಂಘ ಪರಿವಾರ ನಾಯಕರ ಎಲ್ಲರ ಸೂಚನೆ, ಸಲಹೆಯನ್ನು ಪಡೆದು ಸಂಘಟನೆ ಮಾಡುತ್ತೇನೆ. ಹಗಲು ರಾತ್ರಿ ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ಧ್ವನಿ ಎತ್ತುವ ಮೂಲಕ ರಸ್ತೆಗೆ ಇಳಿದು ಭ್ರಷ್ಟ ಸರ್ಕಾರದ ವಿರುದ್ಧ ಹೋರಾಡುತ್ತೇನೆ ಎಂದು ತಿಳಿಸಿದರು.
28ಕ್ಕೆ 28 ಲೋಕಸಭಾ ಕ್ಷೇತ್ರವನ್ನು ಗೆಲ್ಲುವುದು ಈಗ ನಮ್ಮ ಮುಂದಿರುವ ಗುರಿ. ಇದರಲ್ಲಿ ನಮ್ಮ ಸ್ವಾರ್ಥ ಇಲ್ಲ. ಒಂದು ದಿನವೂ ರಜೆ ತೆಗೆದುಕೊಳ್ಳದೇ ಭಾರತ ದೇಶವನ್ನು ಅಗ್ರಮಾನ್ಯ ದೇಶವನ್ನಾಗಿ ಮಾಡಬೇಕು ಎಂದು ಕನಸು ಕಾಣುತ್ತಿರುವ ಪ್ರಧಾನಿ ಮೋದಿ ಅವರ ಬಲವನ್ನು ಬಲಪಡಿಸಬೇಕು. ಹಿಂದೆ 20ಕ್ಕೂ ಹೆಚ್ಚು ಲೋಕಸಭಾ ಸ್ಥಾನವನ್ನು ನಾವು ಗೆಲ್ಲುತ್ತೇವೆ ಎಂದಾಗ ಯಡಿಯೂರಪ್ಪನವರನ್ನು ಹಾಸ್ಯ ಮಾಡಿದ್ದರು. ಆದರೆ ಅವರ ಅಧ್ಯಕ್ಷತೆಯಲ್ಲಿ 25 ಸ್ಥಾನವನ್ನು ಬಿಜೆಪಿ ಗೆದ್ದುಕೊಂಡಿತ್ತು. ಈಗ ನಾವು 28 ಕ್ಷೇತ್ರಗಳನ್ನು ಗೆಲ್ಲಲು ಕೆಲಸ ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: 1 ಬಾರಿ ಬೀದಿ ನಾಯಿ ಕಚ್ಚಿದ್ರೆ ಕನಿಷ್ಟ 10 ಸಾವಿರ ಪರಿಹಾರ ಕೊಡಬೇಕು: ಹೈಕೋರ್ಟ್
ಚುನಾವಣಾ ಸಮಯದಲ್ಲಿ ಕಾಂಗ್ರೆಸ್ (Congress) ನಾಯಕರು ನಮ್ಮ ಸರ್ಕಾರವನ್ನು 40% ಸರ್ಕಾರ ಎಂದು ಟೀಕೆ ಮಾಡಿದರು. ಕಾಂಗ್ರೆಸ್‌ನ ಹೇಳಿದ ಸುಳ್ಳನ್ನು ಜನರು ನಂಬಿದರು.ಈಗ ಕಾಂಗ್ರೆಸ್ ನಾನು ಹೇಳಿದ ಆರೋಪವನ್ನು ಜಾರಿ ಮಾಡಲು ಹೊರಟಿದೆ. ಆಡಳಿತ ಪಕ್ಷದ ಶಾಸಕರು ತಲೆ ತಗ್ಗಿಸಿಕೊಂಡು ಓಡಾಡುತ್ತಿದ್ದಾರೆ. ಅವರಿಗೆ ಯಾವುದೇ ಅನುದಾನ ಸಿಗುತ್ತಿಲ್ಲ. ದಕ್ಷಿಣ ಭಾರತದ ಬಿಜೆಪಿ ಭದ್ರಕೋಟೆಯಾಗಿರುವ ಕರ್ನಾಟಕದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅರಳಿಸಲು ನಾವೆಲ್ಲರೂ ಮತ್ತೊಮ್ಮೆ ಸಂಕಲ್ಪ ತೊಟ್ಟು ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.
ಶಿಕಾರಿಪುರ ತಾಲೂಕಿನ ಜನತೆ ಆಶೀರ್ವಾದಿಂದ ಮೊದಲ ಬಾರಿಗೆ ನಾನು ಜನ ಪ್ರತಿನಿಧಿಯಾಗಿ ಆಯ್ಕೆಯಾಗಿ ಅಧ್ಯಕ್ಷ ಸ್ಥಾನವನ್ನು ಏರಿದ್ದೇನೆ. ಈ ಮಹತ್ವದ ಸ್ಥಾನ ಸಿಗಲು ಕಾರಣರಾದ ಶಿಕಾರಿಪುರದ ಮತದಾರರಿಗೆ ಮತ್ತು ಪಕ್ಷ ಸಂಘಟನೆ ಮಾಡಿದ ಹಿರಿಯರಿಗೆ ಈ ವೇಳೆ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ ಆಶೀರ್ವಾದ, ಆದೇಶದಂತೆ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅಮಿತ್ ಶಾ ಅವರನ್ನು ಬೆಂಗಳೂರಿಗೆ ಕರೆಸಿ ಲಕ್ಷ ಜನರನ್ನು ಆಹ್ವಾನಿಸಿ ದೊಡ್ಡ ಸಮಾರಂಭ ಮಾಡುತ್ತೇವೆ. ವಿಜಯೇಂದ್ರ ಘೋಷಣೆ ಬಳಿಕ ಉತ್ಸಾಹ ಹೆಚ್ಚಾಗಿದೆ ಎಂದು ಹೇಳಿದರು.
ನಳಿನ್ ಕುಮಾರ್ ಕಟೀಲ್ ಮಾತನಾಡಿ, ನನಗೆ ಹೇಗೆ ಸಹಕಾರ, ಶಕ್ತಿಯನ್ನ ಕೊಟ್ಟಿದ್ದೀರಿ ಹಾಗೆ ವಿಜಯೇಂದ್ರ ಅವರಿಗೂ ಕೊಡಬೇಕು. ಎಲ್ಲಾ ಹಿರಿಯರ ಸಹಕಾರ ಇರುತ್ತದೆ. ಸಾಮೂಹಿಕ ನಾಯಕತ್ವದ ಮೂಲಕ ಪಕ್ಷ ಸಂಘಟನೆ ಮಾಡಬೇಕು. ವಿಜಯೇಂದ್ರಗೆ ಬೆಂಗಾವಲಾಗಿ ಜೊತೆಯಲ್ಲಿ ಇರುತ್ತೇವೆ ಎಂದು ತಿಳಿಸಿದರು.