ಬೆಂಗಳೂರು: ಸಿಡಿ ಕೇಸ್ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಎಸಿಬಿಯೇ ಶಾಕ್ ಕೊಟ್ಟ ವಿಚಾರವೊಂದು ಬೆಳಕಿಗೆ ಬಂದಿದೆ.
ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್‍ಕುಮಾರ್ ಅವರು ಹೈಕಮಾಂಡ್‍ಗೆ ಕಪ್ಪ ಸಲ್ಲಿಸಿರುವ ಕುರಿತು ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಮತ್ತು ಆಡಿಯೋ ಸಂಭಾಷಣೆ ಕೇಸ್ ತೆಗೆದುಕೊಳ್ಳೊಲ್ಲ ಅಂತ ಎಸಿಬಿ ಹೇಳಿರುವುದಾಗಿ ತಿಳಿದುಬಂದಿದೆ.
Advertisement
ಪ್ರಕರಣ ತೆಗೆದುಕೊಳ್ಳುವ ಮುನ್ನ ಎಸಿಬಿ ಕಾನೂನು ತಜ್ಞರ ಸಲಹೆ ಪಡೆದಿದೆ. ಈ ವೇಳೆ ಪ್ರಕರಣವನ್ನು ತೆಗೆದುಕೊಂಡ್ರೆ ತನಿಖೆ ನಡೆಸೋದಕ್ಕೆ ಸಾಕ್ಷಿಗಳ ಕೊರತೆ ಇರುವುದು ಬೆಳಕಿಗೆ ಬಂದಿದೆ. ಹೀಗಾಗಿ ಈ ಕೇಸ್ ತೆಗೆದುಕೊಳ್ಳೊದಕ್ಕೆ ಆಗೋಲ್ಲ. ಕೇಸ್ ತೆಗೆದುಕೊಂಡ್ರೆ ನಮಗೆ ಕೆಟ್ಟ ಹೆಸರು ಬರುತ್ತೆ ಅಂತ ಹೇಳಿದೆ.
Advertisement
ಇದನ್ನೂ ಓದಿ: ಹೈಕಮಾಂಡ್‍ಗೆ ಕಪ್ಪ ವಿವಾದ – ಬಿಎಸ್‍ವೈ, ಅನಂತ್ ವಿರುದ್ಧ ಚಾರ್ಜ್‍ಶೀಟ್ ಸಾಧ್ಯತೆ
Advertisement
ಹಣದ ಬಗ್ಗೆ ಮಾತನಾಡಿದ್ದಾರೆ ಹೊರತು, ಹಣ ಕೊಡೋದಾಗ್ಲಿ ಪಡೆದುಕೊಳ್ಳೊದಾಗ್ಲಿ ಇಲ್ಲ. ಸೈಬರ್ ಕ್ರೈಂ ಪೊಲೀಸರು ಧ್ವನಿಯ ಬಗ್ಗೆ ಮಾತ್ರ ತನಿಖೆ ನಡೆಸಿದ್ದಾರೆ. ಬೇರೆ ಯಾವ ವಿಚಾರಕ್ಕೂ ತನಿಖೆಯಾಗಿಲ್ಲ. ಪ್ರಕರಣ ತೆಗೆದುಕೊಂಡ್ರೆ ಯಾವುದೇ ಸಾಕ್ಷಿ ಸಿಕ್ಕೊಲ್ಲ ಹೆಸರು ಹಾಳಾಗುತ್ತೆ ಅನ್ನೋ ಕಾನೂನು ತಜ್ಞರಿಂದ ಸಲಹೆ ಪಡೆದ ಬಳಿಕ ಎಸಿಬಿ ಸರ್ಕಾರಕ್ಕೆ ಉಲ್ಟಾ ಹೊಡೆದಿದೆ ಎಂಬುವುದಾಗಿ ಮೂಲಗಳಿಂದ ತಿಳಿದುಬಂದಿದೆ.
Advertisement
https://www.youtube.com/watch?v=t_IzZbNc9OM