ಬೆಳಗಾವಿ: ಏಪ್ರಿಲ್ 10ರ ಒಳಗೆ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರಿಗೆ ನೀಡಿದ ಉಚ್ಚಾಟನೆ ಆದೇಶವನ್ನು ಬಿಜೆಪಿ (BJP) ವಾಪಸ್ ಪಡೆಯಬೇಕು ಎಂದು ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ (Jaya Mruthyunjaya Swamiji) ಡೆಡ್‌ಲೈನ್ ನೀಡಿದ್ದಾರೆ.
ಉಚ್ಚಾಟನೆ ಖಂಡಿಸಿ ಪಂಚಮಸಾಲಿ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು, ಉಚ್ಚಾಟನೆ ವಾಪಸ್ ಪಡೆಯದಿದ್ದರೆ ಏಪ್ರಿಲ್ 13 ರಂದು ಬೆಳಗಾವಿಯಲ್ಲಿ ದೊಡ್ಡ ಪ್ರತಿಭಟನೆ ನಡೆಸಿ ಶಕ್ತಿ ಪ್ರದರ್ಶನ ಮಾಡುತ್ತೇವೆ ಗುಡುಗಿದರು . ಇದನ್ನೂ ಓದಿ: ಪಕ್ಷಕ್ಕೆ ದುಡಿದ ಯತ್ನಾಳ್ ಮತ್ತೆ ಬಿಜೆಪಿಗೆ ಬರುತ್ತಾರೆ: ರಮೇಶ್ ಜಾರಕಿಹೊಳಿ
ಈ ಸಭೆಗೆ ಎಲ್ಲಾ ಹಿಂದೂ ಪರ ಕಾರ್ಯಕರ್ತರು, ಸಮಾಜದ ಮುಖಂಡರು ಬರಬೇಕು. ಸಮಾಜದ ಶಾಸಕರು, ಸಂಸದರು ಕೂಡ ಸತ್ಯಾಂಶ ಹೇಳುವ ಕೆಲಸ ಮಾಡಬೇಕು. ಬೊಮ್ಮಾಯಿ, ಬೆಲ್ಲದ್, ರಮೇಶ್ ಜಾರಕಿಹೊಳಿ ಅವರು ನೈತಿಕ ಬೆಂಬಲ ನೀಡಿದ್ದಾರೆ. ಸಮಾಜದ ಶಾಸಕರು ಒತ್ತಡ ಹಾಕದಿದ್ದರೆ ನಿಮ್ಮ ಮೇಲೆ ಸಮಾಜ ಬೇಸರವಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಯತ್ನಾಳ್ ಕೊಟ್ಟಿದ್ದ ಉತ್ತರ ಪತ್ರ ಬಹಿರಂಗ – ಯಡಿಯೂರಪ್ಪ, ವಿಜಯೇಂದ್ರ ಮೇಲೆ ಚಾರ್ಜ್‌ಶೀಟ್
ಅನೇಕರು ಸಮಾಜದ ಹೆಸರು ಹೇಳಿ ಅಧಿಕಾರ ಬಂದ ಮೇಲೆ ಕೈಕೊಟ್ಟರು. ಯತ್ನಾಳ್ ಅವರು ಮೀಸಲಾತಿ ಹೋರಾಟ ಕೈ ಬಿಡಲಿಲ್ಲ. ಹೀಗಾಗಿ ಅವರ ಬೆನ್ನಿಗೆ ಸಮಾಜ ನಿಲ್ಲಬೇಕಿದೆ. ವರಿಷ್ಠರು ನಮ್ಮನ್ನ ಮಾತುಕತೆ ಕರೆದರೆ ನಾವು ಹೋಗಲು ಸಿದ್ದರಿದ್ದೇವೆ ಎಂದು ತಿಳಿಸಿದರು.