ಕೋಲಾರ: ಯತ್ನಾಳ್ (Basangouda Patil Yatnal) ಒಳ್ಳೆಯ ನಾಯಕ ಅಂತ ನಾವೆಲ್ಲ ತಿಳಿದಿದ್ದೆವು. ಅವರೊಬ್ಬರೇ ಹಿಂದುತ್ವದ ನಾಯಕರಲ್ಲ, ಸಾವಿರಾರು ವರ್ಷಗಳಿಂದ ಹಿಂದುತ್ವದ ನಾಯಕರಿದ್ದಾರೆ ಎಂದು ಕೋಲಾರ ಮಾಜಿ ಸಂಸದ ಎಸ್ ಮುನಿಸ್ವಾಮಿ (S Muniswamy), ಯತ್ನಾಳ್‌ಗೆ ಟಾಂಗ್ ಕೊಟ್ಟಿದ್ದಾರೆ.
ಕೋಲಾರದ (Kolar) ಪತ್ರಕರ್ತರ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಹಿಂದೂ ಹುಲಿ ಎಂದು ಅವರು ಹೇಳಿಕೊಳ್ಳುತ್ತಿದ್ದರು. ಪಕ್ಷದಲ್ಲಿ ಲಿಮಿಟ್ ಮೀರಿದ್ದಾರೆ ಎಂದು ಅವರನ್ನು ಅಮಾನತು ಮಾಡಲಾಗಿದೆ. ವಯಸ್ಸಿಗೆ ಬೆಲೆ ಇದೆ, ಅದನ್ನು ಯತ್ನಾಳ್ ಉಳಿಸಿಕೊಳ್ಳಲಿ. ನೂತನ ಪಕ್ಷ ಕಟ್ಟಿರೋರನ್ನು ರಾಜ್ಯದಲ್ಲಿ ಸುಮಾರು ಜನರನ್ನು ನೋಡಿದ್ದೇವೆ. ಯತ್ನಾಳ್‌ಗೆ ಗೌರವ ಕೊಡುತ್ತೇವೆ. ಎಲ್ಲದಕ್ಕೂ ಒಂದು ತಾಳ್ಮೆ ಇದೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ʻಕೈʼ ಶಾಸಕ ತುರವಿಹಾಳ ಪುತ್ರ, ಸಹೋದರನಿಂದ ಮೊಲ ಬೇಟೆ, ಮಾರಕಾಸ್ರ್ತಹಿಡಿದು ಮೆರವಣಿಗೆ
ನಾವೇನು ಪಾಕಿಸ್ತಾನದಿಂದ ಬಂದಿರುವ ನಾಯಕರಾ? ಯತ್ನಾಳ್ ಮಾತನಾಡುವಾಗ ಇತಿಮಿತಿ ಇರಲಿ. ರಾಜ್ಯದ ಬಹುಸಂಖ್ಯಾತ ಜನರು ಬಿಜೆಪಿ ಜೊತೆ ಇದ್ದಾರೆ. ಕಾಂಗ್ರೆಸ್‌ನವರಿಗೆ ದಿನಕ್ಕೊಂದು ಅಸ್ತ್ರ ಕೊಡುತ್ತಿದ್ದಾರೆ ಎಂದು ಯತ್ನಾಳ್ ವಿರುದ್ಧ ಜನರು ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಯತ್ನಾಳ್ ಮಾತಾಡಲಿ ಆಗ ಮೆಚ್ಚುತ್ತೇವೆ. ಯತ್ನಾಳ್ ಒಬ್ಬರೇ ಅಲ್ಲ ಹಿಂದುತ್ವದ ನಾಯಕ, ಜನರು ನಮ್ಮನ್ನೂ ಹಿಂದೂ ಫೈರ್ ಬ್ರ್ಯಾಂಡ್ ಎಂದು ಕರೆಯುತ್ತಾರೆ ಎಂದರು. ಇದನ್ನೂ ಓದಿ: ಚಿತ್ರದುರ್ಗ| ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಇಬ್ಬರು ಸಾವು, ಮೂವರಿಗೆ ಗಾಯ