ಮೈಸೂರು: ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಕೊಟ್ಟು ಗೊತ್ತೇ ಹೊರತು ಬೇಡಿ ಪಡೆದು ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೈಸೂರಿನಲ್ಲಿ ಪಬ್ಲಿಕ್ ಟಿವಿಗೆ ತಿಳಿಸಿದರು.
ಚುನಾವಣೆಗೆ ಟಿಕೆಟ್ ನೀಡದಿರುವ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಎಂಎಲ್‍ಸಿ ಆಗಲಿಲ್ಲ ಎಂದು ಯಡಿಯೂರಪ್ಪ ಅವರು ತಲೆ ಕೆಡಿಸಿಕೊಂಡಿಲ್ಲ. ಇದು ನನಗಾಗಲಿ, ಇನ್ನೊಬ್ಬರಿಗಾಗಲಿ ಆದ ಹಿನ್ನೆಡೆಯಲ್ಲ. ಪಕ್ಷ ನನಗೆ ಮುಂದೆ ಅವಕಾಶ ಕೊಡುತ್ತೆ. ಎಂಎಲ್‍ಎ ಆಗುತ್ತೇನೆ ಎಂಎಲ್‍ಸಿ ಆಗುತ್ತೇನೆ ಎಂದು ನಾನು ಪಕ್ಷ ಸಂಘಟಿಸುತ್ತಿಲ್ಲ. ವಿಜಯೇಂದ್ರ ಯಾವ ಸ್ಥಾನಕ್ಕೆ ಕರೆದುಕೊಂಡು ಹೋಗಬೇಕು ಎಂದು ಹೈಕಮಾಂಡ್‍ಗೆ ಗೊತ್ತಿದೆ ಎಂದರು.
ಟಿಕೆಟ್ ತಪ್ಪಿದ್ದಕ್ಕೆ ನನ್ನ ಅಭಿಮಾನಿಗಳು ಯಾರನ್ನು ವೈಯಕ್ತಿಕವಾಗಿ ಟೀಕೆ ಮಾಡಬಾರದು. ನಾನು ಅವರನ್ನು ಕೈ ಮುಗಿದು ಕೇಳಿ ಕೊಳ್ಳುತ್ತೇನೆ. ಯಾರ ಬಗ್ಗೆಯೂ ಟೀಕೆ ಮಾಡಬೇಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: 17 ವರ್ಷ ಲವ್, 2 ಮಕ್ಕಳಾದ ನಂತರ ಮದುವೆಯಾದ ನಿರ್ದೇಶಕ ಹನ್ಸಲ್ ಮೆಹ್ತಾ, ಸಫೀನಾ ಹುಸೇನ್
ಮಕ್ಕಳನ್ನು ಶಾಸಕರಾಗಿ ಮಾಡಿ ಎಂದು ಯಡಿಯೂರಪ್ಪ ಎಂದು ಯಾರನ್ನು ಕೇಳಲ್ಲ. ಯಡಿಯೂರಪ್ಪ ಅವರಿಗೆ ಕೊಟ್ಟು ಗೊತ್ತೇ ಹೊರತು ಬೇಡಿ ಪಡೆದು ಗೊತ್ತಿಲ್ಲ. ಮಗನನ್ನು ಎಂಎಲ್‍ಸಿ ಮಾಡಿ ಎಂದು ಯಡಿಯೂರಪ್ಪ ಅವರು ಕೇಂದ್ರದ ಯಾವ ನಾಯಕರಿಗೂ ಕೇಳಿ ಕೊಂಡಿಲ್ಲ. ನಾನು ಈಗ ಎಂಎಲ್‍ಸಿ ಆಗಲಿಲ್ಲ ಎಂಬ ಬಗ್ಗೆ ಯಡಿಯೂರಪ್ಪ ತಲೆನೂ ಕೆಡಿಸಿ ಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ನನ್ನ ಭವಿಷ್ಯದ ರಾಜಕೀಯ ವಿಚಾರವನ್ನ ಕಾಲವೇ ನಿರ್ಧರಿಸುತ್ತೆ ಎಂದರು.