ಬೆಂಗಳೂರು: ಸಮ್ಮಿಶ್ರ ಸರ್ಕಾರ ಶನಿವಾರ ಎಲ್ಲ ನಾಯಕರಿಗೆ ಸರ್ಕಾರಿ ನಿವಾಸಗಳನ್ನು ಹಂಚಿಕೆ ಮಾಡಿತ್ತು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ರೇಸ್ ಕೋರ್ಸ್ ರಸ್ತೆಯ ನಂಬರ್ 4 ನಿವಾಸವನ್ನು ಹಂಚಿಕೆ ಮಾಡಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ಯಡಿಯೂರಪ್ಪ ಕೇಳಿರುವ ನಿವಾಸ ಬೇರೆ ಬಂಗಲೆಯನ್ನು ನೀಡಲಾಗಿದೆ. ನನಗೆ ಯಾವುದೇ ಸರ್ಕಾರಿ ಬಂಗಲೆ ಬೇಡ ನಾನು ಸ್ವಂತ ಡಾಲರ್ಸ್ ಕಾಲೋನಿ ಧವಳಗಿರಿ ಮನೆಯಲ್ಲಿಯೇ ವಾಸವಾಗಿರುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
ಯಡಿಯೂರಪ್ಪ ಅವರು ರೇಸ್ ಕೋರ್ಸ್ ನ ನಂಬರ್ 2 ನಿವಾಸವನ್ನು ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿದ್ದರು. ಆದರೆ ಸರ್ಕಾರ ನಂಬರ್ 2 ನಿವಾಸವನ್ನು ಸಚಿವ ಸಾ.ರಾ.ಮಹೇಶ್‍ಗೆ ನೀಡಿ, ಯಡಿಯೂರಪ್ಪ ನಂಬರ್ 4 ನಿವಾಸ ನೀಡಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ನಂಬರ್ 4 ನಿವಾಸಕ್ಕೆ ಹೋಗಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಬಂಗಲೆಗಳಲ್ಲಿ ಇರಲೇಬೇಡಿ- ಮಕ್ಕಳಿಬ್ಬರಿಗೆ ದೇವೇಗೌಡರ ಸಲಹೆ
Advertisement
Advertisement
ಲಕ್ಕಿ ಬಂಗಲೆ: ನಂಬರ್ 2 ನಿವಾಸ ಲಕ್ಕಿ ಬಂಗಲೆ ಎಂದು ಕರೆಸಿಕೊಳ್ಳುತ್ತದೆ. ಈ ಹಿಂದೆ 2004ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗ ಯಡಿಯೂರಪ್ಪ ಇದೇ ನಿವಾಸದಲ್ಲಿ ವಾಸವಾಗಿದ್ದರು. ನಂತರ ಇದೇ ಮನೆಯಲ್ಲಿಯೇ ಇದ್ದಾಗ ಉಪ ಮುಖ್ಯಮಂತ್ರಿ ಮತ್ತು ಸಿಎಂ ಸ್ಥಾನಕ್ಕೆ ಏರಿದ್ದರು. ಈ ಹಿನ್ನೆಲೆಯಲ್ಲಿ ನಂಬರ್ 2 ನಿವಾಸ ರೇಸ್‍ವ್ಯೂವ್ ಕಾಟೇಜ್-2 ಅಂತನೇ ಕರೆಸಿಕೊಳ್ಳುತ್ತದೆ. ಇದನ್ನೂ ಓದಿ: ಅದೃಷ್ಟದ ಮನೆ ತೊರೆಯಲು ಮುಂದಾದ ಸಿದ್ದರಾಮಯ್ಯ!
Advertisement
ಸಿದ್ದರಾಮಯ್ಯರ ಸರ್ಕಾರದಲ್ಲಿ ಮಾಜಿ ಸಚಿವ ರಮಾನಾಥ್ ರೈ ವಾಸವಾಗಿದ್ದರು. ಸಮ್ಮಿಶ್ರ ಸರ್ಕಾರದ ನಾಯಕರು ಪ್ರತಿಯೊಂದಕ್ಕೂ ಜೋತಿಷ್ಯವನ್ನು ಅವಲಂಭಿಸಿರುವ ಕಾರಣ ಸಹಜವಾಗಿಯೇ ಯಡಿಯೂರಪ್ಪರಿಗೆ ಅಧೃಷ್ಟದ ಮನೆ ನೀಡಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.