– ಕಾಂಗ್ರೆಸ್ 85 ಪರ್ಸೆಂಟ್ ಕಮಿಷನ್ ಪಡೆದ ಪಕ್ಷ
– ಬಿಜೆಪಿ ಪ್ರಣಾಳಿಕೆಯಲ್ಲಿ ಕರ್ನಾಟಕ ನಂ.1 ಮಾಡುವ ಯೋಜನೆಗಳಿವೆ
– ನಾವು ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದೇವೆ
ಬಳ್ಳಾರಿ: ಬಿ.ಎಸ್.ಯಡಿಯೂರಪ್ಪ (Yediyurappa) ಹಾಗೂ ಬಸವರಾಜ ಬೊಮ್ಮಾಯಿ (Basavaraj Bommai) ಅವರ ನಾಯಕತ್ವದಲ್ಲಿ ಡಬಲ್ ಎಂಜಿನ್ ಸರ್ಕಾರಕ್ಕೆ ಕೇವಲ ಮೂರೂವರೆ ವರ್ಷ ಆಡಳಿತ ಮಾಡುವ ಅವಕಾಶ ಸಿಕ್ಕಿದೆ. ಆದರೆ ಕಾಂಗ್ರೆಸ್ (Congress) ಸರ್ಕಾರ ಇದ್ದಾಗ ಅಭಿವೃದ್ಧಿ ಬದಲಾಗಿ ಭ್ರಷ್ಟಾಚಾರಕ್ಕೆ ಆದ್ಯತೆ ನೀಡಿತ್ತು ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi) ವಾಗ್ದಾಳಿ ನಡೆಸಿದರು.
Advertisement
ಕರ್ನಾಟಕ ಚುನಾವಣೆ (Karnataka Election 2023) ಹಿನ್ನಲೆಯಲ್ಲಿ ಬಳ್ಳಾರಿಯಲ್ಲಿ ಬಿಜೆಪಿ (BJP) ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡು ಮೋದಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಇದ್ದಾಗ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ನೀಡದೆ ಭ್ರಷ್ಟಾಚಾರಕ್ಕೆ ಪ್ರಾಮುಖ್ಯತೆ ಕೊಟ್ಟಿತ್ತು. ಇದಕ್ಕೆ ಕಾರಣವೇನು? ಕಾಂಗ್ರೆಸ್‌ನ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೇ ತಮ್ಮ ಸರ್ಕಾರ ದೆಹಲಿಯಿಂದ 100 ಪೈಸೆ ಕಳುಹಿಸಿದೆ, ಬಡವರಿಗೆ ತಲುಪಿದ್ದು ಕೇವಲ 15 ಪೈಸೆ ಎಂದು ಹೇಳಿದ್ದಾರೆ. ಒಂದು ರೀತಿಯಲ್ಲಿ ಕಾಂಗ್ರೆಸ್ 85% ಕಮಿಷನ್ ಪಡೆದ ಪಕ್ಷ ಎಂದು ಅವರೇ ಒಪ್ಪಿಕೊಂಡಿದ್ದರು ಎಂದು ಟೀಕಿಸಿದರು. ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಆತಂಕವಾದದ ಸಿನಿಮಾ : ಪ್ರಧಾನಿ ನರೇಂದ್ರ ಮೋದಿ
Advertisement
Advertisement
ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ದೇಶದ ವ್ಯವಸ್ಥೆ ಹಾಗೂ ರಾಜಕೀಯವನ್ನು ಭ್ರಷ್ಟಗೊಳಿಸುವ ಕೆಲಸ ಮಾಡಿದೆ. ಕಳೆದ ಕೆಲವು ವರ್ಷಗಳಲ್ಲಿ, ಕಾಂಗ್ರೆಸ್ ಭಾರತದ ರಾಜಕೀಯದಲ್ಲಿ ಮತ್ತೊಂದು ರೋಗವನ್ನು ಸೃಷ್ಟಿಸಿದೆ. ಚುನಾವಣೆ ಗೆಲ್ಲಲು ಕಾಂಗ್ರೆಸ್ ಹಣದ ಹೊಳೆ ಹರಿಸಿದೆ. ಹಣ ಹಂಚಿ ಚುನಾವಣೆ ಗೆದ್ದಿದೆ. ಕಾಂಗ್ರೆಸ್ ಸುಳ್ಳು ಸರ್ವೇ ಮಾಡಿಸಿದೆ. ಈ ಮೂಲಕ ಕಾಂಗ್ರೆಸ್ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
ಕಾಂಗ್ರೆಸ್‌ನ ಪ್ರಣಾಳಿಕೆ ನಿಷೇಧ ಮತ್ತು ತುಷ್ಟೀಕರಣದಿಂದ ಕೂಡಿದೆ. ಅವರ (ಕಾಂಗ್ರೆಸ್) ತುಷ್ಟೀಕರಣದ ರಾಜಕಾರಣವನ್ನು ಕರ್ನಾಟಕದ ಜನತೆ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಸುಳ್ಳು ಗ್ಯಾರಂಟಿ ಕಾರ್ಡ್ ನೀಡಿದೆ. ಕಾಂಗ್ರೆಸ್ ನೀಡಿದ ಘೋಷಣೆ ಪತ್ರದಲ್ಲಿ ಸುಳ್ಳು ಹೇಳಿದೆ. ನಾವು ನೀಡಿದ ಸವಲತ್ತುಗಳನ್ನು ನಿಲ್ಲಿಸುವುದಾಗಿ ಹೇಳಿದೆ. ಬಜರಂಗಬಲಿ ಎಂದು ಹೇಳುವುದನ್ನು ಕಾಂಗ್ರೆಸ್ ಸಹಿಸುತ್ತಿಲ್ಲ. ಕರ್ನಾಟಕವನ್ನು ನಂಬರ್ ಒನ್ ಮಾಡಲು ನಾವು ನಿರ್ಧಾರ ಮಾಡಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿ ಕರ್ನಾಟಕವನ್ನು ನಂಬರ್ ಒನ್ ಮಾಡುವ ಹಲವಾರು ಯೋಜನೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಬಿ.ಎಲ್ ಸಂತೋಷ್ ಬಗ್ಗೆ ಕಾಂಗ್ರೆಸ್‍ಗೆ ನಡುಕ ಶುರುವಾಗಿದೆ: ಪ್ರತಾಪ್ ಸಿಂಹ
ಕರ್ನಾಟಕವನ್ನು ದೇಶದ ನಂಬರ್ ಒನ್ ರಾಜ್ಯವನ್ನಾಗಿ ಮಾಡಲು ಭದ್ರತಾ ವ್ಯವಸ್ಥೆ, ಕಾನೂನು ಮತ್ತು ಸುವ್ಯವಸ್ಥೆ ಅತ್ಯಂತ ಮುಖ್ಯ. ಕರ್ನಾಟಕವು ಭಯೋತ್ಪಾದನೆಯಿಂದ ಮುಕ್ತವಾಗಿರುವುದು ಅಷ್ಟೇ ಮುಖ್ಯ. ಬಿಜೆಪಿ ಯಾವಾಗಲೂ ಭಯೋತ್ಪಾದನೆ ವಿರುದ್ಧ ಕಠಿಣವಾಗಿದೆ. ಆದರೆ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಂಡಾಗಲೆಲ್ಲ ಕಾಂಗ್ರೆಸ್‌ಗೆ ಹೊಟ್ಟೆ ನೋವು ಬರುತ್ತದೆ ಎಂದು ಟೀಕಿಸಿದರು.
