ಬೆಂಗಳೂರು: ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ಮತ ಯಾಚನೆಗೂ ಮುನ್ನವೇ ಸದನದಿಂದ ಹೊರ ನಡೆಯುವ ಮೂಲಕ ಇಂದು ಕೆಟ್ಟ ಸಂಸದೀಯ ವ್ಯವಹಾರಕ್ಕೆ ಕೈ ಹಾಕಿದ್ದಾರೆಂದು ಕಾಂಗ್ರೆಸ್ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ವಿಶ್ವಾಸಮತ ಯಾಚನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಯಡಿಯೂರಪ್ಪನವರು ಬಂದ್‍ಗೆ ಕರೆ ನೀಡುತ್ತೇವೆ ಎಂದು ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆ. ಯಾರು ಈ ಬಂದ್‍ಗೆ ಬೆಂಬಲ ನೀಡಬಾರದು. ವಿಶ್ವಾಸಮತವನ್ನು ಸಾಬೀತು ಮಾಡಿದ್ದು, ಸಮ್ಮಿಶ್ರ ಸರ್ಕಾರ ಈಗ ಅಧಿಕೃತವಾಗಿ ಆರಂಭಗೊಂಡಿದೆ ಎಂದು ತಿಳಿಸಿದ್ರು.
Advertisement
ಸದನದಲ್ಲಿ ಆಪರೇಷನ್ ಕಮಲಕ್ಕೆ ನನ್ನಿಂದ ತೊಂದರೆ ಆಯಿತೆಂದು ಹರಿಹಾಯ್ದರು. ಸಮ್ಮಿಶ್ರ ಸರ್ಕಾರ ರಚನೆ ಕೇವಲ ನನ್ನಿಂದ ಮಾತ್ರ ರಚಿತವಾಗಿಲ್ಲ. ನಮ್ಮ ಎಲ್ಲ ಶಾಸಕರ ಒಗ್ಗಟ್ಟಿನಿಂದಾಗಿ ಇಂದು ಸಮ್ಮಿಶ್ರ ಸರ್ಕಾರ ರಚಿಸಿದ್ದೇವೆ. ಇನ್ನು ಸಂಪುಟ ವಿಸ್ತರಣೆಯನ್ನು ಹೈಕಮಾಂಡ್ ನಿರ್ಧರಿಸುತ್ತದೆ ಅಂತಾ ಸ್ಪಷ್ಟಪಡಿಸಿದ್ರು.