ಬಿಎಸ್‌ವೈ ಕಡೆಗಣಿಸಿದ್ದೇ ಬಿಜೆಪಿ ಸೋಲಿಗೆ ಕಾರಣ: ರೇಣುಕಾಚಾರ್ಯ

Public TV
2 Min Read
renukacharya

ಬೆಂಗಳೂರು: ಯಡಿಯೂರಪ್ಪ (Yediyurappa) ಅವರನ್ನ ಕಡೆಗಣಿಸಿದ್ದೇ ಬಿಜೆಪಿ ಸೋಲಿಗೆ ಕಾರಣ ಎಂದು ಸ್ವಪಕ್ಷದವರ ವಿರುದ್ಧವೇ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ (M.P.Renukacharya) ಗುಡುಗಿದ್ದಾರೆ.

ದಾವಣಗೆರೆಯಲ್ಲಿ (Davanagere) ಮಾತನಾಡಿದ ಅವರು, ಸಾಕಷ್ಟು ಡ್ಯಾಮೇಜ್ ಆದ ಮೇಲೆ ಬಿಎಸ್‌ವೈ ಅವರನ್ನ ಮುಂದೆ ತಂದಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ, ಬಿಎಸ್‌ವೈ ನೋಡದ ಹಳ್ಳಿ ಇಲ್ಲ. ಬಿಎಸ್‌ವೈ ಕಡೆಗಣಿಸಿದ್ದೇ ಪಕ್ಷದ ಸೋಲಿಗೆ ಕಾರಣವಾಗಿದೆ. ಗ್ರಾಪಂ ಗೆಲ್ಲುವುದಕ್ಕೆ ಆಗದೇ ಇರುವವರು ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದರು. ಇವರ ಮುಖ ನೋಡಿ ಪಕ್ಷ ಹೀನಾಯ ಸ್ಥಿತಿಗೆ ತಲುಪಿದೆ. ಈಗ ವೋಟ್ ಬೇಕು ಅಂತ ಬಿಎಸ್‌ವೈ ನಾಯಕತ್ವ ಅಂತ ಹೇಳುತ್ತಿದ್ದಾರೆ. ನಾನು ಎಂಪಿ ಚುನಾವಣೆ ಆಕಾಂಕ್ಷಿ. ಟಿಕೆಟ್ ಬಗ್ಗೆ ಕಾದು ನೋಡುತ್ತೇನೆ. ಟಿಕೆಟ್ ಸಿಗದೇ ಇದ್ದರೆ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: INDIA ಸಂಘಟನೆಯಿಂದ ಬಿಜೆಪಿ ಹೆದರಿದೆ.. ಎರಡು ಮಾತಿಲ್ಲ: ಸ್ವಪಕ್ಷ ವಿರುದ್ಧವೇ ಹೆಚ್.ವಿಶ್ವನಾಥ್ ಹೇಳಿಕೆ

BSYediyurappa 2

ನನ್ನ ಹೋರಾಟ ಯಾರ ವಿರುದ್ಧವೂ ಕತ್ತಿ ಮಸೆಯೋಕೆ ಅಲ್ಲ. ಬಹಳ ಮಾತನಾಡುವವರ ಕೊಡುಗೆ ಏನು? ಸಂಘಟನೆ ಉಳಿಯೋಕೆ ಕೆಲಸ ಮಾಡುತ್ತೇನೆ. ನಾಳೆ ಮಾಡಾಳು ವಿರೂಪಾಕ್ಷಪ್ಪರನ್ನ ಭೇಟಿ ಮಾಡುತ್ತೇವೆ. ರೆಬೆಲ್ ರೇಣುಕಾಚಾರ್ಯ ಅಂತ ಕರೆದುಕೊಳ್ಳಲಿ. ನನ್ನ ಮೇಲೆ ತೂಗುಗತ್ತಿ ತೂಗುತ್ತಾ ಇದೆ. ನಾನು ಯಾವುದಕ್ಕೂ ಹೆದರಲ್ಲ. ನೋಟಿಸ್‌ಗೆ ಉತ್ತರ ಕೊಡುವುದಿಲ್ಲ. ಬಿಎಸ್‌ವೈ ವಿರುದ್ಧ ಮಾತನಾಡಿದವರ ಮೇಲೆ ಮೊದಲು ಕ್ರಮ ಕೈಗೊಳ್ಳಿ. ಈಗ ನಿಮಗೆ ಬಿಎಸ್‌ವೈ ಬೇಕಾ ಎಂದು ಸ್ವಪಕ್ಷದವರಿಗೆ ಟಾಂಗ್ ಕೊಟ್ಟಿದ್ದಾರೆ.

