– ಜನರಿಗೆ ಫ್ರೀ ಕೊಟ್ಟು, ಮದ್ಯ ಮಾರಿ ಹಣ ವಾಪಸ್ ತೆಗೆದುಕೊಳ್ತಿದ್ದೀರಿ
ಯಾದಗಿರಿ: ಯಾವ ಡಿಕೆ ಶಿವಕುಮಾರ್ ಗೂ (DK Shivakumar), ಶಾಮನೂರುಗೂ ಅಂಜಬ್ಯಾಡ್ರಿ ಎನ್ನುತ್ತಾ ಸಿಎಂ ಸಿದ್ದರಾಮಯ್ಯ ಪರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಬ್ಯಾಟ್ ಬೀಸಿದ್ದಾರೆ.
ಯಾದಗಿರಿಯ (Yadagiri) ಶಹಾಪುರದಲ್ಲಿ ಮಾತನಾಡಿದ ಶಾಸಕರು, ಶಾಮನೂರು ಶಿವಶಂಕರಪ್ಪ ಲಿಂಗಾಯತ ಸಿಎಂ ಹೇಳಿಕೆ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯಿಸಿದರು. ಲಿಂಗಾಯತ, ಕುರಬ ಇದು ಅಲ್ವೇ ಅಲ್ಲ ಇದು ಮೂರ್ಖತನದ ಹೇಳಿಕೆ. ನಾವು ಜಾತಿ ಮೇಲೆ ಮಾತನಾಡುವುದಿಲ್ಲ. ಜಾತಿ ಜನಾಂಗದ ಮೇಲೆ ಯಾರೂ ಮುಖ್ಯಮಂತ್ರಿ ಆಗಲ್ಲ. ಯಾರು ಸಮರ್ಥ ಆಡಳಿತ ಕೊಡ್ತಾರೋ ಅವರು ಸಿಎಂ ಆಗಬೇಕು. ಆದರೆ ಕಾಂಗ್ರೆಸ್‍ನವರೇ ಸಿದ್ದರಾಮಯ್ಯನವರನ್ನು ಸಿಎಂ ಕುರ್ಚಿಯಿಂದ ಇಳಿಸಲು ಕುತಂತ್ರ ಮಾಡುತ್ತಿದ್ದಾರೆ ಎಂದು ಹೇಳಿದ್ರು.
ಸಿದ್ದರಾಮಯ್ಯನವರಿಗೆ (Siddaramaiah) ಆಡಳಿತ ಮಾಡಲು ಕಾಂಗ್ರೆಸ್‍ನವರು ಬಿಡುತ್ತಿಲ್ಲ. ಒಬ್ಬೊಬ್ಬ ಶಾಸಕರು ತಮ್ಮ ಅಸಮಾಧಾನವನ್ನು ಸ್ಫೋಟ ಮಾಡುತ್ತಿದ್ದಾರೆ. ಹೀಗಾಗಿ ಆಡಳಿತ ಮಾಡಲಿಕ್ಕೆ ಆಗುತ್ತಿಲ್ಲ, ಇದರಿಂದ ತಮ್ಮದೇ ಹಾದಿಯಲ್ಲಿ ಸಿದ್ದರಾಮಯ್ಯನವರು ಹೋಗ್ತಿದ್ದಾರೆ. 135 ಶಾಸಕರ ಬೆಂಬಲವನ್ನ ಕರ್ನಾಟಕದ ಜನ ಸಿದ್ದರಾಮಯ್ಯನವರಿಗೆ ನೀಡಿ, ಆಶೀರ್ವಾದ ಮಾಡಿದ್ದಾರೆ. ಅದಕ್ಕೆ ಒಳ್ಳೆಯ ಆಡಳಿತ ಕೊಟ್ಟು ಧೈರ್ಯವಾಗಿ ನಿರ್ಣಯ ತೆಗೆದುಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಪರ ಯತ್ನಾಳ್ ಬ್ಯಾಟ್ ಬೀಸಿದ್ರು. ಇದನ್ನೂ ಓದಿ: ರಾಗಿಗುಡ್ಡದ ಮಹಿಳೆಯರು ಮಾತನಾಡಿದ್ದು ನೋಡಿ ಆತಂಕವಾಗಿದೆ: ಕೋಟ ಶ್ರೀನಿವಾಸ ಪೂಜಾರಿ
ಮದ್ಯ ಮಾರಿ ಹಣ ವಾಪಸ್ ತೆಗೆದುಕೊಳ್ತಿದ್ದೀರಿ: ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ದುಡ್ಡೆ ಇಲ್ಲ. ಹೀಗಾಗಿ ರಾಜ್ಯದಲ್ಲಿ ಸಾವಿರ ಮದ್ಯದಂಗಡಿ ಓಪನ್ ಮಾಡೋದಕ್ಕೆ ಸರ್ಕಾರ ಮುಂದಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಶಾಸಕ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಗ್ಯಾರಂಟಿಗಳನ್ನ ಆರು ತಿಂಗಳು ನಡೆಸಲು 56 ಕೋಟಿ ಹಣಬೇಕು. ಜನರಿಗೆ ಅಕ್ಕಿ ಫ್ರೀ, ಬಸ್ ಫ್ರೀ ಕೊಡ್ತೀರಿ, ಮದ್ಯ ಮಾರಿ ಹಣ ವಾಪಸ್ ತೆಗೆದುಕೊಳ್ತೀರಿ. ಹೀಗಾಗಿ ಹಳ್ಳಿ-ಹಳ್ಳಿಗಳಲ್ಲಿ ಮದ್ಯದಂಗಡಿ ತೆಗೆದು ರಾಜ್ಯದ ಸಂಸ್ಕೃತಿ ಹಾಳು ಮಾಡ್ತಾಯಿದ್ದೀರಿ. ಈ ನಿರ್ಧಾರಕ್ಕೆ ನನ್ನ ಸಂಪೂರ್ಣ ವಿರೋಧವಿದೆ ಎಂದು ಹೇಳಿದ್ರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]