ಕಾಂಗ್ರೆಸ್ ನಿಮಗಾಗಿ ಏನನ್ನೂ ಮಾಡಿಲ್ಲ. ನಿಮಗಾಗಿ ಒಂದು ಮನೆ ಕಟ್ಟಿಲ್ಲ, ನಿಮಗಾಗಿ ವಿದ್ಯುತ್ ಕೊಟ್ಟಿಲ್ಲ. ನಿಮ್ಮ ಸೇವೆ ಮಾಡಲು ನಾನು ನಿಮ್ಮ ಮನೆ ಮಗನಾಗಿ ದೆಹಲಿಯಲ್ಲಿ ಇರುವೆ. ನಿಮಗಾಗಿ ಮನೆ, ವಿದ್ಯುತ್, ಮೂಲಭೂತ ಸೌಲಭ್ಯಗಳನ್ನು ನೀಡಲು ನಾನು ಸಿದ್ಧನಿದ್ದೇನೆ. ನಿಮ್ಮ ಪರವಾಗಿ ನಾನು ಕೆಲಸ ಮಾಡಲು 9 ವರ್ಷಗಳಿಂದ ಪ್ರಯಾಸಪಡುತ್ತಿದ್ದೇನೆ. ಆದಿವಾಸಿ ಸಮಾಜಕ್ಕೆ ಕಾಂಗ್ರೆಸ್ ಏನನ್ನೂ ಮಾಡಿಲ್ಲ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆದಿವಾಸಿ ಸಮಾಜದ ದೊಡ್ಡ ಪಾತ್ರ ಇದೆ. ಇದಕ್ಕೆ ಯೋಗದಾನಕ್ಕೆ ಕಾಂಗ್ರೆಸ್ ಬೆಲೆ ನೀಡಿಲ್ಲ. ನಾವು ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದೇವೆ. ಆದರೆ ಇದಕ್ಕೆ ಕಾಂಗ್ರೆಸ್ ವಿರುದ್ಧವಾಗಿತ್ತು. ಆದಿವಾಸಿ ಮಹಿಳೆಯನ್ನು ಸ್ವೀಕಾರ ಮಾಡದ ಕಾಂಗ್ರೆಸ್‌ನ್ನು ನೀವು ಒಪ್ಪುತ್ತೀರಾ? ಆದಿವಾಸಿ ಮಹಿಳೆಯನ್ನು ನಾವು ರಾಷ್ಟ್ರಪತಿ ಚುನಾವಣೆಗೆ ನಿಲ್ಲಿಸಿದರೆ, ಅದಕ್ಕೆ ವಿರುದ್ಧ ಕಾಂಗ್ರೆಸ್ ಮತ್ತೊಬ್ಬರನ್ನು ನಿಲ್ಲಿಸಿ ಆದಿವಾಸಿ ಮಹಿಳೆ ಆಯ್ಕೆಗೆ ವಿರೋಧ ಮಾಡಿತ್ತು ಎಂದು ಟೀಕಿಸಿದರು.
ಸುಡಾನ್‌ನಲ್ಲಿ ರಾಜ್ಯದ ಅನೇಕ ಜನರು ಸಿಲುಕಿದ್ದರು. ರಾಜ್ಯದ ಹಕ್ಕಿಪಿಕ್ಕಿ ಜನರು ಅಲ್ಲಿ ಸಿಲುಕಿಕೊಂಡಿದ್ದರು. ಬೇರೆ ಬೇರೆ ದೇಶದ ಜನರು ಅಲ್ಲಿ ಸಿಲುಕಿಕೊಂಡಿದ್ದಾರೆ. ಬೇರೆ ಯಾವುದೇ ದೇಶದವರು ತಮ್ಮ ಜನರನ್ನು ಕರೆತರಲು ಮುಂದಾಗಿಲ್ಲ. ಆದರೆ ನಮ್ಮ ದೇಶ ‘ಆಪರೇಷನ್ ಕಾವೇರಿ’ ಹೆಸರಿನಲ್ಲಿ ನಮ್ಮ ಜನರನ್ನು ರಕ್ಷಣೆ ಮಾಡಿದೆ. ಕಾಂಗ್ರೆಸ್ ಇದಕ್ಕೂ ನಮ್ಮ ಬೆಂಬಲವಾಗಿ ನಿಲ್ಲಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಲಿಂಗಾಯತ ಅಭ್ಯರ್ಥಿಯನ್ನೇ ಸಿಎಂ ಮಾಡುತ್ತೇವೆಂದು ಹೇಳುವ ಧೈರ್ಯ ಬಿಜೆಪಿಗಿದೆಯಾ?: ಜಗದೀಶ್ ಶೆಟ್ಟರ್
ಸಮಾವೇಶದಲ್ಲಿ ನೆರೆದಿದ್ದ ಜನತೆಗೆ ಪ್ರಧಾನಿ ಮೋದಿ ಕರೆ ನೀಡಿದರು. ನನಗಾಗಿ ಒಂದು ಕೆಲಸ ಮಾಡಿ. ಪ್ರತಿ ಮನೆ ಮನೆಗೆ ಹೋಗಿ, “ಮೋದಿ ಜೀ ಬಳ್ಳಾರಿಗೆ ಬಂದಿದ್ದರು. ಮೋದಿ ನಿಮಗೆ ನಮಸ್ಕಾರ ಹೇಳಿದ್ದಾರೆ ಎಂದು ತಿಳಿಸಿ. ನೀವು ಆಶೀರ್ವಾದ ಮಾಡಿದರೆ ನಾವು ಹೆಚ್ಚು ಹೆಚ್ಚು ಕೆಲಸ ಮಾಡುತ್ತೇವೆ. ಕಮಲದ ಚಿಹ್ನೆಗೆ ಮತ ಹಾಕಿ” ಎಂದು ಕರೆ ನೀಡಿದರು.