ಇದಕ್ಕೂ ಮುನ್ನ ಬಿಜೆಪಿ ಉಚ್ಚಾಟಿತ ಮಾಜಿ ಶಾಸಕ ಗುರುಸಿದ್ದನಗೌಡರನ್ನು ರೇಣುಕಾಚಾರ್ಯ ಭೇಟಿಯಾಗಿದ್ದರು. ದಾವಣಗೆರೆಯ ಸಿದ್ದ ವೀರಪ್ಪ ಬಡಾವಣೆಯಲ್ಲಿರುವ ನಿವಾಸದಲ್ಲಿ ಭೇಟಿಯಾದರು. ಈ ಕುರಿತು ಮಾತನಾಡಿದ ಅವರು, ನೋಟಿಸ್ ನೀಡದೇ ಉಚ್ಚಾಟನೆ ಮಾಡಿದ್ದು ಖಂಡನೀಯ. ಚುನಾವಣೆಯ ಸಂದರ್ಭದಲ್ಲಿ ಓಡಾಟ ಮಾಡಿ ಪಕ್ಷ ಕಟ್ಟಿದವರು. ಕಳೆದ ವಾರ ಉಚ್ಚಾಟನೆ ಮಾಡುತ್ತಾರೆ ಎಂದರೆ ಹೇಗೆ? ಚುನಾವಣೆಯಲ್ಲಿ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದರೆ ನೋಟಿಸ್ ನೀಡಬೇಕು. ಆದರೆ ಯಾವುದೇ ನೋಟಿಸ್ ನೀಡದೆ ಪಕ್ಷದಿಂದ ಗುರುಸಿದ್ದನಗೌಡ್ರನ್ನು ಉಚ್ಚಾಟನೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರು ಬಂದ್‌ಗೆ ಕರೆ; ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ: ಶಿಕ್ಷಣ ಇಲಾಖೆ

ರವಿಕುಮಾರ್ ಲೋಕಾಸಭಾ ಚುನಾವಣೆ ಟಿಕೆಟ್ ಅಕಾಂಕ್ಷಿ. ಆದ್ದರಿಂದ ಬೆಳೆಯಬಾರದು ಎಂದು ಉಚ್ಚಾಟನೆ ಮಾಡಿದ್ದು ಖಂಡನೀಯ. ರವೀಂದ್ರನಾಥ, ಗುರುಸಿದ್ದನಗೌಡ್ರನ್ನು ಮೂಲೆಗುಂಪು ಮಾಡುತ್ತಾರೆ. ಜಿಲ್ಲೆಯ ಐದು ಶಾಸಕರು ಒಟ್ಟಾಗಿ ಸಚಿವ ಸ್ಥಾನ ಕೇಳಿದರೂ ಕೊಡಲು ಬಿಡಲಿಲ್ಲ. ಸಚಿವ ಸ್ಥಾನ ತಪ್ಪಿಸಿದರು. ಏಕಪಕ್ಷೀಯವಾಗಿ ಜಿಲ್ಲಾ ಅಧ್ಯಕ್ಷರು ನಿರ್ಧಾರ ಕೈಗೊಂಡಿದ್ದಾರೆ. ದೇಶಕ್ಕೆ ಮೋದಿ ಹೇಗೋ ರಾಜ್ಯಕ್ಕೆ ಯಡಿಯೂರಪ್ಪ. ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋದ ಮಹಾನ್ ನಾಯಕ. ವ್ಯವಸ್ಥಿತವಾಗಿ ಯಡಿಯೂರಪ್ಪ ಅವರನ್ನು ಇಳಿಸುವ ಕೆಲಸ ಮಾಡಿದ್ದರು. ಸಂಚು ಮಾಡಿ ಜೈಲಿಗೆ ಕಳುಹಿಸಿದರು. ನಮ್ಮವರೇ ಆರೋಪ ಹೊರಿಸಿ ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದರು. 2010-12 ರಲ್ಲಿ ಆರೋಪವನ್ನು ಹೊರಿಸಿ ಜೈಲಿಗೆ ಕಳಿಸಿದರು. ಆದರೆ ಬಿಎಸ್‌ವೈ ವಿರುದ್ಧ ಮಾತನಾಡಿದ ಅವರಿಗೆ ನೋಟಿಸ್ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Web Stories

Share This Article