ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿ, ಸೋಮವಾರ ಬಹುಮತವನ್ನು ಸಾಬೀತು ಪಡಿಸಿದ್ದಾರೆ. ಆದರೆ ಇದೂವರೆಗೂ ಸಂಪುಟ ರಚನೆಯಾಗಿಲ್ಲ. ಸಂಪುಟ ರಚನೆಯಲ್ಲಿ ಮುಖ್ಯಮಂತ್ರಿಗಳಿಗೆ ‘ಧರ್ಮ’ ಸಂಕಟ ಎದುರಾಗಿದ್ದು, ಯಾರಿಗೆ ಸಚಿವ ಸ್ಥಾನ ನೀಡಬೇಕೆಂಬ ಗೊಂದಲದಲ್ಲಿದ್ದಾರೆ ಎಂದು ಸಿಎಂ ಆಪ್ತ ಮೂಲಗಳು ತಿಳಿಸಿವೆ.
ಸಿಎಂ ಯಡಿಯೂರಪ್ಪಗೆ ಅವರಿಗೆ ಡಜನ್ ಗಟ್ಟಲೆ ಸಂಕಟ ಎದುರಿಸುತ್ತಿದ್ದು, ತಮ್ಮದೇ ಸಮುದಾಯದ ಆಪ್ತರ ತಲೆನೋವಾಗಿದೆ. ಯಡಿಯೂರಪ್ಪ ಕ್ಯಾಬಿನೆಟ್ ಸೇರಲು ಲಿಂಗಾಯತ ಸಮುದಾಯದ ಡಜನ್ ಗಟ್ಟಲೆ ಆಂಕಾಕ್ಷಿಗಳು ಇದ್ದಾರೆ. ಹೀಗಾಗಿ ಯಾರಿಗೆ ಸಚಿವ ಸ್ಥಾನ ಕೊಡುವುದು, ಯಾರಿಗೆ ಬಿಡುವುದು ಅನ್ನೋ ಧರ್ಮ ಸಂಕಟದಲ್ಲಿ ಬಿಎಸ್‍ವೈ ಎದುರಾಗಿದೆ. ಇದನ್ನೂ ಓದಿ: ಎಲ್ಲಾ ಸಚಿವಸ್ಥಾನ ಲಿಂಗಾಯತರಿಗೆ ಕೊಟ್ರೆ ಅತೃಪ್ತರು ವಿಷ ಕುಡಿಬೇಕಾ: ಮುಖಂಡರಿಗೆ ಬಿಎಸ್‍ವೈ ಪ್ರಶ್ನೆ
Advertisement
Advertisement
ಸಚಿವ ಸ್ಥಾನ ಆಂಕಾಕ್ಷಿಗಳು: ಜಗದೀಶ್ ಶೆಟ್ಟರ್, ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಸಿ.ಎಂ.ಉದಾಸಿ, ಜೆ.ಸಿ.ಮಾಧುಸ್ವಾಮಿ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ರೇಣುಕಾಚಾರ್ಯ, ಬಸನಗೌಡಪಾಟೀಲ್ ಯತ್ನಾಳ್, ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ, ದತ್ತಾತ್ರೇಯ ಪಾಟೀಲ್ ರೇವೂರ್.
Advertisement
ಈ 12 ಮಂದಿ ಸಚಿವ ಸ್ಥಾನದ ರೇಸಿನ ಮುಂಚೂಣಿಯಲ್ಲಿ ಇದ್ದಾರೆ. 12 ಮಂದಿ ಲಿಸ್ಟನ್ನು ಯಡಿಯೂರಪ್ಪ ಅವರು ಕನಿಷ್ಠ 5 ಸ್ಥಾನ, ಗರಿಷ್ಠ 7ಕ್ಕೆ ಇಳಿಸಬೇಕಿದೆ. ಒಂದೇ ಸಮುದಾಯದ ಡಜನ್ ಗಟ್ಟಲೆ ಶಾಸಕರನ್ನ ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಯಡಿಯೂರಪ್ಪ ಅವರು ಧರ್ಮಸಂಕಟದಲ್ಲಿ ಸಿಲುಕಿದ್ದಾರೆ.
Advertisement
ನಿಗಮ ಮಂಡಳಿ, ಸಂಸದೀಯ ಕಾರ್ಯದರ್ಶಿ ಸ್ಥಾನಗಳನ್ನ ಸಚಿವ ಸ್ಥಾನದಿಂದ ವಂಚಿತರಾದ ಆಪ್ತರಿಗೆ ಕೊಡುತ್ತಾರ? ಈ ಧರ್ಮಸಂಕಟವನ್ನ ಹೇಗೆ ಪರಿಹಾರ ಮಾಡುತ್ತಾರೆ ಎಂಬ ಕುತೂಹಲ ಮೂಡಿದೆ.