ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬಕ್ಕೆ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಜನರಿಗೆ ಒಳ್ಳೆದಾಗಲಿ ಅಂತ ಅಕ್ಕಿ, ಹಣ್ಣು ಹಂಪಲು ವಿತರಣೆ ಮಾಡ್ತಿದ್ದೀವಿ ಇದರಲ್ಲಿ ಯಾವುದೇ ಪ್ರಚಾರದ ಗಿಮಿಕ್ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆ ನಮ್ಮದು ಅನ್ನೋ ಸಿಎಂ ಸಿದ್ದರಾಮಯ್ಯ ಹೇಳಿಕೆ ಅನ್ನಭಾಗ್ಯ ಅಕ್ಕಿ ಸಿದ್ದರಾಮಯ್ಯನವರ ಕೊಡುಗೆ ಅಲ್ಲ. ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡುತ್ತಿದೆ. ಕೇಂದ್ರದ ಅನುದಾನ ಪಡೆದು ನಮ್ಮ ಯೋಜನೆ ಅಂತ ಸಿದ್ದರಾಮಯ್ಯ ಹೇಳ್ತಿದ್ದಾರೆ. ಕೇಂದ್ರದ ಅನುದಾನ ನೀಡ್ತಿರೋದ್ರಿಂದ ಇದಕ್ಕೆ ‘ಪ್ರಧಾನಮಂತ್ರಿ ಅನ್ನಭಾಗ್ಯ ಯೋಜನೆ’ ಅಂತ ಹೆಸರಿಡಬೇಕು ಅಂತ ಆಗ್ರಹಿಸಿದ್ರು.
Advertisement
ಅನ್ನಭಾಗ್ಯದ ಅಕ್ಕಿ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಕಾಳ ಸಂತೆಯಲ್ಲಿ ಮಾರಾಟವಾಗ್ತಿದೆ. ಹಣ ಲೂಟಿ ಹೊಡೆಯಲಾಗ್ತಿದೆ. ನಮ್ಮ ಸರ್ಕಾರ ಬಂದ ಮೇಲೆ ಇದೆಲ್ಲವನ್ನು ಸರಿ ಮಾಡ್ತೀವಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಸ್ಲಂ ನಿವಾಸಿಗಳಿಗೆ ಯಡಿಯೂರಪ್ಪ ಅವರು ಅಕ್ಕಿ ವಿತರಣೆ ಮಾಡಿದರು. ಅಲ್ಲದೇ ನಗರದ ಎಲ್.ಆರ್.ಕಾಲೋನಿಗೆ ತೆರಳಿದ ಅಲ್ಲಿನೂ ಸಹ ಮಳೆಯಿಂದ ಹಾನಿಯಾದ ಕುಟುಂಬಗಳಿಗೆ ಅಕ್ಕಿ ವಿತರಣೆ ಮಾಡಿದರು. ಇದಕ್ಕೆ ಯಡಿಯೂರಪ್ಪ ಅವರ ಜೊತೆ ಸಂಸದ ಪಿಸಿ ಮೋಹನ್ ಅವರು ಸಾಥ್ ನೀಡಿದರು.
Advertisement
ಬಿಜೆಪಿ ಕಚೇರಿಯಲ್ಲಿ ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಬಿಎಸ್‍ವೈ, ಇವತ್ತು ಹೈದ್ರಾಬಾದ್ ಕಾರ್ನಾಟಕ ವಿಮೋಚನಾ ದಿನವಾಗಿದೆ. ನಾನು ಸಿಎಂ ಅಗಿದ್ದಾಗ ಅಲ್ಲಿ ಹೋಗಿ ಬರುತ್ತಿದ್ದೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಸಿದ್ಧತೆ ಶುರುವಾಗಿವೆ. ಕೇಂದ್ರದ ಇಬ್ಬರು ಸಚಿವರನ್ನ ರಾಜ್ಯದ ಉಸ್ತುವಾರಿಗೆ ಕೊಟ್ಟಿದ್ದಾರೆ. ಹಾಗಾಗಿ ನಮ್ಮೆಲ್ಲರ ಶ್ರಮದಿಂದ ಕನಿಷ್ಠ 150 ಸೀಟು ಗೆಲ್ಲುವಂತೆ ಆಗಬೇಕು ಎಂದರು.
Advertisement
ದೈವ ಬಲ, ಜನ ಬಲ ಇದ್ದಾಗ ನಾವು ಅಧಿಕಾರಕ್ಕೆ ಬರೋದನ್ನ ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಈ ರಾಜ್ಯ ಸರ್ಕಾರದ ಸಚಿವರು ಲೂಟಿಯಲ್ಲಿ ತೊಡಗಿದ್ದಾರೆ. ಶೀಘ್ರದಲ್ಲೇ ಭ್ರಷ್ಟ ಸಚಿವರ ವಿರುದ್ಧ ಆರೋಪ ಪಟ್ಟಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಯಡಿಯೂರಪ್ಪ ಹೇಳಿದರು.
ಮೋದಿ ಅವರು ನದಿ ಜೋಡಣೆ ಮಾಡುತ್ತಿದ್ದಾರೆ. ಪ್ರತಿಯೊಬ್ಬ ರೈತನಿಗೂ ನೀರು ಸಿಗುವಂತಾಗಬೇಕು ಎಂಬ ಯೋಜನೆಗಳನ್ನ ಹಾಕಿಕೊಳ್ಳುತ್ತಿದ್ದಾರೆ. ಅವರ ಜನಪ್ರಿಯ ಯೋಜನೆಗಳು ಮನೆ ಮನೆಗೂ ತಲುಪಿಸುವ ಕೆಲಸ ಮಾಡಬೇಕು ಎಂದು ಹೇಳಿದರು.