ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಎದುರೇ ಮುಂದಿನ ಸಿಎಂ ವಿಜಯೇಂದ್ರ ಅವರಿಗೆ ಜೈ ಎಂದು ಕೂಗಿದ ಘಟನೆ ಕಾವೇರಿ ನಿವಾಸದಲ್ಲಿ ನಡೆಯಿತು.
ಯಡಿಯೂರಪ್ಪ ಅವರನ್ನ ಭೇಟಿಯಾಗಿ ಶುಭಾಶಯ ಕೋರಿ ನಿವಾಸದಿಂದ ಸಿಎಂ ಹೊರಗೆ ಆಗಮಿಸಿದ್ರು. ಸಿಎಂ ಜೊತೆಯಲ್ಲೇ ವಿಜಯೇಂದ್ರ ಕೂಡ ಹೊರಗೆ ಬಂದ್ರು. ಆ ವೇಳೆ ನಿವಾಸದ ಆವರಣದಲ್ಲಿ ನೆರೆದಿದ್ದ ಯಡಿಯೂರಪ್ಪ ಅಭಿಮಾನಿಗಳು ಮುಂದಿನ ಸಿಎಂ ವಿಜಯೇಂದ್ರಗೆ ಜೈ ಅಂತಾ ಜೈಕಾರ ಕೂಗಿದ್ರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಜೈ ಎಂದು ಕೂಗಿ ತಕ್ಷಣವೇ ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಅವರಿಗೆ ಜೈ ಎಂದು ಕೂಗಿದ್ರು.
ಇನ್ನೊಂದೆಡೆ ಯಡಿಯೂರಪ್ಪಗೆ ಶುಭಾಶಯ ಕೋರಿ ಮಾತನಾಡಿದ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ರಾಜ್ಯದಲ್ಲಿ ಮುಂದಿನ ಚುನಾವಣೆಗಳು ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಬೇಕು ಅಂತೇಳಿದ್ರು. ಇದನ್ನೂ ಓದಿ: ಎಸ್‍ಪಿ ಆಡಳಿತದಲ್ಲಿ ಉತ್ತರ ಪ್ರದೇಶ ಅಪರಾಧ ಪ್ರಕರಣಗಳಲ್ಲಿ ನಂಬರ್ 1 ಆಗಿತ್ತು : ಅಮಿತ್ ಶಾ
ಯಡಿಯೂರಪ್ಪ ಅಂದರೆ ಚೈತನ್ಯದ ಚಿಲುಮೆ. ಅವರನ್ನು ನೋಡಿದರೆ ನಮಗೆ ನೂರು ಪಟ್ಟು ಶಕ್ತಿ ತುಂಬಿದಂತಾಗುತ್ತದೆ. ನಮ್ಮೆಲ್ಲರಿಗೆ ಶಕ್ತಿ ತುಂಬಲು ಅವರು ಮತ್ತೊಮ್ಮೆ ಜನತೆಯ ಸೇವೆ ಮಾಡುವಂತಾಗಬೇಕು. ಅವರ ನೇತೃತ್ವದಲ್ಲಿ ಚುನಾವಣೆಗಳು ನಡೆಯಬೇಕು ಅಂತಾ ಅಭಿಪ್ರಾಯಪಟ್ಟರು.