– ತವರು ಮನೆಗೆ ಹೋಗದೇ ಇರುವ ಯಾವ ಹೆಣ್ಣು ಇಲ್ಲ – ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ ಮಾಜಿ ಡಿಸಿಎಂ
ಹುಬ್ಬಳ್ಳಿ: ಮಾಜಿ ಸಿಎಂ ಯಡಿಯೂರಪ್ಪ (B S Yediyurappa) ಮತ್ತು ಬಿಜೆಪಿ (BJP) ರಾಜ್ಯಾಧ್ಯಕ್ಷ ವಿಜಯೇಂದ್ರ (B Y Vijayendra) ವಿರುದ್ಧ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (K S Eshwarappa) ಮತ್ತೆ ಗುಡುಗಿದ್ದು, ಪರೋಕ್ಷವಾಗಿ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.
Advertisement
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ತವರು ಮನೆಗೆ ಹೋಗದೆ ಇರುವ ಯಾವ ಹೆಣ್ಣು ಇಲ್ಲ. ಆದರೆ, ತವರು ಮನೆ ಸ್ವಲ್ಪ ಕೆಟ್ಟಿದೆ. ಇದು ಸರಿಯಾಗಬೇಕು. ಅಣ್ಣ ತಮ್ಮ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಇದು ತಂದೆ ತಾಯಿಗೆ ಗೊತ್ತಾಗಬೇಕು. ತವರು ಮನೆಗೆ ಹೋಗಬೇಕು ಅನ್ನೋದು ಹೆಣ್ಣಿನ ಅಪೇಕ್ಷೆ. ಮದುವೆ ಮುಂಜಿಗೆ ಅಣ್ಣ ಕರೆದಿಲ್ಲಾ ಅಂತ ಸಿಟ್ಟು ಇರುತ್ತದೆ. ಯಾವ ಸಂದರ್ಭದಲ್ಲಿಯೂ ಕೊಟ್ಟ ಹೆಣ್ಣು ಕುಲಕ್ಕೆ ಹೊರಗಲ್ಲಾ. ಮನೆಯ ಗೃಹಲಕ್ಷ್ಮಿಯರೇ ಹೆಣ್ಣು ಮಕ್ಕಳು. ಇಂದಲ್ಲಾ ನಾಳೆ ಅವರಿಗೆ ಬುದ್ಧಿ ಬರುತ್ತೆ, ಜನ ಬುದ್ಧಿ ಕಲಿಸುತ್ತಾರೆ ಎಂದರು. ಇದನ್ನೂ ಓದಿ: Paralympics 2024 | ಭಾರತೀಯ ಕ್ರೀಡಾಪಟುಗಳನ್ನು ಶ್ಲಾಘಿಸಿದ ಮೋದಿ
Advertisement
Advertisement
ಬುದ್ಧಿ ಕಲಿಸೋ ಪ್ರಯತ್ನ ನಾನು ಆರಂಭ ಮಾಡಿದ್ದೆ. ಈಗ ಅದನ್ನು ಯತ್ನಾಳ್ ಮುಂದುವರಿಸಿದ್ದಾರೆ. ಯಡಿಯೂರಪ್ಪ ಮತ್ತು ಅವರ ಮಕ್ಕಳು ಬಿಜೆಪಿಗೆ ದ್ರೋಹ ಮಾಡಿದರು. ನಮ್ಮ ಭಿಕ್ಷೆಯಿಂದ ವಿಜಯೇಂದ್ರ ಗೆದ್ದಿದ್ದು ಎಂದು ಡಿಕೆಶಿ ಹೇಳುತ್ತಾರೆ. ಈ ಮೂಲಕ ಕಾಂಗ್ರೆಸ್ (Congress) ಕಾರ್ಯಕರ್ತರಿಗೆ ದ್ರೋಹ ಮಾಡಿದರು. ಈ ಹೊಂದಾಣಿಕೆ ರಾಜಕೀಯ ಬೇಡ ಅನ್ನೋ ಕಾರಣಕ್ಕೆ ನಾನು ಚುನಾವಣಾಗೆ ಸ್ಪರ್ಧೆ ಮಾಡಿದೆ. ಇದು ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ಅರ್ಥ ಆಗಬೇಕು. ಕುಟುಂಬ ರಾಜಕಾರಣ ಮುಕ್ತ ಬಿಜೆಪಿ ಆಗಬೇಕು. ಸ್ವಜನ ಪಕ್ಷಪಾತ ಕೊನೆಯಾಗಬೇಕು. ಯಡಿಯೂರಪ್ಪ ತನ್ನ ಸುತ್ತಲೂ ಇರುವವರಿಗೆ ಹೆಚ್ಚಿನ ಅವಕಾಶ ನೀಡುತ್ತಾರೆ. ಹಿಂದುತ್ವವಾದಿಗಳಾದ ಯತ್ನಾಳ್, ಸಿ.ಟಿ.ರವಿ, ಅನಂತ್ ಕುಮಾರ್, ಪ್ರತಾಪ್ ಸಿಂಹ ಬೇಡ. ಇದರ ವಿರುದ್ಧ ನನ್ನ ಹೋರಾಟ. ಇದರಿಂದ ನನಗೆ ವೈಯಕ್ತಿಕ ತೊಂದರೆ ಆದರೂ ಪರವಾಗಿಲ್ಲ ಎಂದು ಗುಡುಗಿದರು. ಇದನ್ನೂ ಓದಿ: ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ನಿಧನ
Advertisement
ನನಗೆ ತೊಂದರೆ ಆಗುತ್ತೆ ಎಂದು ಮೊದಲೇ ಗೊತ್ತಿತ್ತು. ಈಗ ತೊಂದರೆ ಆಗುತ್ತಿದೆ, ಆಗಲಿ ಅನುಭವಿಸುತ್ತೇನೆ. ಯಡಿಯೂರಪ್ಪ ಬಿಟ್ಟರೆ ಬಿಜೆಪಿ ಇಲ್ಲ ಎಂದು ಬಿಂಬಿಸುತ್ತಿದ್ದಾರೆ. ಇದು ಹೋಗಬೇಕು ಅನ್ನೋದಕ್ಕೆ ನನ್ನ ಹೋರಾಟ. ಬಿಜೆಪಿ ಯಾರೋ ನಾಲ್ಕು ಜನ ಕಟ್ಟಿದ ಪಕ್ಷ ಅಲ್ಲಾ. ಲಕ್ಷಾಂತರ ಜನ ರಕ್ತವನ್ನು ಬೆವರಿನ ರೂಪದಲ್ಲಿ ಸುರಿಸಿ ಕಟ್ಟಿರುವ ಪಕ್ಷ ಎಂದರು.
ರಾಯಣ್ಣ ಬ್ರಿಗೇಡ್‌ಗೆ ಮರು ಚಾಲನೆ ಕುರಿತು ಬೆಂಬಲಿಗರ ಜೊತೆ ಚರ್ಚೆ ವಿಚಾರವಾಗಿ, ರಾಯಣ್ಣ ಬ್ರಿಗೇಡ್ ಮತ್ತೆ ಆರಂಭ ಮಾಡಿ ಎಂದು ಹೇಳುತ್ತಾ ಇದ್ದಾರೆ. ಇವತ್ತು ಬೆಂಬಲಿಗರ ಜೊತೆ ಚರ್ಚೆ ಮಾಡುತ್ತೇನೆ. ಇನ್ನೂ ಯಾವುದೇ ತೀರ್ಮಾನ ಆಗಿಲ್ಲ. ಒಂದೂವರೆ ವರ್ಷ ಕಾಂಗ್ರೆಸ್ ಸರ್ಕಾರ ಇದ್ದಿದ್ದೇ ನನಗೆ ಆಶ್ಚರ್ಯ. ಸಿದ್ದರಾಮಯ್ಯ ಅವರ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲಾ ಅಂದರು. ಈಗ ಅವರು ಇಳಿದರೆ ನಾವು ಆಗುತ್ತೇವೆ ಅಂತಾರೆ. ಹಾಗಾದ್ರೆ ಒಪ್ಪಿಕೊಂಡಂತೆ ಅಲ್ವಾ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ನಿಮ್ಮಪ್ಪನ ಕೈಲೂ ನನ್ನ ಟಚ್ ಮಾಡಕ್ಕಾಗಲ್ಲ: ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