ಹುಬ್ಬಳ್ಳಿ: ಮಾಜಿ ಸಿಎಂ ಯಡಿಯೂರಪ್ಪ ಅವರು ಕೊಟ್ಟ ಮಾತನ್ನ ಉಳಿಸಿಕೊಳ್ಳಲಿಲ್ಲ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಜಯಮೃತ್ಯುಂಜಯ ಸ್ವಾಮೀಜಿ ಅವರು ಸುದ್ದಿಗೊಷ್ಠಿ ನಡೆಸಿದ್ದು, ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ನಮ್ಮ ಸಮಾಜದ ಶಕ್ತಿ ತೋರಿಸಲಾಗಿದೆ. 2ಎ ಪರವಾಗಿ 20 ತಿಂಗಳಿಂದ ನಿರಂತರವಾಗಿ ಹೋರಾಟ ಮಾಡುತ್ತ ಬಂದಿದ್ದೇವೆ. ಬೆಂಗಳೂರಿನಲ್ಲಿ ಹೋರಾಟ ಮಾಡಿದಾಗ ಯಡಿಯೂರಪ್ಪ ಅವರು ನಮಗೆ ಮಾತು ಕೊಟ್ಟಿದ್ದರು. ಆದರೆ ಯಡಿಯೂರಪ್ಪ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ ಎಂದರು. ಇದನ್ನೂ ಓದಿ: ಪಾಕ್ ಏಜೆಂಟರ ಹನಿಟ್ರ್ಯಾಪ್‍ಗೆ ಸಿಲುಕಿದ ಸೇನಾ ಸಿಬ್ಬಂದಿ – ಮಾಹಿತಿ ಸೋರಿಕೆ
Advertisement
Advertisement
ಸಿಎಂ ಬಸವರಾಜ ಬೊಮ್ಮಾಯಿ ಅವರು ಆಯೋಗದಿಂದ ವರದಿ ಬಂದ ಮೇಲೆ ಮೀಸಲಾತಿ ಕೊಡುತ್ತೇನೆ ಎಂದಿದ್ದರು. ಆದರೆ ಆಯೋಗದ ವರದಿ ಬರಲಿಕ್ಕೆ ಎಷ್ಟು ದಿನ ಬೇಕು. ಈಗ ನಮ್ಮ ಹೋರಾಟ ತೀವ್ರಗೊಂಡ ನಂತರ ಆಯೋಗ ಸರ್ವೇ ಮಾಡಲು ಮುಂದಾಗಿದೆ. ಸರ್ಕಾರ ಕುಂಟು ನೆಪ ಹೇಳಿ ಮೀಸಲಾತಿ ಕೊಡುವುದನ್ನು ತಪ್ಪಿಸಬಾರದು ಎಂದು ಕಿಡಿಕಾರಿದರು.
Advertisement
ನಮ್ಮ ಹೋರಾಟ ಈಗ ಸಿಎಂ ಸ್ವ-ಜಿಲ್ಲೆಯಿಂದ ಮುಖ್ಯಮಂತ್ರಿ ತವರು ಜಿಲ್ಲೆಗೆ ಬಂದಿದೆ. ಇದೇ 30 ರಂದು ಹುಬ್ಬಳ್ಳಿಯಲ್ಲಿ ಹೋರಾಟವನ್ನ ಮಾಡುತ್ತೇವೆ. ಬೊಮ್ಮಾಯಿ ಅವರು 4 ಬಾರಿ ಮಾತು ಕೊಟ್ಟಿದ್ದಾರೆ. ಆದ್ರೆ ಈ ಬಾರಿ ಮಾತು ತಪ್ಪಬಾರದು, ಈಗ ಸಿಎಂಗೆ ನೆನಪು ಮಾಡುವುದಕ್ಕೆ ಹುಬ್ಬಳ್ಳಿಯಲ್ಲಿ ಸತ್ಯಾಗ್ರಹ ಮಾಡುತ್ತೇವೆ ಎಂದು ತಿಳಿಸಿದರು.
Advertisement
ನಗರದ ನೆಹರು ಮೈದಾನದಲ್ಲಿ ರ‍್ಯಾಲಿ ಆರಂಭವಾಗುತ್ತದೆ. ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಿ ಸರ್ಕಾರವನ್ನ ಎಚ್ಚರಿಸುತ್ತೇವೆ. ನಮ್ಮ ಸಮಾಜಕ್ಕೆ ಮೀಸಲಾತಿ ನೀಡಿದ್ರೆ ಹಾವೇರಿ ಜಿಲ್ಲೆಯಲ್ಲಿ ವಿಜಯೋತ್ಸವ ಮಾಡುತ್ತೇವೆ. ಮೂರು ಬಾರಿ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ ಎಂದು ಮತ್ತೆ-ಮತ್ತೆ ನೆನಪು ಮಾಡಿದರು. ಇದನ್ನೂ ಓದಿ: ಕಾಂಗೋದಲ್ಲಿ ಯುಎನ್ ವಿರೋಧಿ ಪ್ರತಿಭಟನೆ: ಇಬ್ಬರು ಭಾರತೀಯ ಶಾಂತಿಪಾಲನ ಸೈನಿಕರು ಹುತಾತ್ಮ
ಈಗ ನಾಲ್ಕನೇ ಬಾರಿ ಮಾತು ಕೊಟ್ಟಿದ್ದಾರೆ. ಮೀಸಲಾತಿ ಕೊಡದೆ ಹೋದ್ರೆ, 30 ರಂದು ನಮ್ಮ ಮುಂದಿನ ನಿರ್ಧಾರವನ್ನ ತೆಗೆದುಕೊಳ್ಳುತ್ತೇವೆ. ಮೀಸಲಾತಿ ಸಿಗದೆ ಹೋದ್ರೆ ಶಾಸಕ ಬಸವರಾಜ ಪಾಟೀಲ್, ಸಿಎಂ ಮನೆ ಮುಂದೆ ಧರಣಿ ಮಾಡಲು ತೀರ್ಮಾನ ಮಾಡಿದ್ದಾರೆ. ಇದೇ 30 ರಂದು ಹತ್ತು ಸಾವಿರ ಜನ್ರು ಸೇರಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.